ಇಂತ ಒಂದು ದಿನ ನನ್ನ ಜೀವನದಲ್ಲಿ ಮತ್ತೆ ಬಾರದಿರಲಿ.

ಇಂತ ಒಂದು ದಿನ ನನ್ನ ಜೀವನದಲ್ಲಿ ಮತ್ತೆ ಬಾರದಿರಲಿ.

ನಾನು ಮತ್ತು ನನ್ನ ತಾಯಿ ಇಬ್ಬರು ಅಂಗಡಿಗೆ ಹೋಗಬೇಕು ಎಂದು ನಾನು ನನ್ನ ಪಾಸ್ ನ ಬ್ಯಾಗ್ ಇಂದ ತೆಗೆದು ಕೊಂಡು ಅಂಗಡಿಗೆ ಹೋಗಿ ಬಂದ್ವಿ . ಮಾರನೇ ದಿನ ಕಾಲೇಜ್ ಗೆ ಹೋಗೋ ಗಡಿ ಬಿಡಿ ಯಲ್ಲಿ ಪಾಸ್ ನ ಬ್ಯಾಗ್ ಗೆ ಹಾಕಿ ಕೊಳ್ಳುವುದನ್ನ ಮರೆತು ಬಿಟ್ಟೆ . ಹಾಗೆಯೇ ಬಸ್ ಹತ್ತಿಬಿಟ್ಟೆ . ನನ್ನ ದುರದೃಷ್ಟಕ್ಕೆ ಚೆಕ್ಕಿಂಗ್ ನವರು ಬಂದಿಬಿಟ್ಟರು . ನನಗೆ ಏನು ಮಾಡುವುದು ಎಂದು ತೋಚಲೇ ಇಲ್ಲ. ನನ್ನನು ಗಮನಿಸಿದ ಚೆಕ್ಕಿಂಗ್ ನವರು ಪಾಸ್ ಇಲ್ಲ ಎನ್ನುತಿದ್ದ ಹಾಗೆ, ಎದ್ದು ಬಾಮ್ಮ ಈ ಕಡೆ ಎಂದು ಅವಾಜ್ ಹಾಕಿ ಕರುದ್ರು. ನಂಗೆ ಏನು ತೋಚಲೇ ಇಲ್ಲ. ಇಡೀ ಬಸ್ ಜನ ನನ್ನ ನೋಡುತಿದ್ದರು. ನಂಗೆ ಅಳು ತಡೆಯಲು ಆಗಲಿಲ್ಲ. ಚೆಕ್ಕಿಂಗ್ ನವರು ಒಬ್ಬರು ಗಂಡಸು ಇನ್ನೊಬ್ಬರು ಹೆಂಗಸು.ಏನು ಬಯ್ಯಲಿಲ್ಲ ಅವರು ಆದರೆ ನನಗೆ ಆಗಿರುವ ಅವಮಾನನ ತಡಿಯೋಕೆ ಆಗಲಿಲ್ಲ ನನಗೆ. ನಾ ತುಂಬ ಅಳುತ್ತಿದೆ ಕಡೆಗೆ ಆ ಇಬ್ಬರು ಚೆಕ್ಕಿಂಗ್ ನವರು ನನ್ನ ಪರಿಸ್ತಿತಿ ನೋಡಿ ನಂಗೆ ವಾರ್ನ್ ಮಾಡಿ ಹಾಗೆಯೇ ನನ್ನನು ಸಮಾದಾನ ಮಾಡಿ ಹೋದರು. ಅವರು ನನಗೆ, ಇದು ಸಹಜ ಹೋಗ್ಲಿ ಬಿಡಮ್ಮ ನಾವು ಆಗಿರೋದಕ್ಕೆ ನೀನ್ ಬಚಾವ್ ಆಗಿದೀಯ ಅಂತ ನಂಗೆ ಸಮಾದಾನ ಮಾಡ್ತಿದ್ರು ನಾನ್ ಅಳ್ತಾನೆ ಇದ್ದೆ . ನನ್ನನು ನೋಡಿ ಅಲ್ಲಿ ಇರೋ ಜನಕೆಲ್ಲಾ ಹಾಗು ಆ ಚೆಕ್ಕಿಂಗ್ ನವ್ರಿಗೆಲ್ಲ ನಗು ಬರ್ತಿತ್ತು. ಆದ್ರೆ ನಂಗೆ ಅಳು ತಡಿಯೋಕೆ ಆಗ್ಲಿಲ್ಲ . ನಾನ್ ಕಾಲೇಜ್ ಗೆ ಹೋಗಲಿಲ್ಲ ತುಂಬ ತಲೆ ನೋವ್ವು ಬಂದಿತ್ತು. ನಾ ಮನೆಗೆ ವಾಪಾಸ್ ಬಂದು ಬಿಟ್ಟೆ .

Rating
No votes yet

Comments