ಎನ್ನ ಕಾಡುತಿರುವಪ್ರಶ್ನೆಗಳು

ಎನ್ನ ಕಾಡುತಿರುವಪ್ರಶ್ನೆಗಳು

ಒಳ್ಳೆಯರೆಂಬ ಹಣೆಪಟ್ಟಿ ಕಟ್ಟಿ, ಸುಮ್ಮನೆ ಸಹಾಯ ಕೇಳೋದು...ಮಾಡಿದರೆ ಒಳ್ಳೆಯವ, ಇಲ್ಲದಿದ್ದರೆ ಕೆಟ್ಟವರೆ?

ಪ್ರೀತಿಸುತ್ತೇವೆ, ಹುಡುಗ ಅಥವಾ ಹುಡುಗಿ ಕೈ ಕೊಟ್ಟ ಮೇಲೆ, ಸಮಾಜ ಯಾಕೆ ದೇವದಾಸನಿಗೆ ಹೊಲಿಸುತ್ತ್ತಾರೆ, ಮನಸಿಗೆ ಏಕೆ ದೈರ್ಯ ತುಂಬುವುದಿಲ್ಲ?

ಕಾಲ ಬದಲಾದಂತೆ ನಾವು ಬದಲಾಗುತ್ತೇವೆ, ಆದರೆ ಗಡಿಯಾರದಲ್ಲಿ ಅದೇ ಸಮಯ, ಆದೆ ಮುಳ್ಳು?

ದೇವರು ಇದ್ದಾನೆ ಅಂದರೆ ಇದ್ದಾನೆ ಇಲ್ಲ ಅಂದರೆ ಇಲ್ಲ, ಯಾಕೀ ಗೊಂದಲ?

ಪರೀಕ್ಷೆಯಲ್ಲಿ ಪಾಸಾದರೆ ಭುದ್ದಿವಂತ, ಇಲ್ಲವೆಂದರೆ ದಡ್ಡನೆ?

ಕಾಸಿದ್ದರೆ ಕೈಲಾಸ, ಇಲ್ಲದಿದರೆ ನರಕವೆಕೆ?

ಹುಟ್ಟು ಸಾವಿನಾಚೆ ಏನಿದೆ?

ಅಮೆರಿಕಕ್ಕೆ ಶೀತವಾದರೆ ನಮಗೆ ಏಕೆ ನೆಗಡಿ?

ಎಲ್ಲರು ಬುದ್ದ, ವಿವೇಕಾನಂದ, ಗಾಂಧೀ....ಆಗುವುದಿಲ್ಲ ಏಕೆ?

ಹಣವಂತನಿಗೆ ರತ್ನಗಂಬಳಿ, ಬಡವನಿಗೆ ಯಾಕೆ ಕ್ಷುಲ್ಲಕ ಸ್ತಿತಿ?

ITಗೆ ಗೋಸ್ಕರ, ಇಂಡಿಯಾ ಬುದ್ದಿವಂತರ ಸಂತೆಯಾಯಿತು, ಅದಕ್ಕೆ ಮೊದಲು ನಾವೆಲ್ಲ ದಡ್ದರೆ?

ಅಮೇರಿಕಾ ಮಾತ್ರ ಯುದ್ದ ಮಾಡ ಬಹುದು, ನಾವೇಕೆ ಮಾಡುವ ಹಾಗಿಲ್ಲ?

ಅಮೇರಿಕಾ ಬಜೆಟ್ ಮಂಡಿಸಿದರೆ, ನಮ್ಮ ಬಿಸ್ನೇಸ್ಸ್ ಗೈಂಟ್'ಸ ಯಾಕೆ ಜಾತಕ ಪಕ್ಷಿಯಂತೆ ಗತಿ ಗೆಟ್ಟವರಂತೆ ಕಾಯುತ್ತಾರೆ, ಸ್ವಾಭಿಮಾನವಿಲ್ಲವೇ?

ನಮ್ಮ ದೇಶವನ್ನು ಬಿಟ್ಟು ಬೇರೆ ದೇಶವನ್ನು ಹೊಗಳುವ ಹೋಗಳು ಬಟ್ಟರು, ನಮ್ಮ ಸಂಸ್ಕೃತಿಯನ್ನು ಕಿಳುತನದಲ್ಲಿ ನೋಡುವವರಿಗೆ ಮುಕ್ತಿ ಎಂದು?

ಅಯ್ಯೋ ಹೀಗೆ ಎಷ್ಟೋ, ಉತ್ತ್ತರವಿಲ್ಲದ ಪ್ರಶ್ನೆಗಳಿವೆ...ಉತ್ತರಿಸುವಿರ ಗೆಳಯರೇ

Rating
No votes yet

Comments