ಏನು ಮೋಜು ಏನು ಮೋಜಣ್ಣ

ಏನು ಮೋಜು ಏನು ಮೋಜಣ್ಣ

ಏನು ಮೋಜು ಏನು ಮೋಜಣ್ಣ

ಏನು ಮೋಜು ಏನು ಮೋಜಣ್ಣ  ||
ಒಮ್ಮೆ ಮಂತ್ರಿಯಾದ ಮೇಲೆ  |
ಎನು ಮೋಜು ಏನು ಮೋಜಣ್ಣ  ||ಪ||

ಉಚಿತ  ಸೈಟು ಬಂಗ್ಲೆ ಕಾರ್ ಗಳು
ಜೊತೆಗೆ ಮತ್ತೆ |
ಖಚಿತವಾಗಿ ಬರುವ ಮಾಮೂಲು ||
ಏನೇ ಆಗ್ಲಿ ಏನೇ ಹೋಗ್ಲಿ
ಇವರಿಗಲ್ಲಿ  ಮೋಜು ಮಸ್ತಿ |
ಮೈಯ ಕೊಬ್ಬ ಕರಗಲೆಂದು
ಮಾಡುತಾರೆ ಕುರ್ಚಿ ಕುಸ್ತಿ ||೧||

ಹೆಣ್ಣು ಮಣ್ಣು ಚಿನ್ನವೆಂಬುದು
ರಾಜಕೀಯ |
ಬಣ್ಣದಲ್ಲಿ ಕೊರತೆ ಇಲ್ಲವು ||
ಕೆಲಸವಿಲ್ಲ ಕಾರ್ಯವಿಲ್ಲ
ಬಿಡುವು ಮಾತ್ರ ಸಿಗುವುದಿಲ್ಲ |
ಅಲ್ಲಿ ಇಲ್ಲಿ ತಿಂದು ತೇಗಿ
ಬಿದ್ದು ಹೊರಳಿ ಬಿಡುವರಲ್ಲ  ||೨||

ಸತ್ಯವಿಲ್ಲದಿರುವ ಕಾರಣ |
ವಿಷಯವಿಲ್ಲ |
ಮಾಡಬೇಕು ಬರಿಯ ಭಾಷಣ ||
ಜೋತು ಬಿದ್ದ ಚಮಚಗಳನು
ಮಾಲೆ ಮಾಡಿ ಹಾಕಿಕೊಂಡು ||
ಹೆಂಡ ಖಂಡ ಉಂಡು ಕೊಂಡು
 ತಂಡ ತಂಡ ಸಾಕಿಕೊಂಡು ||೩|| 

                                                                                      - ಸದಾನಂದ

Rating
No votes yet

Comments