ವಿಧ: ಬ್ಲಾಗ್ ಬರಹ
January 21, 2007
ಇವತ್ತು ಗೋಡೆಗೆ ತಗಲುಹಾಕಿದ್ದ ಗಡಿಯಾರ ಒಡೆದು ಹೋಯ್ತು. ಒಡೆದ ಗಾಜನ್ನು ನಾನೇ ಸ್ವತಃ ಸಾಕಷ್ಟು ಸಮಯ ವ್ಯಯ ಮಾಡಿ ತೆಗೆದು ಕಸದ ಬುಟ್ಟಿಗೆ ಹಾಕಿದ್ದೆನಷ್ಟೆ.
ಆದರೂ ಘಂಟೆಗಳ ನಂತರವೂ ಸಮಯ ಎಷ್ಟಾಯ್ತು ಅನ್ಕೊಳ್ಳೋ ಅಷ್ಟೊತ್ತಿಗೆ ಕಣ್ಣು ಗಡಿಯಾರ ತಗಲುಹಾಕಿದ್ದ ಜಾಗದೆಡೆ ಹೋಗತ್ತೆ.
ನಿಮಗೂ ಹೀಗಾಗಿದ್ದಿದೆಯೆ?
ವಿಧ: Basic page
January 21, 2007
ಇಡೀ ಪ್ರಪಂಚದಲ್ಲಿ ಪ್ರಾಕೃತಿಕ ಮತ್ತು ವೈಜ್ಞಾನಿಕ ಪರಿವರ್ತನೆ ಕಾಣುತ್ತಿರುತ್ತದೆ. ನಾವು ಸೇರಿ ಸಮಸ್ತ ವಸ್ತುಗಳೂ ಪೃಥ್ವಿಯಲ್ಲಿ ಚಲನೆಗೊಳಪಟ್ಟಿದ್ದೇವೆ. ಆ ಚಲನೆಯಲ್ಲಿ ಅವುಗಳ ಸ್ವರೂಪ ಬದಲಾಗುತ್ತಿರುತ್ತದೆ. ಅಚಲವಾದುದು ಜಗತ್ತಿನಲ್ಲಿ ಯಾವುದೂ ಇಲ್ಲ!ನಿರಂತರ ನಡೆಯುತ್ತಿರುವ ಈ ಚಲನೆಯಲ್ಲಿಯೆ ಪರಿವರ್ತನೆ ಇರುತ್ತದೆ. ಅದು ಮಾನವ ನಿರ್ಮಿತ ವೆನಿಸಬಹುದು. ಪ್ರಕೃತಿಯ ಕೊಡುಗೆ ಯಾಗ ಬಹುದು. ಅಂತ ಪರಿವರ್ತನೆ ಆಗುವುದು ಆಗ ಬೇಕಾಗುವುದು ನಮ್ಮ ಅಸ್ತಿತ್ವ ಉಳಿಸಿಕೊಳ್ಳ ಲಿಕ್ಕಾಗಿ. ನಮ್ಮ…
ವಿಧ: ಚರ್ಚೆಯ ವಿಷಯ
January 21, 2007
ವಿಕ್ರಂತ ಕರ್ನಾಟಕದ ಕ್ಯಾಲೆಂಡರ್
http://www.vikrantakarnataka.com/magazine/calender.pdf
ನಿಮಗೆ ಬೇರೆ ಯಾವುದೆ ಲಿಂಕ್ ಗೊತ್ತಿದ್ದರೆ ಇಲ್ಲಿ ತಿಳಿಸಿ.
ವಿಧ: Basic page
January 21, 2007
ಲೈಫಂದ್ರೇ ಹಿಂಗ... ಏನೋ ಬರೆಯೋಕ್ ಐಡಿಯ ಹಾಕಿರ್ತೀವಿ, ಅದು ತಲೆಯೊಳಗ್ ಇರತ್ತೆ ಅನ್ಕೊಂಡಿರ್ತೀವಿ - ಕೊನೆಗ್ ನೋಡಿದ್ರೆ ಅದು ಒಂದ್ ಚೂರು ಜಾಡೂ ಬಿಡ್ದೆ ಮಾಯ ಆಗಿರತ್ತೆ.
ಒಂದು ಬಹಳ ಒಳ್ಳೆಯ ಲೇಖನ ಬರೆದ ನೆನಪು, ಆದರೆ ಅದೆಲ್ಲೂ ಕಾಣದು. ಬಹುಶಃ ನೆನಪಿನಲ್ಲಿ ಬರೆದದ್ದು, ಕನಸಿನಲ್ಲಿ ಬರೆದದ್ದು. ನೊಬೆಲ್ ಪ್ರೈಸ್ ಬರುವಂತಹ ಆರ್ಟಿಕಲ್ ಅದು! ಹಾಳಾದ್ದು ನೆನಪಿಗೆ ಬರುತ್ತಿಲ್ವೆ.
ಬರೆಯೋಕೆ ಐಡಿಯಗಳು ಬರೋದೇ ಕಷ್ಟ - ಹಾಳಾದ್ದವು ಮಲ್ಕೊಳ್ಳೋಕ್ ಹೊರಟಾಗ್ಲೇ ಬರುತ್ವೆ. ಬೆಳಗಾಗೋ ಅಷ್ಟ್ರಲ್ಲಿ ಮಾಯ…
ವಿಧ: Basic page
January 20, 2007
ನಾನು ಇತ್ತೀಚೆಗೆ ಚಿತ್ರದುರ್ಗಕ್ಕೆ ಭೇಟಿ ಕೊಟ್ಟಾಗ ಅಲ್ಲಿನ ಕಲ್ಲು - ಕೋಟೆಗಳನ್ನು ಕಣ್ಣಾರೆ ಕಂಡು ಅಚ್ಚರಿಪಟ್ಟೆ. 'ನಾಗರಹಾವು' ಚಿತ್ರದ ದೃಶ್ಯಗಳು ಕಣ್ಣ ಮುಂದೆ ಹಾದು ಹೋದವು.ಆದರೆ ಅಲ್ಲೊಂದು( ಚಿತ್ರದುರ್ಗ ಜಿಲ್ಲೆಯಲ್ಲಿ) ಒಂದು ಸುಂದರ ಕಣಿವೆ ಇದೆ ಎಂದು ನಿರೀಕ್ಷಿಸಿರಲಿಲ್ಲ. ಅದೇ ಮಾರಿಕಣಿವೆ.
ಅದರ ರಮಣೀಯತೆ ಕಂಡವರಿಗೆ ಗೊತ್ತು... ಬಯಲು ನಾಡಿನಲ್ಲೊಂದು ಅದ್ಭುತ ಬೆಟ್ಟ ಗುಡ್ಡಗಳ ಶ್ರೇಣಿ. ನಡುವೆ ಹರಿಯುತಿಹಳು ವೇದವತಿ. ಅದಕ್ಕೆ ಅಡ್ಡಲಾಗಿ ಕಟ್ಟಿರುವ ಅಣೆಕಟ್ಟೆ 'ವಾಣಿವಿಲಾಸ ಸಾಗರ'.…
ವಿಧ: ಚರ್ಚೆಯ ವಿಷಯ
January 20, 2007
ನಾವು ಇಲ್ಲ್ಲಿ ಬರೆಯುವಾಗ ಎಷ್ಟೊ ತಪ್ಪುಗಳು ( ಅಲ್ಪ ಪ್ರಾಣ, ಮಹಾ ಪ್ರಾಣ) ಮತ್ತು ಇನ್ನಿತರ ವ್ಯಾಕರಣಕ್ಕೆ ಸಂಬಂಧಿಸಿದ ತಪ್ಪುಗಳು ಅವ್ಯಾಹತವಾಗಿ ಆಗಿಹೋಗುತ್ತವೆ. ಓದುವವರಿಗೆ ಆಭಾಸವಾಗುತ್ತದೆ.
ಆದ್ದರಿಂದ ಒಂದು ವ್ಯಾಕರಣ ನಿಯಮಗಳನ್ನು ಪರೀಕ್ಷಿಸುವ 'ಚೆಕರ್' ನ್ನು ಸಂಪದಗಳಲ್ಲಿ ಅಳವಡಿಸುವುದು ಸೂಕ್ತವಲ್ಲವೆ? ಅಥವ ಈಗಾಗಲೆ ಇಂಥ ಚೆಕರ್ ಇದ್ದರೆ ಅದನ್ನು ಉಪಯೋಗಿಸುವ ಬಗ್ಗೆ ಬಲ್ಲವರು ತಿಳಿಸಿ
ನೀವೇನನ್ನುತ್ತೀರಿ?
ವಿಧ: ಬ್ಲಾಗ್ ಬರಹ
January 20, 2007
"ಪರ್ಯಾಯ ಶಕ್ತಿ ಮೂಲ"ಗಳ (ಗಾಳಿಯಿಂದ ಅಥವಾ ಸೂರ್ಯನ ಬೆಳಕಿನಿಂದ ವಿದ್ಯುತ್ ಉತ್ಪಾದಿಸುವ ಕ್ರಮ) ಬಗ್ಗೆ ಇತ್ತೀಚಿಗೆ ಹಲವಾರು ಕಡೆ ಕೇಳಿರುತ್ತೀವಿ, ಓದಿರುತ್ತೀವಿ. ವಿದ್ಯುತ್ ಅಭಾವದ ಈ ದಿನಗಳಲ್ಲಿ, ಪರ್ಯಾಯ ಶಕ್ತಿ ಮೂಲಗಳು ಹಿಂದೆಂದಿಗಿಂತಲೂ ಹೆಚ್ಚು ಪ್ರಸ್ತುತ. ಈ ನಿಟ್ಟಿನಲ್ಲಿ ಬರಿದೆ ಮಾತನಾಡದೇ, "ಮಾಡಿ ತೋರಿಸುವ" ಮೂಲಕ ಎಲ್ಲರ ಗಮನ ಸೆಳೆಯುತ್ತಿರುವ ಖಾಸಗಿ ಸಂಸ್ಥೆಯೊಂದರ ಬಗ್ಗೆ ನಿಮಗೆ ಗೊತ್ತಾ? "ಗೂಗಲ್" ಸಂಸ್ಥೆ ಈ ವಿಷಯದಲ್ಲಿ ಹೊಸ ಹೆಜ್ಜೆಯಿಟ್ಟು, ತನ್ನ "ಹಲವು ಪ್ರಥಮ"ಗಳ ಕಿರೀಟಕ್ಕೆ…
ವಿಧ: Basic page
January 20, 2007
ಕರ್ನಾಟಕ Vs ಕನ್ನಡ : ಕೆಲವು ಅನುಮಾನಗಳು
ಕರ್ತೃ H.S.R.Raghavend... ದಿನಾಂಕ ಜನವರಿ 18, 2007 - 21:16 ಚಿಂತನೆ
ಈ ಬರವಣಿಗೆಯ ತಲೆಬರೆಹವು ಅನೇಕ ಓದುಗರ ಹುಬ್ಬುಗಳು ಮೇಲೇರುವಂತೆ ಮಾಡುತ್ತದೆ. ಕರ್ನಾಟಕ ಮತ್ತು ಕನ್ನಡಗಳು ಒಂದೇ ಎಂದು ತಿಳಿದವರಿಗೆ, ಇದು ಅಚ್ಚರಿಯನ್ನು ಉಂಟುಮಾಡುತ್ತದೆ. ಆದರೆ ನಮ್ಮ ಈ ನಾಡಿನ ನಿಜವಾದ ಸ್ಥಿತಿಗತಿಗಳನ್ನು ಗಮನಿಸಿದಾಗ ಅಂತಹ ಆಶ್ಚರ್ಯಕ್ಕೆ ಕಾರಣವಿರುವಂತೆ ತೋರುವುದಿಲ್ಲ. ಕರ್ನಾಟಕ ಎನ್ನುವುದು ಒಂದು ಭೌಗೋಳಿಕ ಪ್ರದೇಶ. ಇಲ್ಲಿನ ಬಹುಪಾಲು ಜನರು ಬಳಸುವ…
ವಿಧ: ಬ್ಲಾಗ್ ಬರಹ
January 19, 2007
ರೋಲಂಡ್ ಬ್ಯಾರಿಂಗ್ಟನ್: ತನ್ನ ೧೯ನೇ ವಯಸ್ಸಿನಲ್ಲಿ ೧೯೯೯-೨೦೦೦ ಋತುವಿನಲ್ಲಿ ಕರ್ನಾಟಕ ರಣಜಿ ತಂಡಕ್ಕೆ ಆಯ್ಕೆಯಾದ ಬ್ಯಾರಿಂಗ್ಟನ್, ತನ್ನ ಪ್ರಥಮ ಪಂದ್ಯದಲ್ಲೇ ಕೇರಳ ವಿರುದ್ಧ ಶತಕದ ಬಾರಿಯನ್ನು ಆಡಿದರು. ಗಳಿಸಿದ್ದು ೧೦೬ ಓಟಗಳನ್ನು. ಆರಂಭಿಕ ಆಟಗಾರನಾಗಿ ಕಿರಿಯರ ಪಂದ್ಯಾಟಗಳಲ್ಲಿ ಓಟಗಳನ್ನು ಸೂರೆಗೈದ ಬ್ಯಾರಿಂಗ್ಟನ್, ರಣಜಿ ಪಂದ್ಯಗಳಲ್ಲೂ ತನ್ನ ಉತ್ತಮ ಆಟವನ್ನು ಮುಂದುವರಿಸಿದರು. ಪ್ರಥಮ ಋತುವಿನ ೬ ಪಂದ್ಯಗಳಲ್ಲಿ ೪೬.೨೫ ಸರಾಸರಿಯಲ್ಲಿ ೩೭೦ ಓಟಗಳನ್ನು ಗಳಿಸಿದರು. ೧೯ರ ಹುಡುಗನಿಗೆ ಭರವಸೆಯ…
ವಿಧ: Basic page
January 19, 2007
ಬ್ಲಾಗ್ ಮೂಲಕ ಆದಾಯ ಬ್ಲಾಗ್ ಬರೆದು ಅಂತರ್ಜಾಲದಲ್ಲಿ ಹಾಕುವುದು ಈಗ ಹಲವರ ಹವ್ಯಾಸ. ಆದರೆ ಅವನ್ನು ಜನಪ್ರಿಯಗೊಳಿಸುವುದು ಸುಲಭದ ಮಾತಲ್ಲ. ತಿಂಗಳಿಗೆ ದಶಲಕ್ಷ ಓದುಗರನ್ನು ಆಕರ್ಷಿಸುವ ಭಾರತೀಯ ಬ್ಲಾಗ್‌ಗಳೂ ಇವೆ. ಅಮಿತ್ ಅಗರ್‌ವಾಲ್ ಎಂಬವರ ತಂತ್ರಜ್ಞಾನದ ಬಗೆಗಿನ ಬ್ಲಾಗ್ "ಡಿಜಿಟಲ್ ಇನ್ಸ್ಪಿರೇಶನ್" ಇವುಗಳ ಪೈಕಿ ಒಂದು."ಗಾರ್ಡಿಯನ್","ವಾಲ್‌ಸ್ಟ್ರೀಟ್ ಜರ್ನಲ್' ಅಂತಹ ಪತ್ರಿಕೆಯ ಅಂಕಣಕಾರ ಅಮಿತ್ ವರ್ಮಾ ಅವರ "ಇಂಡಿಯಾ ಅನ್‌ಕಟ್" ಕೂಡಾ ಎರಡು ಲಕ್ಷ ಓದುಗರನ್ನು ಆಕರ್ಷಿಸುತ್ತದಂತೆ. ಹೀಗಾಗಿ…