ಎಲ್ಲಿರುವೆ?

ಎಲ್ಲಿರುವೆ?

ನೀ ಎಲ್ಲಿರುವೆಯೋ, ಹೇಗಿರುವೆಯೋ ನಾ ಕಾಣೆ,
ನಿನ್ನ ಪ್ರೀತಿಗಾಗಿ ಕಾಯುತಿರುವೆ ನಾನಿಲ್ಲಿ
ತೊರೆನಗೆ ಆ ನಿನ್ನ ಹಾಲ್ಬೇಳದಿಂಗಳ ಮೊಗವ
ಚಂದ್ರನೂ ನಾಚುತಿರುವನು ನಿನ್ನ ಕಂಡು.

ಆ ರವಿಗೆ ಹೇಳುವೆ, ಅವನ ಬಿಸಿಕಿರಣಗಳು ನಿನಗೆ ತಾಕದಿರಲೆಂದು
ಒಂದೊಮ್ಮೆ ತಾಕಿದರೆ, ನಾ ಕೊಡುವೆ ಆ ರವಿಗೆ ಶಿಕ್ಷೆ
ಮತ್ತೆಂದೂ ಬೆಳಗದ ಹಾಗೆ.

ನೀ ಎನಗೆ ನಾ ನಿನಗೆ ಎಂದು ಆ ಬ್ರಹ್ಮನೇ ಬರೆದಿರುವಾಗ
ಏತಕೆ ಈ ಕಣ್ಣುಮುಚ್ಚಾಲೆ ಆಟ.
ಬೇಗ ಬಾ ನನ್ನ ಬಳಿಗೆ.

ನೀ ನನಗಾಬೇಡ ಗಗನ ಕುಸುಮ
ನಾ ಕೊಡುವೆ ತಾವರೆ, ಕಮಲ, ಗುಲಾಬಿ, ಸೇವಂತಿಗೆ,
ಅದ ನೀ ಮುಡಿದು ಬೇಗ ಬಾ ನನ್ನ ಬಳಿಗೆ

ಈ ಒಂಟಿ ಜೀವನ ಸಾಕಾಗಿದೆ ಇಂದು
ಮನಸು ಬೇಡುತಿದೆ ಆಸರೆಯು ಬೇಕೆಂದು
ಈ ನನ್ನ ಆಸೆಯ ಪೂರೈಸುವೆಯ ಬಳಿ ಬಂದು?

ಬಾಳ ಪಯಣದ ಮದ್ಯದಲೆಲ್ಲೋ ಅಲೆಯುತ್ತಿರುವ
ಈ ಅಲೆಮಾರಿಗೆ ಆಸರೆಯಾಗಿ ಬಾ
ನಿನ್ನ ಕೈ ಬಿಡೆನು ಎಂದೆಂದಿಗೂ.

Rating
No votes yet

Comments