ಉಬಂಟುಇಂದ ವಿಂಡೋಸ್ ರಿಕವರ್ ಮಾಡೊದು ಹೇಗೆ?

ಉಬಂಟುಇಂದ ವಿಂಡೋಸ್ ರಿಕವರ್ ಮಾಡೊದು ಹೇಗೆ?

ಸಾಮಾನ್ಯವಾಗಿ ಉಬಂಟು ಹಾಕಿದ ನಂತರ ವಿಂಡೋಸ್ ಹಾಕಿದ್ರೆ, ಉಬಂಟು ಕಾಣುವುದಿಲ್ಲ. ಇದಕ್ಕೆ ಮಾಡಬೇಕ್ಕಾದ್ದು ಇಷ್ಟೆ. ವಿಂಡೋಸ್ ನ MBR ಬದಲಿಸಬೇಕಾಗುತ್ತದೆ.
ಇದಕ್ಕೆ ಬೇಕಾಗುವುದು ಯಾವುದಾದರು ಒಂದು LINUX Live CD/DVD. ಇದರಿಂದ ನಿಮ್ಮ ಉಬಂಟುವನ್ನು recover ಮಾಡಬಹುದು.

ಮೊದಲಿಗೆ...

೧> ನಿಮ್ಮ LINUX live CD/DVD ಇಂದ system ಬೂಟ್ ಮಾಡಿ.

ನಂತರ,

೨>ಕೆಳಕಂಡಲ್ಲಿ terminal open ಮಾಡಿ,

Applications -> Accessories -> Terminal

೩> teminal ತೆಗೆದ ಮೇಲೆ,

sudo grub ಎಂದು type ಮಾಡಿ

ಇದು ನಿಮ್ಮನ್ನು ನಿಮ್ಮ grub editing tool ಗೆ ಕರೆದೊಯ್ಯುತ್ತದೆ. ಹೀಗೆ..

[ Minimal BASH-like line editing is supported. For
the first word, TAB lists possible command
completions. Anywhere else TAB lists the possible
completions of a device/filename. ]

grub>

೪> ಅಲ್ಲಿ
find /boot/grub/stage1 ಎಂದು type ಮಾಡಿ
ಮೇಲ್ಕಂಡ command error ಕೊಟ್ರೆ,
find /grub/stage1 try ಮಾಡಿ.
೫>ಮೇಲ್ಕಂಡ command ಕೊಡುವ ಮಾಹಿತಿಯ ಪ್ರಕಾರ, root device ಸೆಟ್ ಮಾಡಿ,

grub> root (hdX,Y) (X ಮತ್ತು Yಅನ್ನು ಸರು\ಇಯಾಗಿ ಗುರುತಿಸಿ)

೬> grub install ಮಾಡಿ,

grub> setup (hd0)

೭> grub ನಲ್ಲಿ ಮಾಡುವುದಿಷ್ಟೆ. ಅದರಿಂದ ಹೊರಬನ್ನಿ,

grub> quit

೮> ನಂತರ, ನಿಮ್ಮ system ಅನ್ನು reboot ಮಾಡಿ.

ಇಷ್ಟಾದ ನಂತರ, ನಿಮ್ಮ grub ನಲ್ಲಿ ಉಬಂಟು ಹಾಗು ವಿಂಡೋಸ್ ಎರಡು OSನ entry ಇರಬೇಕು... :)

ಇದನ್ನು ಅನುಸರಿರಿಸಿದ ಮೆಲೆ ಕೂಡ ನಿಮ್ಮ OS ತೊರಲ್ಲಿಲ್ಲ ವಾದರೆ, ಕೆಳಕಂಡ link ಅನ್ನು ಕ್ಲಿಕ್ಕಿಸಿ...

https://help.ubuntu.com/community/RecoveringUbuntuAfterInstallingWindows

_ವಾದಿರಾಜ ಆಚಾರ್ಯ

Rating
No votes yet

Comments