ಅತಿ ಸಣ್ಣ ಕತೆ - " ನನ್ನ ಹೆಸರು"
ಒಂದು ದಿನ ಬೆಳಿಗ್ಗೆ ಹೀಗೆ ನಗರದ ಯಾವುದೋ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಇದ್ದಕ್ಕಿದ್ದಂತೆ ಒಂದು ಪ್ರಶ್ನೆ ನನ್ನನ್ನು ಕಾಡತೊಡಗಿತು. ಏನಪ್ಪಾ ಅದು ಅಂಥಹ ಪ್ರಶ್ನೆ ಅಂದರೆ “ನನ್ನ ಹೆಸರೇನು ?” ಎಂಬುದು. ಯಾಕೋ ಏನೋ ಎಷ್ಟು ಪ್ರಯತ್ನಿಸಿದರೂ ನನ್ನ ಹೆಸರು ಮಾತ್ರ ನೆನಪಿಗೆ ಬರಲಿಲ್ಲ. ಎಷ್ಟೇ ತಿಪ್ಪರಲಾಗ ಹಾಕಿ ಯೋಚಿಸಿದರೂ ಅಷ್ಟೇ, ನನ್ನ ಕಿಸೆ, ಫರ್ಸಿನೊಳಗಿನ ಹಳೆಯ ಕಾಗದದ ಚೂರುಗಳನ್ನು ಹುಡುಕಿದರೂ ಅಷ್ಟೆ, ನನ್ನ ಹೆಸರು ಮಾತ್ರ ನೆನಪಿಗೆ ಬರುತ್ತಿಲ್ಲ. ಹೋದರೆ ಹೋಗಲಿ ಅದಕ್ಯಾಕೆ ಅಷ್ಟೊಂದು ತಲೆ ಕೆಡಿಸಿಕೊಳ್ಳಬೇಕು ಅಂದರೆ, ತಲೆಯೊಳಗೆ ಹುಳದಂತೆ ಕೊರೆಯುತ್ತಿದ್ದ ಆ ಪ್ರಶ್ನೆ ನನ್ನನ್ನು ಬಿಡಬೇಕಲ್ಲ. ಅದು ಇನ್ನಷ್ಟು ಆಳವಾಗಿ ನನ್ನ ಮಿದುಳನ್ನು ಕೊರೆಯತೊಡಗಿತು. ಏನಾದರೂ ಆಗಲಿ ನನ್ನ ಹೆಸರನ್ನು ಕಂಡುಕೊಳ್ಳಲೇ ಬೇಕೆಂದು ನನ್ನೊಬ್ಬ ಆತ್ಮೀಯ ಗೆಳಯನಿಗೂ ಫೋನಾಯಿಸಿದೆ. ಅವನು “ಬೆಳಿಗ್ಗೆ ಬೆಳಿಗ್ಗೆ ತಮಾಷೆ ಮಾಡಿ ತಲೆ ತಿನ್ನಲು ಬೇರೆ ಯಾರೂ ಸಿಗಲಿಲ್ಲವೇ?” ಎನ್ನುತ್ತ ಮಾತು ಮುಂದುವರಿಸಿದನೆ ಹೊರತು ನನ್ನ ಹೆಸರನ್ನು ಮಾತ್ರ ಹೇಳಲಿಲ್ಲ. ಅವನು ಹೇಳದಿದ್ದರೆ ಹೋಗಲಿ ಒಂದು ಲೋಟ ಚಹಾ ಕುಡಿದರೆ ಉತ್ತಜಿತ ನನ್ನ ತಲೆ ನನ್ನ ಹೆಸರನ್ನು ನೆನಪಿಸಿಕೊಳ್ಳಬಹುದೆಂದು ಹತ್ತಿರವೇ ಇದ್ದ ಯಾವುದೋ ಒಂದು ಹೋಟೆಲಿಗೆ ನುಗ್ಗಿದೆ. ಚಹಾ ಕುಡಿದರೂ ಅಷ್ಟೇ, ಹೆಸರು ಮಾತ್ರ ಹೊಳೆಯಲಿಲ್ಲ. ಅಲ್ಲಿಯೇ ದುಡ್ಡನ್ನು ಎಣಿಸುತ್ತಿದ್ದ ಹೋಟೆಲ್ ಮಾಲಿಕನನ್ನು ಒಮ್ಮೆ ಕೇಳೋಣ ಎನಿಸಿತು.
“ಯಾರಯ್ಯ ನೀನು ? ಬೆಳಿಗ್ಗೆ ಬೆಳಿಗ್ಗೆ ತಲೆ ತಿನ್ನುತ್ತಿಯ. ನೀನೇನು ಮುಖ್ಯಮಂತ್ರಿಯೋ , ಸಿನಿಮಾ ಹೀರೋನ ಅಥವಾ ಮಹಾನ್ ಸಾಧಕನ ನಿನ್ನ ಹೆಸರು ಕೇಳಿದೊಡನೆ ಹೇಳಲು” ಎನ್ನುತ್ತ ವಿಚಿತ್ರವಾಗಿ ನನ್ನನ್ನು ನೋಡತೊಡಗಿದ. ಅಲ್ಲಿಯೂ ಇನ್ನೂ ಹೆಚ್ಚು ಹೊತ್ತು ನಿಲ್ಲಲಾಗದೆ ಮನೆಯಕಡೆಯ ದಾರಿ ಹಿಡಿದೆ.
ದಾರಿಯುದ್ದಕ್ಕೂ ಎಷ್ಟೋ ದೇವರ ಚಿತ್ರಗಳನ್ನೋ , ಯಾರದೊ ಪ್ರತಿಮೆಗಳನ್ನೋ , ಅಂಗಡಿಯ ಮೇಲೆ ಜಾಹಿರಾತಿಗೆ ಹಾಕಿದ ಸಿನಿಮಾ ತಾರೆಯರ , ಕ್ರಿಕೆಟ್ ಆಟಗಾರರ ಚಿತ್ರಗಳನ್ನೆಲ್ಲ ನೋಡಿದೆ. ಆಶ್ಚರ್ಯ ಎಂದರೆ ಅವರೆಲ್ಲರ ಹೆಸರೂ ನೋಡಿದೊಡನೆಯೇ ಥಟ್ ಅಂತ ನನಗೆ ನೆನಪಿಗೆ ಬರುತ್ತಿದೆ. ಅವರೆಲ್ಲ ಸಾಧಕರು ಅಂತಲೋ ಗೊತ್ತಿಲ್ಲ. ಆದರೆ ಅವರ ಹೆಸರು ನೆನಪಾದರೂ ನನ್ನ ಹೆಸರು ಯಾಕೆ ನೆನಪಾಗಲಿಲ್ಲ ಎಂಬುದು ಅರ್ಥವಾಗಲಿಲ್ಲ .
ಇದೇ ಯೋಚನೆಯಲ್ಲಿ ಮನೆಯನ್ನು ತಲುಪಿದೆ. ಮನೆಯೊಳಗೆ ಪ್ರವೇಶಿಸಿದ ಕೂಡಲೇ , ಇದ್ದಕ್ಕಿದ್ದಂತೆಯೇ ಮೆದುಳಿನ ಮೂಲೆಯಲ್ಲಿ ಎಲ್ಲೋ ಹುದುಗಿದ್ದ ನನ್ನ ಹೆಸರು ಮೇಲೆದ್ದು ಬಂದಿತು.
ಆಗಲೇ ನನಗೆ ಅರ್ಥವಾಗಿದ್ದು ಸಮಾಜದಲ್ಲಿ ನನ್ನ ಹೆಸರಿನ ಮಹತ್ವ !
Comments
ನಿಮ್ಮ ಹೆಸರನ್ನು ನೀವು ಮರೆತು
ನಿಮ್ಮ ಹೆಸರನ್ನು ನೀವು ಮರೆತು ಹೋಗುವುದು ಸಹಜ ಬಿಡಿ, ಏಕೆಂದರೆ ನಿಮ್ಮ ಅಪ್ಪ ನೀವು ಹುಟ್ಟಿದಾಗ್ಯಾವಾಗಲೋ ಆ ಹೆಸರನ್ನಿಟ್ಟಿದ್ದರಲ್ಲವೇ :))
ಅತೀ ಸಣ್ಣ ಕಥೆ: ಜೀವನ ಎನ್ನುವ ಅತೀ ಸಣ್ಣ ಕಥೆಯೊಂದನ್ನು ಹಿಂದೊಮ್ಮೆ ಸಂಪದದಲ್ಲಿ ಪಾರ್ಥಸಾರಥಿಯವರು ಬರೆದ ಕಥೆಯಾಗಿತ್ತು. ಇಲ್ಲಿದೆ ನೋಡಿ ಅದರ ಕೊಂಡಿ http://sampada.net/blog/%E0%B2%B8%E0%B2%A3%E0%B3%8D%E0%B2%A3-%E0%B2%95%… ಅದೇ ರೀತಿ ಇದೂ ಕೂಡ ಅತ್ಯಂತ ಸಣ್ಣ ಕಥೆಯೇನೋ ಅಂತಾ ಕುತೂಹಲಕ್ಕಾಗಿ ಓದಿದೆ. ಕಡೆಯಲ್ಲಿ ಹೆಸರಿನ ಮಹತ್ವವನ್ನು ಚೆನ್ನಾಗಿ ತಿಳಿಸಿಕೊಟ್ಟಿದ್ದೀರ ನಾಗರಾಜ ಭಟ್ಟರೆ.
In reply to ನಿಮ್ಮ ಹೆಸರನ್ನು ನೀವು ಮರೆತು by makara
ಧನ್ಯವಾದಗಳು ನಿಮ್ಮ
ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ .. ಹೀಗೇ ಜಗತ್ತಿನ ಬೇರೆ ಬೇರೆ ಭಾಷೆಯಲ್ಲಿ ಬರೆದ ಅತಿ ಸಣ್ಣ ಕಥೆಗಳ ಪ್ರಕಾರದ ಒಂದಿಷ್ಟು ಕಥೆಗಳನ್ನು ಓದುವಾಗ ಹೀಗೇಕೆ ಪ್ರಯತ್ನಿಸಬಾರದು ಅಂತ, ಹಾಗೇ ಒಂದಿಷ್ಟು ಪ್ರಯತ್ನ ಮಾಡಿದೆ ಈ ಪ್ರಕಾರದಲ್ಲಿ ಅಷ್ಟೆ .. ಅಲ್ಲದೇ ಕತೆ ಚಿಕ್ಕದಾದಷ್ಟು , ಓದುಗನನ್ನು ಬೇರೆ ಬೇರೆ ಆಯಾಮದಲ್ಲಿ ಯೋಚಿಸುವಂತೆ ಮಾಡುವುದು ಅಂತ ನಾನು ಭಾವಿಸಿದ್ದೇನೆ. ಆ ದಿಸೆಯಲ್ಲೂ ಒಂದು ಪ್ರಯತ್ನ ಅಷ್ಟೆ ,,
ನಾಗರಾಜ ಭಟ್ ರವರೆ, ಒಂದೊಂದು ಸರಿ
ನಾಗರಾಜ ಭಟ್ ರವರೆ, ಒಂದೊಂದು ಸರಿ ಹಾಗಾಗಿಬಿಡುತ್ತದೆ. ನಿಮ್ಮ ಲೇಖನ ಓದುತ್ತ, ಎರಡನೆ ಮಹಾಯುದ್ಧದಲ್ಲಿ ತನಗಿರಿಸಿಕೊಂಡ ಹೆಸರನ್ನೆ ಮರೆತು ಟ್ರೈನಿನಲ್ಲಿ ರಷ್ಯನ್ನನ ಜತೆ ಒದ್ದಾಡಿದ ಮಿತ್ರ ದೇಶದ ಸೈನಿಕನೊಬ್ಬನ ಕಥೆ ನೆನಪಾಯ್ತು (ತೇಜಸ್ವಿಯವರು ಅನುವಾದ ಮಾಡಿದ್ದು). ಹಾಗೆಯೆ ಈಚೆಗೆ ಇದೆ ತರಹದ ನನ್ನದೊಂದು ಅನುಭವವೂ 'ದಟ್ಸ್ ಕನ್ನಡ' ದಲ್ಲಿ ಪ್ರಕಟವಾಗಿದೆ - ಕೊಂಡಿಯನ್ನು ಗಿಂಡಿ ನೋಡಿ :-) - ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
http://kannada.oneindia.in/column/humor/2013/are-you-fond-of-hindi-song…
In reply to ನಾಗರಾಜ ಭಟ್ ರವರೆ, ಒಂದೊಂದು ಸರಿ by nageshamysore
ಧನ್ಯವಾದಗಳು ನಿಮ್ಮ
ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ .. ನಿಮ್ಮ ಬರವಣಿಗೆ ಚೆನ್ನಾಗಿದೆ .. ಧನ್ಯವಾದಗಳು ನಿಮ್ಮ ಬರಹವನ್ನು ಹಂಚಿದ್ದಕ್ಕೆ ..
ಚೆನ್ನಾಗಿದೆ. ಬೇರೆಯವರ ಚರ
ಚೆನ್ನಾಗಿದೆ. ಬೇರೆಯವರ ಚರ ದೂರವಾಣಿ ಸಂಖ್ಯೆಗಳು ನೆನಪಿರುವ ನಮಗೆ ನಮ್ಮ ಚರ ದೂರವಾಣಿಯ ಸಂಖ್ಯೆ ನೆನಪಿರುವುದಿಲ್ಲ! :)
In reply to ಚೆನ್ನಾಗಿದೆ. ಬೇರೆಯವರ ಚರ by kavinagaraj
ಅದು ಹಾಗಲ್ಲ, ನಾಗರಾಜರೇ,
ಅದು ಹಾಗಲ್ಲ, ನಾಗರಾಜರೇ, ಗೂಡಾರ್ಥದಲ್ಲಿ ಬರೆದಿದ್ದಾರೆ. ನಾನು ಯಾವ ಮಹಾ! ಅಂಥಾ ನೆನಪಿನಲ್ಲಿರಬೇಕು? ಅಂಥಾದ್ದೇನು ಸಾಧನೆ ಮಾಡಿರುವೆ? ಅಂತಾ ಆತ್ಮಾವಲೋಕನ ಮಾಡಿಕೊಂಡಿದ್ದಾರೆ.ನಾನು " ಸತ್ತಂತೆ ನಟಿಸಿದಾಗ " ಅಂತಾ ಒಂದು ಲೇಖನ ಸಂಪದದಲ್ಲಿಯೇ ಹಾಕಿದ್ದೆ. ಸತ್ತಾಗ ಹುಡುಕಿಕೊಂದು ಬರುವವರಾರು, ಎಂಬ ಅಣುಕು ಆ ಬರಹದ ವಸ್ತು. ಇಲ್ಲೂ ಹಾಗೇ.
In reply to ಅದು ಹಾಗಲ್ಲ, ನಾಗರಾಜರೇ, by hariharapurasridhar
:))
:))
ನಾಗರಾಜ್ ಭಟ್ ರವರೆ, ಲಕ್ಷ್ಮೀಕಾಂತ
ನಾಗರಾಜ್ ಭಟ್ ರವರೆ, ಲಕ್ಷ್ಮೀಕಾಂತ ಇಟ್ನಾಳ ರ ವಂದನೆಗಳು. 'ನನ್ನ ಹೆಸರು' ಕತೆ ಚನ್ನಾಗಿದೆ. ಚಿಂತನೆಗೆ ಹಚ್ಚುತ್ತದೆ.
In reply to ನಾಗರಾಜ್ ಭಟ್ ರವರೆ, ಲಕ್ಷ್ಮೀಕಾಂತ by lpitnal@gmail.com
ಧನ್ಯವಾದಗಳು .. ಲಕ್ಷ್ಮೀಕಾಂತ
ಧನ್ಯವಾದಗಳು .. ಲಕ್ಷ್ಮೀಕಾಂತ ಇಟ್ನಾಳ ರವರೆ