ಎಲ್ಲ ಪುಟಗಳು

ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
January 12, 2007
(ಕರ್ನಾಟಕ ಕುಲಪುರೋಹಿತ ಶ್ರೀ ಆಲೂರು ವೆಂಕಟರಾಯರ 'ನನ್ನ ಜೀವನಸ್ಮೃತಿಗಳು' ಪುಸ್ತಕದಿಂದ ಆಯ್ದ ಕೆಲವು ಕುತೂಹಲಕರ ಭಾಗಗಳು ) ನನ್ನಂತೆಯೇ ನನ್ನ ಸರಿ ಜೋಡಿಯ ಅನೇಕ ವಿದ್ಯಾರ್ಥಿಗಳು ಇದ್ದರು . ಅವರಲ್ಲಿ ಯಾರೂ ಆಗಿನ ಕಾಲಕ್ಕೆ ನನ್ನಂತೆ ಕರ್ನಾಟಕದ ಸೇವೆಯನ್ನು ಮಾಡುವದಕ್ಕೆ ಧೃಡ ಸಂಕಲ್ಪ ಮಾಡಿ ಮುಂದೆ ಬರಲಿಲ್ಲ . ಅದಕ್ಕೇನು ಕಾರಣ ? ನನ್ನ ಮೇಲೆಯೇ ಗೃಹ ಸಂಸ್ಕಾರಗಳೂ ಬಾಹ್ಯಸಂಸ್ಕಾರಗಳೂ ಅಷ್ಟೇಕೆ ಬಲವಾದ ಪರಿಣಾಮವನ್ನುಂಟುಮಾಡಿದವು? ಎಂಬ ಪ್ರಶ್ನೆಗಳಿಗೆ ಉತ್ತರಕೊಡುವದು ಕಠಿಣ. ಆ ಸಂಸ್ಕಾರ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
January 12, 2007
ಎರಿಕ್ ಹಾಫರ್ ನ ಮಾತಿನಲ್ಲಿ - ಮನುಷ್ಯ ದೇವರ ಒಂದು ಅಪೂರ್ಣ ಕೃತಿ . ಹಾಗೂ ಆತನ ಪ್ರತಿಯೊಂದು ಹೋರಾಟ ದೇವರು ಅರ್ಧಕ್ಕೇ ಬಿಟ್ಟ ಕೆಲಸವನ್ನು ಪೂರ್ತಿಗೊಳಿಸುವ ಪ್ರಯತ್ನವಾಗಿದೆ ಖಲೀಲ್ ಗಿಬ್ರಾನ್ ಹೇಳಿದ್ದು : ಬದುಕಿನ ಉದ್ದೇಶ ಬದುಕಿನ ರಹಸ್ಯವನ್ನು ಭೇದಿಸುವದಾಗಿದೆ. ಭಾವೋನ್ಮಾದ ಏಕಮಾತ್ರ ದಾರಿ. ಈ ಹೇಳಿಕೆಗಳು ಅಮೃತಾ ಪ್ರೀತಮ್ ರ 'ರಸೀದಿ ತಿಕೀಟು' ಎಂಬ ಆತ್ಮಕಥನವನ್ನು ಓದುವಾಗ ಸಿಕ್ಕವು. ಭಾವನಾತ್ಮಕವಾಗಿ ಕಾವ್ಯಮಯ ಶೈಲಿಯಲ್ಲಿ ಹೃದಯ ತಟ್ಟುವಂತೆ ಬರೆಯುವ ಅವರ ಇನ್ನೆರಡು ಕೃತಿಗಳನ್ನೂ…
ವಿಧ: ಚರ್ಚೆಯ ವಿಷಯ
January 12, 2007
ಅಲ್ಲ, ಇರ್ಫಾನ್ ಎಂಬ ಲಷ್ಕರೇ ತೋಯ್ಬ ಉಗ್ರಗಾಮಿಯನ್ನು ಹಿಡಿದಾದ ಮೇಲೆ ಅವರ ಯೋಜನೆಗಳು ಹಾಗಿತ್ತು ಹೀಗಿತ್ತು, ಅಂಥಾ ಕನೆಕ್ಷನ್ ಇಟ್ಕಂಡಿದ್ದ, ಇಂಥಾ ಪ್ಲಾನ್ ಹಾಕಿದ್ದ ಅಂತ ನಮ್ಮ ಸ್ಥಳೀಯ ಪೇಪರ್ ಮತ್ತು ಟೀವಿ ಚಾನೆಲ್ಲುಗಳಲ್ಲಿ ಸುದ್ದಿಯೋ ಸುದ್ದಿ, ರಾಷ್ಟ್ರೀಯ ಚಲನಚಿತ್ರ ಮಾಧ್ಯಮದವರು ಇದನ್ನೇನು ತೋರಿಸುತ್ತಲೇ ಇಲ್ಲವಲ್ಲ, ಏನು ಕರ್ನಾಟಕದಲ್ಲಿ ಭಯೋತ್ಪಾದಕರು ಬಾಂಬ್ ಎಸೆದ ಮೇಲೇ ವರದಿ ಮಾಡೋದು ಅಂತ ನಿರ್ಧರಿಸಿದ್ದಾರೋ ಹೇಗೆ ಇವರು? ಏನು ನಾವು ಉಗ್ರಗಾಮಿಯನ್ನು ಹಿಡಿದ್ರೆ ಅದು ರಾಷ್ಟ್ರೀಯ…
ಲೇಖಕರು: Yamini
ವಿಧ: ಚರ್ಚೆಯ ವಿಷಯ
January 11, 2007
ಈ ವಿಷಯ ಬರೆಯಲು ಹೊರಟಾಗ ನನಗೆ ಬಂದ ಮೊದಲ ಸಂಶಯ ಇದನ್ನು ಯಾವ ವರ್ಗದಲ್ಲಿ ಸೇರಿಸಬೇಕು ಎಂಬುದು. ರಾಜಕೀಯವೇ ಸೂಕ್ತ ಎಂದು ಅದಕ್ಕೆ ಸೇರಿಸಿದ್ದೇನೆ. ಇತ್ತೀಚೆಗೆ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ವಿಶ್ವೇಶ್ವರ ಭಟ್ ತಮ್ಮ ನೂರೆಂಟು ಮಾತು ಅಂಕಣದಲ್ಲಿ ಕರ್ನಾಟಕದ ಮಠಗಳ ಬಗ್ಗೆ ಬರೆದಿದ್ದರು. ಈ ಮಠಗಳು ಶಿಕ್ಷಣ ಕ್ಷೇತ್ರಕ್ಕೆ ನೀಡುತ್ತಿರುವ ಕಾಣಿಕೆಗಳು ಇತ್ಯಾದಿಗಳನ್ನು ವಿವರಿಸಿದ್ದ ಲೇಖನದಲ್ಲಿ ಮಠಗಳ ಸಾಧನೆಗಳನ್ನು ಪಟ್ಟಿ ಮಾಡಲಾಗಿತ್ತು. ಈ ಲೇಖನ ಓದಿದಾಗ ಕೆಲಕಾಲದ ಹಿಂದೆ ನಮ್ಮ ಕಾಲೇಜಿನಲ್ಲಿ…
ಲೇಖಕರು: venkatesh
ವಿಧ: Basic page
January 11, 2007
ರೆವೆರೆಂಡ್ ಎಫ್. ಕಿಟ್ಟೆಲ್ ರ ಕನ್ನಡ- ಇಂಗ್ಲೀಷ್ ನಿಘಂಟಿನಷ್ಟು ಅಪೂರ್ವವಾದದ್ದು ಕನ್ನಡದಲ್ಲಿ ಇನ್ನೊಂದಿಲ್ಲ. ಅದರ ಗಾತ್ರ, ಘನತೆ, ಸಂಗ್ರಹ, ಪದ್ಧತಿಗಳು ಅನನ್ಯವಾದವುಗಳು. ಅದರ ಪ್ರಕಟಣೆ ನೂರುವರ್ಷದ ಮೇಲಾದಾಗ್ಯೂ ಇಂದಿನ ಸಂದರ್ಭದಲ್ಲೂ ಕಿಟೆಲ್ ರು ಕನ್ನಡ ಸಾರಸ್ವತಕ್ಕೆ ಸಲ್ಲಿಸಿದ ಅಮೋಘ ಸೇವೆಯ ಸ್ಮರಣೆ ಮಾಡುವುದು ಔಚಿತ್ಯಪೂರ್ಣವಾಗಿದೆ. ಅವರು ಕ್ರೈಸ್ತ ಮತ ಪ್ರಚಾರಕ್ಕಾಗಿಯೇ ೧೮೫೩ ರಲ್ಲಿ ಬಾರತಕ್ಕೆ ಬಂದವರು. ಮೊದಲು ಧಾರವಾಡ, ಮಂಗಳೂರು, ಹುಬ್ಬಳ್ಳಿ ಯಲ್ಲಿ ಮತಪ್ರಚಾರದ ಕಾರ್ಯ ನಡೆಸಿದರು…
ಲೇಖಕರು: rajeshnaik111
ವಿಧ: ಬ್ಲಾಗ್ ಬರಹ
January 11, 2007
ಯೆರೆ ಗೌಡ - ಇವರ ಪೂರ್ಣ ಹೆಸರು ಯೆರೆ ಕಾರೆಕಲ್ಲು ತಿಪ್ಪಣ್ಣ ಗೌಡ. ರಾಯಚೂರಿನಿಂದ ಉದ್ಭವಿಸಿದ ಅತ್ಯುತ್ತಮ ಸೆಲ್ಫ್ ಮೇಡ್ ಆಟಗಾರ. ಹೆಚ್ಚಿನ ಪ್ರತಿಭೆ ಇಲ್ಲದೆ ಸ್ವಂತ ಪರಿಶ್ರಮದಿಂದ ಕಷ್ಟಪಟ್ಟು ಕ್ರಿಕೆಟ್ ಜಗತ್ತಿನಲ್ಲಿ ಮೇಲೇರಿದ ಅಸಾಧಾರಣ ಶ್ರಮಜೀವಿ. ಪ್ರಸಕ್ತ ರಣಜಿ ಋತುವಿನಲ್ಲಿ ಕರ್ನಾಟಕ ತಂಡದ ನಾಯಕರಾಗಿರುವ ಗೌಡರಿಗೆ ೩೫ ವರ್ಷ ವಯಸ್ಸು. ೯೦ ರ ದಶಕದಲ್ಲಿ ದಕ್ಷಿಣ ವಲಯದ ತಂಡಗಳ ನಡುವೆ ೨೩ ವರ್ಷದೊಳಗಿನವರಿಗಾಗಿ ಪಿ.ರಾಮಚಂದ್ರ ರಾವ್ ಟ್ರೋಫಿ ಪಂದ್ಯಾಟ ನಡೆಯುತ್ತಿತ್ತು. ೯೨-೯೩, ೯೩-೯೪,…
ಲೇಖಕರು: Shyam Kishore
ವಿಧ: ಬ್ಲಾಗ್ ಬರಹ
January 11, 2007
   ರಾಬ್ಡಿದೇವಿಗೆ (ಅದೇಪ್ಪಾ, ಶ್ರೀಮತಿ ಲಾಲೂ) ಒಮ್ಮೆ ತಾನು ಸತ್ತಂತೆ ಕನಸು ಬಿತ್ತಂತೆ. ಕೇವಲ ಕನಸು ಸ್ವಾಮೀ; ನೂರಲ್ಲ, ಇನ್ನೂರು ವರ್ಷ ಬದುಕಲಿ ಬಿಡಿ, ನಮಗೇನು? ರಾಬ್ಡಿಗೆ ಕನಸು ಬಿದ್ದಾಗ ನಮ್ಮ ಲಾಲೂ ಸಾಹೇಬರು ಮಾತ್ರ ಇನ್ನೂ ಗುಂಡುಕಲ್ಲಿನ ಹಾಗೆ ಬದುಕಿದ್ದಾರೆ ಅನ್ನೋದು ನೆನಪಿಡಲೇಬೇಕಾದ ವಿಚಾರ. ಸತ್ತಮೇಲೆ ಇನ್ನೇನು, ಕೊನೆಯ ವಿಚಾರಣೆ ಆಗಲೇಬೇಕಲ್ಲ. ರಾಬ್ಡಿ ಕೂಡಾ ಯಮಲೋಕದಲ್ಲಿ ಯಮಧರ್ಮನ ಮುಂದೆ ಹಾಜರಾದಳು. ಆಕೆಗೂ ಸಿನೆಮಾ ನೋಡಿ, ಪುಸ್ತಕ-ಪುರಾಣ ಓದಿ, ಯಮಲೋಕ ಅಂದರೆ ಹೀಗಿರುತ್ತೆ ಅಂತ…
ವಿಧ: ಬ್ಲಾಗ್ ಬರಹ
January 11, 2007
ದಿನನಿತ್ಯದ ಜೀವನದಲ್ಲಿ ನಾವು ತೊಂದರೆಗಳಾದಾಗ ಹಲವು ಬಾರಿ ಸರ್ಕಾರವನ್ನು, ಸುತ್ತಮುತ್ತವಿರುವವರನ್ನು ಆಗಾಗ ದೂಷಿಸುತ್ತ, ಬೈದುಕೊಳ್ಳುತ್ತಾ ಇರುವುದು ಸರ್ವೇಸಾಮಾನ್ಯ. ತಕ್ಷಣದ ವಿವೇಚನೆಗೆ, ಕಾಮನ್ ಸೆನ್ಸಿಗೆ ಇವುಗಳಿಗೆಲ್ಲ ನಾವು ಜವಾಬ್ದಾರರಲ್ಲ ಅನ್ನಿಸುತ್ತದೆ, ಉದಾಹರಣೆಗೆ ನೀರು ಪೋಲು ಮಾಡುವುದು, ರಸ್ತೆಯನ್ನು ಅಗೆದು ಸರಿಯಾಗಿ ಮುಚ್ಚದೇ ಹೋಗುವುದು, ಕಂಡ ಕಂಡ ಹೊತ್ತಿನಲ್ಲಿ ವಿದ್ಯುತ್ ಕಡಿತ, ವಾಹನ ಸಂಚಾರ ನಿಯಮಗಳನ್ನು ಪಾಲಿಸದೇ ಇರುವುದು ಇತ್ಯಾದಿ.. ಆದರೆ ಅವುಗಳ ಬಗ್ಗೆ ಸ್ವಲ್ಪ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
January 11, 2007
ಕರ್ನಾಟಕ ಕುಲ ಪುರೋಹಿತ ಆಲೂರು ವೆಂಕಟರಾಯರ ಬಗ್ಗೆ...ನಾನು ಬರೆದು ಹಾಕಬೇಕಿದೆ .. ಆಲೂರು ವೆಂಕಟರಾಯರು ಅವರು ಕುಲ ಪುರೋಹಿತ ಆದದ್ದು ಹೇಗೆ? ಏಕೆ ? ಅವರ 'ನನ್ನ ಜೀವನ ಸ್ಮೃತಿಗಳು' ಕನ್ನಡಿಗರೆಲ್ಲರೂ ಓದಬೇಕಾದ ಪುಸ್ತಕ . ಆದರೆ ಅದು ಮಾರುಕಟ್ಟೆಯಲ್ಲಿ ಇಲ್ಲ . ಪ್ರಕಾಶಕರು - ಮನೋಹರ ಗ್ರಂಥಮಾಲೆ , ಧಾರವಾಡ .ಅವರ ಹತ್ತಿರವೂ ಪ್ರತಿಗಳು ಇಲ್ಲ . ಅವರು ಏನು ಮಾಡಿದರು ? ಅನ್ನುವದು ಬೇರೆಡೇ ಸಿಕ್ಕೀತು . ಆದರೆ ಏಕೆ ಮಾಡಿದರು? ನಿಮಗೆ ಗೊತ್ತೆ? ಕನ್ನಡ/ ಕರ್ನಾಟಕದ ಬಗ್ಗೆ ತಮ್ಮ ಜೀವನವನ್ನೇ…
ಲೇಖಕರು: Prabhu Murthy
ವಿಧ: ಬ್ಲಾಗ್ ಬರಹ
January 11, 2007
ಬಾನಿನುಲಿ * ಬಸವಳಿದುಳಿದಿದೆ ನಮ್ಮ ನುಡಿಬಸವಳಿದುಳಿದಿದೆ ನಮ್ಮ ನುಡಿ ಕಬ್ಬಿಗನು ಕನವರಿಸಿದ ಮುಲುಕಿನಲಿಅಬ್ಬರದ ಓರಾಟದ ಅಮಲಿನಲಿ ಪುಡಾರಿಯ ನಾಲಗೆ ಸೀಳಿನಲಿಹೀರೋನ ರಂಗಿನ ನಕಲಿನಲಿ ಹಸಿರಾಡುಂಬೋಲದ ಮೈಕಿನಲಿ ನುಸುಳಿ ನವಿರೆಬ್ಬಿಸಿದ ಬಾನಿನುಲಿ ಬಸವಳಿದುಳಿದಿದೆ ನಮ್ಮ ನುಡಿ | ಹೇಗೋಬಸವಳಿದುಳಿವುದು ನಮ್ಮ ನುಡಿ -ಪ್ರಭು ಮೂರ್ತಿ೨೦೦೬೧೨೨೦ * ಹಿಂದೆ ಯಾವಗಲೋ ಹಿಂದಿ-ಇಂಗ್ಲಿಷ್ ಕಾಮೆಂಟರಿಯ ನಡುವೆ, ಫೀಲ್ಡಿಂಗ್ ಮಾಡುತ್ತಿದ್ದ ನಮ್ಮ ಹುಡುಗರು ಕನ್ನಡದಲ್ಲಿ ಮಾತನಾಡಿಕೊಳ್ಳುತ್ತಿದ್ದನ್ನು ಕೇಳಿ…