ಎಂದು ಜೀವಕೆ ಮುಕ್ತಿ

ಎಂದು ಜೀವಕೆ ಮುಕ್ತಿ

ಹುಳಿಯನು ಹಿಂಡಿ ರಸವ ತೆಗೆದಾಗ ಹಣ್ಣಿಗೆ ಮುಕ್ತಿ
ಒಳಿತಿನಿಂದ ಕೆಟ್ಟದೆಲ್ಲ ಕಿತ್ತೆಸೆದಾಗ ಬಾಳಿಗೆ ಮುಕ್ತಿ
ಅರಳಿದ ಹೂ ಹಣ್ಣಾದಾಗ ಹೂವಿಗೆ ಸಂತೃಪ್ತಿ
ಸಾಧನೆ ಮಾಡದೆ ಸಾಯುವ ವೇಳೆ ಜೀವಕೆ ಅತೃಪ್ತಿ

ವ್ರುದ್ದಾಪ್ಯದಲಿ ತಂದೆತಾಯಿಯ ಪೊರೆವುದೆ ಭಕ್ತಿ
ಜೀವನ ಚಕ್ರವ್ಯೂಹವ ಬೇಧಿಸಲು ಬೇಕು ಪ್ರೀತಿಯ ಶಕ್ತಿ
ಆಸೆಗಳು ನಾಗಾಲೋಟದಲಿ ಓಡುತಿವೆ ನೋಡು
ಹಿಡಿದಿಡಲಾಗದಿದ್ದರೆ ಧ್ಯಾನದಿಂದ ಅವನೆಲ್ಲ ಸುಟ್ಟುಬಿಡು

ಬದುಕಿನ ಬಂಡಿಯ ಎಳೆಯುವ ಹೆಗಲಿಗೆ ಇನ್ನೆಷ್ಟು ಹೊರೆ
ಬಂಧನಗಳೆಲ್ಲ ಬಡಿದಾಡಿದರೆ ಹೃದಯಕೆ ಆರದ ಬರೆ
ಅತ್ರುಪ್ತಿಗಳನು ಸರಿಮಾಡುವುದರಲ್ಲೇ ಜೀವನ ಸೆರೆ
ದೇವರೇ ನನ್ನನು ಕಾಪಾಡೆಂದು ಬಂದಿಹೆ ನಿನ್ನಲಿ ಮೊರೆ

- Vರ ( Venkatesha ರಂಗಯ್ಯ )

Rating
No votes yet

Comments