ಎಲ್ಲ ಪುಟಗಳು

ಲೇಖಕರು: venkatesh
ವಿಧ: Basic page
January 14, 2007
'ಇಂಟರ್ನೆಟ್' ಪುಟಗಳನ್ನು, ತಿರುಗಿಸಿ ನೋಡಿದಾಗ ಇನ್ನೂ ಚಿಕ್ಕ- ಚಿಕ್ಕ ಮಾಹಿತಿಗಳು ಸಿಕ್ಕವು. ಈ ಸಂದರ್ಭದಲ್ಲಿ ಅವು ಉಪಯುಕ್ತವಾಗಬಹುದೇನೋ. ಧಾರ್ವಾಡ, ಹುಬ್ಬಳ್ಳಿಗಳಲ್ಲದೆ ಅವರು ಆನಂದಪುರಾ, ಮತ್ತು ಮಡಕೇರಿಯಲ್ಲಿ ತಮ್ಮ ಜೀವನದ ಸ್ವಲ್ಪ ಭಾಗವನ್ನು ಕಳೆದರು. 'ಮಡಕೇರಿ' ಅವರಿಗೆ ಬಹಳ ಖುಷಿಕೊಟ್ಟಿತು. ಅಲ್ಲಿನ ಹವ, ಅವರಿಗೆ ಬಹಳ ಚೆನ್ನಾಗಿ ಒಂಟಿತ್ತು. ಸಾಮಾನ್ಯ ಜನರ ಭಾಷೆಯನ್ನು ಅರಿಯಲು ಅವರು ಹಳ್ಳಿ ಹಳ್ಳಿಗಳಿಗೆ ಹೋಗೀ ಮನೆಯ ಬಾಗಿಲು ತಟ್ಟಿ, ಜನರ ಸಂಪರ್ಕ ಮಾಡುತ್ತಿದ್ದರಂತೆ. ತಮ್ಮ…
ಲೇಖಕರು: H.S.R.Raghavendra Rao
ವಿಧ: Basic page
January 14, 2007
ಈ ಬರಹ ಬಹಳ ಪ್ರಸ್ತುತವೆನಿಸಿದ್ದರಿಂದ ನಿರ್ವಾಹಕರಿಂದ 'ಸೂಚನಾ ಫಲಕ' ಕ್ಕೆ ಸೇರಿಸಲ್ಪಟ್ಟಿದೆ. ಸೂ: ದಯವಿಟ್ಟು ಮಾನ್ಯರ ಕೆಳಗಿನ ಮಾತುಗಳನ್ನು ವೈಯಕ್ತಿಕವಾಗಿ ತೆಗೆದುಕೊಳ್ಳಬೇಡಿ. ಇಲ್ಲಿ ಕಾಣುವ ಎರಡು ಪ್ರಸ್ತಾವನೆಗಳು: ೧) [:http://sampada.net/node/1596|ವೈಯಕ್ತಿಕ ದೂಷಣೆಗಳು ಬೇಡ]. ೨) ಕೋಪ-ತಾಪಗಳನ್ನು ಬಿಟ್ಟು ಸದಭಿರುಚಿಯ ಚರ್ಚೆ ನಡೆಯಲಿ. ಎಂಬುದು ಬಹಳ ಪ್ರಸ್ತುತ. ಆತ್ಮೀಯರೇ, ಹಲವು ದಿನಗಳಿಂದ ಸಂಪದದಲ್ಲಿ ಬರುವ ಬರೆಹಗಳನ್ನು ಮತ್ತು ಪ್ರತಿಕ್ರಿಯೆಗಳನ್ನು ನೋಡುತ್ತಿದ್ದೇನೆ…
ಲೇಖಕರು: Shyam Kishore
ವಿಧ: Basic page
January 14, 2007
     ಜಪಾನ್ ದೇಶದ ಪ್ರಸಿದ್ಧ ಝೆನ್ ಗುರುವೊಬ್ಬ ತನ್ನ ಆಶ್ರಮದಲ್ಲಿ ಆರಾಮವಾಗಿ ಕಾಲು ಚಾಚಿ ಕುಳಿತು ವಿಶ್ರಾಂತಿ ಪಡೆಯುತ್ತಿದ್ದ. ಅವನ ಪಕ್ಕದಲ್ಲಿಯೇ ಶಿಷ್ಯನೊಬ್ಬ ಝೆನ್ ಗ್ರಂಥವೊಂದನ್ನು ಓದುತ್ತ ಕುಳಿತಿದ್ದ. ಮಧ್ಯಾಹ್ನ ಬಿಸಿಲಿನ ಸಮಯ. ಗುರುವಿಗೆ ಏನಾದರೂ ಹಣ್ಣನ್ನು ತಿನ್ನಬೇಕೆಂದು ಅನ್ನಿಸಿ ತನ್ನ ಕೈಚೀಲದಿಂದ ಮೂಸಂಬಿಯೊಂದನ್ನು ಹೊರತೆಗೆದ. ಒಬ್ಬನೇ ತಿನ್ನುವುದು ಸರಿಯಲ್ಲವೆನಿಸಿ, ಪಕ್ಕದಲ್ಲಿಯೇ ಇದ್ದ ಶಿಷ್ಯನಿಗೂ ಕೊಡುವುದಕ್ಕೆಂದು ಹಣ್ಣನ್ನು ಎರಡು ಭಾಗ ಮಾಡಿ, ಶಿಷ್ಯನಿಗೆ ಒಂದನ್ನು…
ಲೇಖಕರು: rajeshnaik111
ವಿಧ: ಬ್ಲಾಗ್ ಬರಹ
January 14, 2007
ಯೆರೆ ಗೌಡರ ಸಮರ್ಥ ನೇತೃತ್ವದಲ್ಲಿ ಕರ್ನಾಟಕ ಈ ಋತುವಿನ (೨೦೦೬-೦೭) ರಣಜಿ ಟ್ರೋಫಿ ಸೆಮಿಫೈನಲ್ ತಲುಪಿದೆ. ಎಲೀಟ್ ಲೀಗ್ ನ ತನ್ನ ಗುಂಪಿನಲ್ಲಿ ಆಡಿದ ೭ ಪಂದ್ಯಗಳಲ್ಲಿ ೩ ಗೆಲುವು (ಹರ್ಯಾನ, ಉತ್ತರ ಪ್ರದೇಶ ಮತ್ತು ತಮಿಳುನಾಡು ವಿರುದ್ಧ), ೩ ಡ್ರಾ (ದೆಹಲಿ, ಅಂಧ್ರ ಪ್ರದೇಶ ಮತ್ತು ಸೌರಾಷ್ಟ್ರ ವಿರುದ್ಧ) ಮತ್ತು ೧ ಸೋಲಿನ (ಬರೋಡ ವಿರುದ್ಧ) ಸಾಧನೆಯೊಂದಿಗೆ ದ್ವೀತಿಯ ಸ್ಥಾನ ಪಡೆದಿದೆ. ಜನವರಿ ೨೩ ರಿಂದ ೨೭ ರವರೆಗೆ ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ, ಬಂಗಾಲವನ್ನು ಎದುರಿಸಲಿದೆ. ಈ…
ಲೇಖಕರು: ASHOKKUMAR
ವಿಧ: ಚರ್ಚೆಯ ವಿಷಯ
January 13, 2007
ಮಕರ ಸಂಕ್ರಾಂತಿಯ ಶುಭಾಶಯಗಳು. ಅಂದ ಹಾಗೆ ಹಿಂದೂಗಳ ಹಬ್ಬಗಳು ಪ್ರತಿ ವರ್ಷ ನಿಗದಿತ ದಿನ ಬರುವುದು ವಿರಳ. ಆದರೆ ಸಂಕ್ರಾಂತಿ ಮಾತ್ರಾ ಜನವರಿ ಹದಿನಾಲ್ಕು ಅಥವಾ ಹದಿನೈದಕ್ಕೇ ಬರುವುದು ಹೇಗೆ?ಗೊತ್ತಿದ್ದರೆ ಹೇಳಿಯಲ್ಲಾ.
ಲೇಖಕರು: tvsrinivas41
ವಿಧ: Basic page
January 13, 2007
ಎಲ್ಲರಿಗೂ ಮಕರ ಸಂಕ್ರಾಂತಿಯ ಹಾರ್ದಿಯ ಶುಭಾಶಯಗಳು ಒಮ್ಮೆ ಇಟ್ಟ ಹೆಜ್ಜೆ ಮತ್ತಲ್ಲೇ ಮತ್ತೆ ಇಡಲಾದೀತೇ? ಅದೇ ಹೆಜ್ಜೆ ಮತ್ತಲ್ಲೇ ಇಡಲಾದೀತೇ? ಮನ ಹೇಳಿದ್ದು - ಇಡಬಾರದ ಹೆಜ್ಜೆ ಪಾದ ಮನದ ಮಾತು ಕೇಳೀತೇ? ಹೆಜ್ಜೆ ಇಡಲು ಶಕ್ತಿ ಕೊಟ್ಟವರಾರು? ಮನಕೆ ಬುದ್ಧಿಯ ಕೊಟ್ಟವರಾರು? ಸುಕ್ಕುತ್ತಿರುವ ಮುಖ ಚರ್ಮಗಳು ಸೊಕ್ಕುತ್ತಿರುವ ಮನದ ಮದಗಳು ಕ್ರೀಮು-ಪಾಮುಗಳು ಹಿಂದೆ ತಳ್ಳಲಾದೀತೇ? ಕ್ರೀಮುಗಳು ಮುಚ್ಚಲಾದೀತೇ? ಮತ್ತೆ ತೋರಲಾರದಂತೆ ಮುಚ್ಚಲಾದೀತೇ? ಪಾಮುಗಳು ಮುಖ ಮರ್ದಿಸಿ ಉಬ್ಬಿದ ಮದವ ಒಳತಳ್ಳಿದರೂ…
ಲೇಖಕರು: ASHOKKUMAR
ವಿಧ: Basic page
January 13, 2007
ಬರೇ ಫೋನಲ್ಲವಿದು,ಐಫೋನ್ ಐಪಾಡ್ ಎಂಬ ಸಂಗೀತ ಮುದ್ರಿಕೆಗಳನ್ನು ಸಂಗ್ರಹಿಸಿಟ್ಟುಕೊಂಡು ಬೇಕೆಂದಾಗ ನುಡಿಸುವ ಸೌಲಭ್ಯ ನೀಡುವ ಸಾಧನವನ್ನು ಕಂಪ್ಯೂಟರ್‍ ಕಂಪೆನಿ ಹೊರತಂದು ಹಿಟ್ ಆದುದು ಈಗ ಹಳೆ ಸುದ್ದಿ.ಸದ್ಯ ಐಪಾಡ್ ಕಿಸೆಯಲ್ಲಿರಿಸಿ ಅತ್ತಿತ್ತ ಒಯ್ಯಬಲ್ಲ ಸಂಗೀತ ಸಾಧನಗಳ ಮಾರುಕಟ್ಟೆಯ ಶೇಕಡಾ ಎಪ್ಪತ್ತೈದು ಭಾಗವನ್ನು ಪಡೆದಿದೆ.ಆಪಲ್ ಕಂಪೆನಿ ಈ ಸೌಲಭ್ಯವಿರುವ ಫೋನನ್ನೂ ಮಾರುಕಟ್ಟೆಗೆ ತರಬಹುದೆಂದು ಗುಸುಗುಸು ಹಬ್ಬಿತ್ತು. ಅದೀಗ ನಿಜವಾಗಿದೆ. ಈ ವಾರ ಕಂಪೆನಿಯ ಮುಖ್ಯಸ್ಥ ಸ್ಟೀವ್ ಜಾಬ್…
ಲೇಖಕರು: Shyam Kishore
ವಿಧ: ಬ್ಲಾಗ್ ಬರಹ
January 13, 2007
ಆತ್ಮೀಯ ಸಂಪದಿಗರೇ,ವಿರಾಮ ಚಿಹ್ನೆಗಳ ಬಗ್ಗೆ ನಮಗೆಷ್ಟು ಗೊತ್ತು? ಕೆಳಗಿನ ಸಾಲುಗಳನ್ನು ಸ್ವಲ್ಪ ಓದಿ ನೋಡಿ:ವಿರಾಮ ಚಿಹ್ನೆಗಳುಕನ್ನಡದಲ್ಲಿ ಗದ್ಯವನ್ನಾಗಲಿ, ಪದ್ಯವನ್ನಾಗಲಿ ಬರೆಯುವಾಗ ಹಿಂದಿನ ಕಾಲದಲ್ಲಿ ವಿರಾಮ ಚಿಹ್ನೆಗಳನ್ನು ಉಪಯೋಗಿಸುತ್ತ ಇರಲಿಲ್ಲ. ತಾಳೆಗರಿಗಳಲ್ಲಿ ಒಂದು ಪದ್ಯವನ್ನು ಪೂರ್ತಿ ಸಾಲಾಗಿ ಬರೆದ ಮೇಲೆ ಕೊನೆಯಲ್ಲಿ ಒಂದು (|) ಗೂಟವನ್ನು ಹಾಕಿ ಗುರುತಿಸಿದರೆ ಆಗಿಹೋಯಿತು. ಕೆಲವರು ಅದನ್ನೂ ಹಾಕುತ್ತಿರಲಿಲ್ಲ. ಇಂಗ್ಲಿಷ್ ಭಾಷೆಯ ಅಭ್ಯಾಸವು ಹೆಚ್ಚಾದ ಹಾಗೆಲ್ಲ, ಆ ಭಾಷೆಯಲ್ಲಿ…
ಲೇಖಕರು: ವೈಭವ
ವಿಧ: ಚರ್ಚೆಯ ವಿಷಯ
January 12, 2007
ಇದು ಮಾಹಿತಿ ಮೀಮಾಂಸೆ(information theory) ಓದಿದವರಿಗೆ ಗೊತ್ತಿರುವ ವಿಷಯವೆ. ಅದನ್ನು ಕನ್ನಡದಲ್ಲಿ ಬರೆಯುವ ಪ್ರಯತ್ನ ಮಾಡಿದ್ದೇನೆ. ತಪ್ಪಿದ್ದರೆ ದಯವಿಟ್ಟು ತಿದ್ದಿ. ದೋಷ ನಿಯಂತ್ರಣ ಸಾಂಕೇತತ್ವ-------------------------ಮಾನವನ ಆವಿಷ್ಕಾರಗಳಲ್ಲಿ ಮಾಹಿತಿಯನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವಿಶ್ವಸನೀಯವಾಗಿ ರವಾನಿಸುವುದು ಕ್ರಾಂತಿಕಾರಕ ಮತ್ತು ಅತ್ಯಂತ ಮಹತ್ವಪೂರ್ಣವಾದುದು. ಏಕೆಂದರೆ ಇದು ಇಂದು ಬೃಹದಾಅಕಾರವಾಗಿ ಬೆಳೆದು ನಿಂತಿರುವ ಮಾಹಿತಿ ತಂತ್ರಜ್ನಾನದ ತಳಹದಿ.…
ಲೇಖಕರು: Shyam Kishore
ವಿಧ: ಚರ್ಚೆಯ ವಿಷಯ
January 12, 2007
ವೆಂಕಟೇಶ್ ಅವರ ಲೇಖನ "ಕನ್ನಡಕ್ಕೆ ಬಂದ ಕಿಟ್ಟೆಲ್ ಸಂಪತ್ತು" ಓದಿದ ನಂತರ ಈ ಪ್ರತಿಕ್ರಿಯೆ ಬರೆಯಲು ಶುರು ಮಾಡಿದೆ. ಅಷ್ಟರಲ್ಲಿ ಸುನಿಲ್‌ರವರ ಲೇಖನ "ಕಿಟ್ಟೆಲ್ ಸಂಪತ್ತಿನ ಪ್ರಸ್ತುತತೆ..." ಬಂತು. ಅದನ್ನು ಓದಿ ಮನಸ್ಸಿನಲ್ಲಿ ಇನ್ನೂ ಹಲವಾರು ವಿಚಾರಗಳು ಕಾಡತೊಡಗಿದವು. ಸರಿ ಬರಹ ರೂಪಕ್ಕೆ ಇಳಿಸಿಯೇ ಬಿಡೋಣ ಅಂತ ಕೂತಿದ್ದೀನಿ. ನನ್ನ ಅನಿಸಿಕೆಗಳೂ ಬಹಳಷ್ಟು ಇರುವುದರಿಂದ ಬೇರೆ ಲೇಖನದ ರೂಪದಲ್ಲಿ ಹೇಳೋದು ವಾಸಿ ಅಂತನ್ನಿಸಿ ಪ್ರತ್ಯೇಕವಾದ ಲೇಖನದ ರೂಪದಲ್ಲಿ ಬರೆಯುತ್ತಿದ್ದೇನೆ. ಇದು ನನ್ನ…