ಅಂಭೇಡ್ಕರ್.

ಅಂಭೇಡ್ಕರ್.

ಅಂಭೇಡ್ಕರ್

ಬೇಡಜನಕೆ ಬೇಡಬೇಡಿರೆಂದ ಅಂಭೇಡ್ಕರ್
ಕಾಡುಜನರ ಕಾಡಬೇಡಿರೆಂದ ಅಂಭೇಡ್ಕರ್
ಬೇಡಜನರ ಭೀಮನು
ಕಾಡುಜನರ ರಾಮನು
ನಾಡಜನರ ನಾಡಿಮಿಡಿತವಾದ ಅಂಭೇಡ್ಕರ್//

ರಾಮಜಿಯ ಪುತ್ರನಿವ ಭೀಮ ಅಂಭೇಡ್ಕರ್
ಗುರೂಜಿಯ ನಾಮಹೋತ್ತ ಧೀಮ ಅಂಭೇಡ್ಕರ್
ಕಲಿಯುಗದ ಕಲ್ಕಿಯು
ಸಂವಿಧಾನ ಶಿಲ್ಪಿಯು
ವಿದ್ಯೆಯಿಂದ ಯುದ್ಧಗೆದ್ದ ಬುದ್ಧ ಅಂಭೇಡ್ಕರ್/

ಜಾತಿಭೇದ ಭೇದಿಸಿದ ವೀರ ಅಂಭೇಡ್ಕರ್
ಮತಾಂಧರ ಸೆದೆಬಡಿದ ಶೂರ ಅಂಭೇಡ್ಕರ್
ಹರಿಜನಕೆ ಹರಿಯಿವ
ಗಿರಿಜನಕೆ ಗಿರಿಯಿವ
ಕಿರಿಯರಿಗೆ ಸಿರಿಯುಡಿಸಿದ ದೊರೆಯು ಅಂಭೇಡ್ಕರ್/

ಭಾರತಿಯ ಭಾರಕಳೆದ ಭರತ ಅಂಭೇಡ್ಕರ್
ಸಮರಸದ ಕಾರ್ಯದಲ್ಲಿ ನಿರತ ಅಂಭೇಡ್ಕರ್
ವಿದ್ಯೆಯಲ್ಲಿ ಶುದ್ಧನು
ಜನರಮನವ ಗೆದ್ದನು
ಬಿದ್ದಜನರ ಮೇಲೆತ್ತಿದ ಸಿದ್ಧ ಅಂಭೇಡ್ಕರ್
                      ಸಿದ್ಧಾರ್ಥ ಅಂಭೇಡ್ಕರ್//

ಆಹೋರಾತ್ರ.
ಸಮಯ:- ೧೫:೨೦.
೧೫/೦೪/೦೬.

Rating
No votes yet