ಎಲ್ಲ ಪುಟಗಳು

ಲೇಖಕರು: ಶ್ರೀನಿಧಿ
ವಿಧ: Basic page
January 07, 2007
ಮೊನ್ನೆ ನಾನು ತೆಗೆದುಕೊಂಡ ವಿಷಯಗಳಿಗೆ ಗ್ರೇಡುಗಳು ಬಂದಿದ್ದವು. ಹೀಗೆ ಗ್ರೇಡುಗಳು ಬಂದಾಗಲೆಲ್ಲಾ ನನಗೆ ಈ ಪ್ರಪಂಚದ ನಶ್ವರತೆ-ವೈರಾಗ್ಯ ಮುಂತಾದ ಯೋಚನೆಗಳು ಹೆಚ್ಚಾಗುತ್ತವೆ. ಇದೂ ಒಂದು ರೀತಿಯ ಮಸಣ ವೈರಾಗ್ಯ.ಮಹಾಭಾರತ ಯುದ್ಧ ಮುಗಿದ ನಂತರ ಯುಧಿಷ್ಟಿರನಿಗೆ ಆದಂತೆ. ಇರಲಿ.. ಹೆಚ್ಚಿಗೆ ಹರಟೆ ಹೊಡೆಯದೇ ನೇರವಾಗಿ ಮಾತಿಗೆ ಬರುತ್ತೇನೆ. ಪ್ರಶ್ನೆ: ಜೀವ (ಅಥವಾ ಆತ್ಮ??) ಎಂದರೆ ಏನು? ಜೀವಿಗೆ ಒಂದೇ ಜೀವವೇ? ಅನೇಕ ಜೀವಗಳು ಸೇರಿ ಉನ್ನತ ಜೀವಿವೇ? ಒಳನೋಟ: ಉದಾಹರಣೆಗೆ ಮನುಷ್ಯನನ್ನೇ…
ಲೇಖಕರು: Shyam Kishore
ವಿಧ: ಬ್ಲಾಗ್ ಬರಹ
January 07, 2007
     ಸಂಪದ ಓದುತ್ತಾ ಕುಳಿತಿದ್ದವನನ್ನು ನೋಡಿದ ನನ್ನಾಕಿ "ಎಲಾ ಇವರ! ಎಷ್ಟು ಹೊತ್ತಿಂದ ಲ್ಯಾಪ್‌ಟಾಪ್ ಮುಂದೆ ಕೂತು ನನ್ನನ್ನೂ ಮರೆತಿದ್ದಾರಲ್ಲ" ಅಂತ ಯೋಚಿಸಿ, ಸುಮ್ಮನಿರಲಾರದೆ, "ಇವತ್ತು ಏನು ಅಡುಗೆ ಮಾಡಲಿ?" ಅಂತ ಕೇಳಬೇಕೆ?! ಇತ್ತೀಚಿಗೆ ಸಂಪದದಲ್ಲಿ ನಡೆಯುತ್ತಿರುವ "ಕನ್ನಡದ ಏತ್ವಗಳು, ಕಾಗುಣಿತ ಕಲಿತದ್ದು" ಇತ್ಯಾದಿ ಚರ್ಚೆಗಳ ಬಗ್ಗೆಯೇ ಏನೋ ಯೋಚಿಸಿ ಟೈಪಿಸುತ್ತಾ ಕುಳಿತವನು, ಅದೆಲ್ಲಿಂದ ಹೊಳೆಯಿತೋ ನನಗೇ ಗೊತ್ತಿಲ್ಲ, "ಕೊಟ್ಟೆ ಮಾಡು" ಅಂದೆ. ಒಂದು ಕ್ಷಣ ತಬ್ಬಿಬ್ಬಾದ ನನ್ನಾಕಿ "…
ಲೇಖಕರು: Shyam Kishore
ವಿಧ: Basic page
January 07, 2007
ಅಜ್ಜ ಎಂದೊಡನೆ - ನರೆಗೂದಲು, ಕುರುಚಲು ಗಡ್ಡ, ಎಳೆಯ ಕೆನ್ನೆಗುಜ್ಜಿ ತುರಿಸುತ್ತಿದ್ದ ನೆನಪು.ಒಳಮನೆಯಲ್ಲಿ ಅವರ ಅಗ್ನಿಹೋತ್ರದ ಜ್ವಾಲೆನಡುಮನೆಯಲ್ಲಿ ನನ್ನ ಮುಖದ ಮೇಲೆಲ್ಲ ಕುಣಿದ ನೆನಪು. ಅಜ್ಜ ಎಂದೊಡನೆ - ತಿಥಿ, ನಕ್ಷತ್ರ, ಸಂವತ್ಸರ, ಸ್ತೋತ್ರ,ಅಮರಕೋಶದ ಪಾಠಕ್ಕೆಳೆದು ಕೂರಿಸಿದಂತೆ.ದಾಳಿಂಬೆಯ ಪ್ರತಿ ಕಾಳನ್ನೂ ಎಣಿಸುತ್ತಾ ಬಿಡಿಸಿ,ಸುತ್ತಲೂ ಕುಳಿತ ಮೊಮ್ಮಕ್ಕಳಿಗೆ ರೇಗಿಸುತ್ತಾ ತಿನಿಸಿದ ನೆನಪು. ಅಜ್ಜ ಎಂದೊಡನೆ - ಹೂಗಿಡಗಳ ಜತೆ ಮಾತಾಡುತ್ತಾಹೂಬಿಡಿಸಿ ತಂದು, ಮತ್ತಷ್ಟು…
ಲೇಖಕರು: rajeshnaik111
ವಿಧ: Basic page
January 07, 2007
ನಿನ್ನೆ ಕರ್ನಾಟಕ - ತಮಿಳುನಾಡು ತಂಡಗಳ ನಡುವಿನ ಪಂದ್ಯದ ಬಗ್ಗೆ ಸಂಪದದಲ್ಲಿ ಪ್ರತಿಕ್ರಿಯೆ ಇತ್ತು. ಸಂಪದದಲ್ಲಿ 'ಕರ್ನಾಟಕ ಕ್ರಿಕೆಟ್' ಬಗ್ಗೆ ಓದಿ ಬಹಳ ಆನಂದವಾಯಿತು. ಸಣ್ಣಂದಿನಿಂದಲೂ ರಣಜಿ ಪಂದ್ಯಗಳನ್ನು ಬಹಳ ಆಸಕ್ತಿಯಿಂದ ಗಮನಿಸುತ್ತ ಬಂದಿದ್ದೇನೆ. ರಣಜಿ ಟ್ರೋಫಿ, ಕರ್ನಾಟಕ ಕ್ರಿಕೆಟ್ ಮತ್ತು ಕೆಲವು ಆಟಗಾರರ ಬಗ್ಗೆ ಸಂಪದದಲ್ಲಿ ನನಗೆ ತಿಳಿದಷ್ಟು ಓದುಗರೊಂದಿಗೆ ಹಂಚಿಕೊಳ್ಳುತ್ತೇನೆ. ವೀಕ್ಷಕ ವಿವರಣೆ - ಆಗ ಬೆಂಗಳೂರು ಮತ್ತು ಧಾರವಾಡ ಆಕಾಶವಾಣಿ ಕೇಂದ್ರಗಳಲ್ಲಿ ಕರ್ನಾಟಕದಲ್ಲಿ…
ಲೇಖಕರು: hpn
ವಿಧ: ಚರ್ಚೆಯ ವಿಷಯ
January 06, 2007
[:http://sampada.net/user/shyam_kishore|ಶ್ಯಾಮ್ ಕಿಶೋರ್ ರವರು] ಕೆಲವು ದಿನಗಳಿಂದ ಸಂಪದದಲ್ಲಿ ಬಹಳ ಚೆನ್ನಾಗಿರುವ [:http://sampada.net/quotes/1261|ಕೆಲವು ನುಡಿಮುತ್ತುಗಳನ್ನ ಹಾಕ್ತಾ ಇದ್ದಾರೆ]. ಅದರಲ್ಲಿ ಆಲ್ಬರ್ಟ್ ಐನ್‍ಸ್ಟೈನ್ ರ ಕೆಲವು ನುಡಿಗಳು ನನಗೆ ಬಹಳ ಇಷ್ಟವಾದವು. ಅವನ್ನೋದುವಾಗ ಓ ಎಲ್ ಎನ್ ಸ್ವಾಮಿಯವರು ಈ ಹಿಂದೆ ಬರೆದಿದ್ದ [:http://sampada.net/kannada/archive/52|ಝೆನ್ ಕಥೆಗಳು ನೆನಪಿಗೆ ಬರುತ್ತೆ]. ಆಲ್ಬರ್ಟ್ ಐನ್‍ಸ್ಟೈನ್ ರವರ ಈ ಮಾತು…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
January 06, 2007
ಹಿಂದೆ ಕನ್ನಡ ಶಬ್ದಕೋಶ ಕುರಿತು ಇಲ್ಲಿ ಬರೆದಿದ್ದೆ . ನಾನು ಓದುತ್ತ ಇದ್ದದ್ದು ಗುರುನಾಥ ಜೋಶಿ ಎಂಬವರ ಕನ್ನಡ-ಕನ್ನಡ ಶಬ್ದಕೋಶ. ಕವಲಿ ಯವರದು ಸ್ವಲ್ಪ ಅಡ್ವಾನ್ಸಡ್ ಇರುವದರಿಂದ ಇದನ್ನು ಓದಿದ ಮೇಲೆ ಓದುವೆ. ನಾನು ಕಂಡುಕೊಂಡ ಶಬ್ದಗಳು , ಹೊಸ ಶಬ್ದಗಳು ,ಸಂಬಂಧಿತ ಶಬ್ದಗಳು , ಬಳಕೆಯಲ್ಲಿರುವ ಸಂಸ್ಕೃತ ಶಬ್ದಗಳಿಗೆ ಕನ್ನಡದ ಶಬ್ದಗಳು ಇತ್ಯಾದಿ ಇತ್ಯಾದಿ ಸ್ವಲ್ಪ ನೋಡೋಣ ಬನ್ನಿ.  ಅಡಿ - ಅಡಿಗಲ್ಲು - ಅಡಿಗಾಣು (ತಳಕಾಣು) - ಅಡಿಮುಟ್ಟ (ತಳದವರೆಗೆ)- ಅಡಿಮೆ (ದಾಸ್ಯ - ಅಡಿಯ (ಆಳು) -ಅಡಿಯಿಡು…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
January 06, 2007
ಅನೇಕ ದಿನಗಳಿಂದ ಸಂಪದದಲ್ಲಿ ತಾಂತ್ರಿಕ ಅನುವಾದ ಮಾಡುತ್ತಿದ್ದೇನೆ. ಅಲ್ಲಿ ನಾನು ಬಳಸಿರುವ ಶಬ್ದಗಳು ಲಾಗಿನ್ / ಲಾಗೌಟ್ ಗೆ - ಒಳಬನ್ನಿ /ಹೊರಹೋಗಿ ಬಳಸಿದ್ದೇನೆ ಫೈಲ್ - ಕಡತವಾದರೆ ಡೈರೆಕ್ಟರಿ- ಕಡತಕೋಶವಾಗಿದೆ ಫೀಲ್ಡ್ - ಗೆ ಮೊದಲು ಅಂಶ ಎಂದು ಬಳಸಿದೆ. ಈಗ ಮಾಹಿತಿಅಂಶ ಸರಿ ಎನಿಸಿದೆ ಅಟ್ರಿಬ್ಯೂಟ್ - ಗುಣಲಕ್ಷಣ ಡಾಟಾಬೇಸ್ - ದತ್ತಸಂಚಯ configurAtion -ಸಂರಚನೆ customisation- ಒಗ್ಗಿಸಿಕೊಳ್ಳುವಿಕೆ settings - ನಿಶ್ಚಯಗಳು/ನಿರ್ಧಾರಗಳು defaults - ಪೂರ್ವನಿಶ್ಚಯಗಳು/…
ಲೇಖಕರು: venkatesh
ವಿಧ: Basic page
January 06, 2007
ಈಗೇನು ಇಂದಿನ ದಿನಗಳಲ್ಲಿ 'ಚಲ್ತಾ ಹೈ....ಬಿಡಿ ಸಾರ್ '! ಎನ್ನುವ ಮಾತು ಕೇಳಕ್ಕೇ ಬೇಜಾರು ! ಮೊನ್ನೆ, ಪೆನ್ಷನ್ ತೊಗೊಳಕ್ಕೆ ಎಸ್.ಬಿ.ಐ ಗೆ ಹೋಗಿದ್ದೆ. ಮಧ್ಯದಲ್ಲೇ ಕಂಪ್ಯೂಟರ್ ಕೈಕೊಡ್ತು. ಪಿ.ಪಿ.ಎಫ್ ಗೆ ಹಣ ಕಟ್ಟಬೇಕಿತ್ತು. 'ಬೇಗ ಏನಾದ್ರು ಮಾಡಿ', ಅಂದರೆ ಅಲ್ಲಿನ ಅಧಿಕಾರಿ ಹೇಳ್ತಾರೆ. ಚಲ್ತಾ ಹೈ....ಬಿಡಿ ಸಾರ್ ! ಕೆನರಾ ಬ್ಯಾಂಕ್ ನಲ್ಲಿ 'ಹೊಸವರ್ಷದ ಕ್ಯಾಲೆಂಡರ್ ಬಂತಾ', ಅಂತ ಕೇಳಿದ್ರೆ, 'ಹೌದು ಬಂತು, ನೋಡಿ ಈಗ್ತಾನೆ ಎಲ್ಲಾ ಖರ್ಛಾಗಿಹೋಯ್ತು' ! ಅರೆ, ಏನ್ಹೇಳೋದ್ ನೀವು, ನನಗೂ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
January 06, 2007
ಆಫೀಸಿಗೆ ಹೋಗುವದು ಹೊತ್ತು ಕಳೆಯಲೆಂದು! ದಿನಗಳ ದೂಡುವದು ಸಂಬಳ , ಇನ್‍ಕ್ರಿಮೆಂಟು ಬರಲೆಂದು !! ಎಲ್ಲದರ ಕೊನೆಗೆ ಬರುವದು - ತಣ್ಣಗೆ ರಿಟೈರುಮೆಂಟು!!! ( ಈಗ ಇದನ್ನು ನೋಡಿ - ಮೂಲ ತತ್ವಜ್ಞಾನ - ಯಾರು ಹೇಳಿದ್ದು ಗೊತ್ತಿಲ್ಲ - ರಾತ್ರಿ ಮಲಗುವದು ಬೆಳಗ್ಗೆ ಏಳಲೆಂದು. ತಿನ್ನುವದು ಅಮೇಧ್ಯವಾಗಲೆಂದು. ಎಲ್ಲದರ ಕೊನೆಗೆ ಬರುವದು ತಣ್ಣಗೆ ಸಾವು. )
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
January 06, 2007
'ಮೋಕ್ಷ,ಮೋಕ್ಷ' ಎಂದೊಬ್ಬರು ಬಡಬಡಿಸುತ್ತಿದ್ದರು . ರಾಮಪ್ಪ ಕೇಳಿದ - ಮೋಕ್ಷ ಅಂದ್ರೇನು? ಅವರು ತಡವರಿಸಿದರು- ಮೋಕ್ಷ ಅಂದರೆ ... ಯಾವುಡೇ ಜಂಜಡ ಇಲ್ಲದಿರುವದು. ಕೂಡಲೇ ರಾಮಪ್ಪ ಅಂದ - ಹಾಗಾದರೆ ನನಗೆ ಮೋಕ್ಷ ಸಿಕ್ಕಿದೆ!?