ಎಸ್ಸೆಮ್ಮೆಸ್ ಕವಿತೆ
ಕವಿತೆ ಬರೆಯಬೇಕು
ತಪ್ಪು, ತಪ್ಪು!
ಟೈಪು ಮಾಡಬೇಕು
ಟೈಪಿಸಲು ಕೂತರೆ, ಹಾಳಾದ್ದು,
ಎಲ್ಲ ಹಳೆಯ ಪ್ರತಿಮೆಗಳೇ
ಬೇಧಿಯಂತೆ ಒತ್ತರಿಸಿ ಬರುತ್ತವೆ
ಹೊಸ ಪ್ರತಿಮೆಗಳು ಬೇಕು
ಹೊಸ ವಸ್ತುಗಳು ಬೇಕು
ತಪಸ್ಸಿನಲ್ಲಿ ವಾಲ್ಮೀಕಿ ಹುತ್ತಗಟ್ಟಬೇಕು
ಪುರುಷೋತ್ತಮನ ರೂಪ ಚಿತ್ತಗಟ್ಟಬೇಕು
ಛೇ! ಮತ್ತೆ ಹಳೆಯ ರೂಪಕ
ನನಗೆ ಬಂದಿತು ತುಂಬ ಕೋಪ (LOL)
ರಾಮ "ರಾಮ"ವಾಗಿ ಯಾವ ಕಾಲವಾಯಿತು
ನಾನು ಹುತ್ತಗಟ್ಟದೇ ಎಷ್ಟು ವರ್ಷವಾದವು
ಕವಿತೆ ಏನಿದ್ದರೂ ಈಗ
ಎಸ್ಸೆಮ್ಮೆಸ್ಸಿನಂತೆ
ಚಾಟ್ ರೂಮಿನಂತೆ
ಕಾಲ್ ಸೆಂಟರಿನ ರಾತ್ರಿ ಕೆಲಸದಂತೆ
ಎಂಜಿರೋಡಿನ ಪಬ್ಬಿನಂತೆ
ಎಫ್ ಟೀವಿಯ ಮಾಡಲ್ಗಳಂತೆ
(ಇತ್ತೀಚೆ ಎಸ್ಸೆಮ್ಮೆಸ್ಸಿನಲ್ಲಿ ಬರೆದ ಒಂದು ಹಾಡಿಗೆ ಕರ್ನಾಟಕ ಸರ್ಕಾರದ ಅತ್ಯುತ್ತಮ ಗೀತಕಾರ ಪ್ರಶಸ್ತಿ ಸಿಕ್ಕಿತಂತೆ)
Rating