ಐ ಪಿ ಎಲ್ ಮತ್ತೂ ಸಂಪದ ಟೀಮೂ - ೨

ಐ ಪಿ ಎಲ್ ಮತ್ತೂ ಸಂಪದ ಟೀಮೂ - ೨

ಮನೆಯವರಿಗೆ ಒಂದು ಲೋಟ ಕಾಫಿ ಕೊಡು ಅಂತ ಹೇಳಿ ಸಾವರಿಸಿಕೊಳ್ಳಲು ಸೋಫಾ ಮೇಲೆ ಕುಳಿತೆ. ಕಾಫಿ ಕುಡಿದು ಮುಂದಿನ ಕಾಲ್ ಕವಿ ಸರ್ http://sampada.net/… ನಾ: ನಾಳೆ ಸಂಜೆ ಮ್ಯಾಚಿಗೆ ಹೋಗೋಣ ಟೀಮ್ ಸಮೇತ, ಬರ್ತೀರಾ? ಕ: ಆಯ್ತು ಚಿಕ್ಕು ಬರ್ತೀನಿ. ನಾ: ಒಳ್ಳೇದು, ಹಾಗಾದ್ರೆ ನಾಳೆ ಚಿನ್ನಸ್ವಾಮಿ ಸ್ಟೇಡಿಯಂ ಹತ್ತಿರ ಸಿಗೋಣ. ಕ: ಆಗಲಿ, ಮತ್ತೊಂದು ವಿಷಯ. ನಾ: ಹೇಳಿ. ಕ: ಬರುವಾಗ ಖಡ್ಗವನ್ನ ತಗೆದುಕೊಂಡು ಬರುತ್ತೇನೆ. ನಾ: ಅದೇನಕ್ಕೆ. ಕ: ಅಯ್ಯೋ ಚಿಕ್ಕು, ಈ ನಡ್ವೆ ದೆವ್ವ ಭೂತಗಳು ನಮ್ಮ ಸೋ ಕಾಲ್ಡ್ ಐ ಟಿ ಸಿಟಿಯಲ್ಲೂ ಬಂದಿವೆ, ಅದಕ್ಕೆ ಆ ಖಡ್ಗವನ್ನ ತರ್ತೀನಿ ಅಂದಿದ್ದು. ನಾ: ಮೊದಲು ಆ ಕೆಲ್ಸಾ ಮಾಡಿ. ಕ: ಹಾಗೆ ಮಾಡ್ಲೇಬೇಕು, ನೀವು ಇಂಜಿನಿಯರ್ಗಳು ದಂಡಕ್ಕೆ. ಒಂದು ಸಾಫ್ಟ್ವೇರ್ ಮಾಡಿ ಎಲ್ಲಾ ದೆವ್ವಗಳನ್ನ ಓಡಿಸೋದಲ್ವಾ? ನಾ: ಅಯ್ಯೋ ನಮ್ಮ ಕಷ್ಟ ಯಾಕೆ ಹೇಳ್ತೀರಾ, ಆ ಸಾಫ್ಟ್ವೇರ್ಗಳನ್ನ ಯೂಸ್ ಮಾಡೇ ದೆವ್ವಗಳನ್ನ ಸೃಷ್ಟಿ ಮಾಡ್ತಿದ್ದಾರೆ :( ಕ: ಹೋಗ್ಲಿ ಬಿಡು, ಬೇಜಾರಾಗ್ಬೇಡ. ಅದಕ್ಕೆ ಖಡ್ಗವೇ ಮದ್ದು. ನಾ: ಸರಿ ಹಾಗಿದ್ರೆ ನಾಳೆ ಸಿಗುವ. ನೆಕ್ಸ್ಟ್ ಗಣೇಶಣ್ಣಗೆ ಕಾಲ್ ಮಾಡಿದೆ ನಾ: ನಾಳೆ ಸಂಜೆ ಮ್ಯಾಚಿಗೆ ಹೋಗೋಣ ಟೀಮ್ ಸಮೇತ, ಬರ್ತೀರಾ? ಗ: ಮನೆಯವ್ರು, ಮಕ್ಳನ್ನ ಬಿಟ್ಟು ಬರೋದು ಕಷ್ಟ ಚಿಕ್ಕು, ಆಗಲ್ಲ ಹೋಗಿ ಬನ್ನಿ. ನಾ: ಸರಿ ಬಿಡಿ ಹಾಗೆ ಆಗ್ಲಿ ಗಣೇಶಣ್ಣ. ಮತ್ತೊಂದು ವಿಷ್ಯ. ಗ: ಏನದು? ನಾ: ಚೀರ್ ಗರ್ಲ್ಸ್ ಎದ್ರಿಗೆ ಸೀಟ್ ಸಿಕ್ಕಿದೆ. ಗ: ಹ್ಮ್ಮ್ ಹಾಂ (ಗಂಟಲು ಸರಿ ಮಾಡ್ಕೊಳ್ತಾ), ಚಿಕ್ಕು? ನಾ: ಆಯ್ತು ಗಣೇಶಣ್ಣ, ಇನ್ನೊಮ್ಮೆ ಒಟ್ಟಿಗೆ ಹೋಗೋಣ. ಗ: ಅಲ್ಲ ಚಿಕ್ಕು, ಇನ್ನೊಮ್ಮೆಯ ವಿಷ್ಯ ಆಚೆ ಇರ್ಲಿ. ಮನೆಯವ್ರು, ಮಕ್ಳನ್ನ ಮಾವನ ಮನೇಲಿ ಬಿಟ್ಟು ನಾನು ಮ್ಯಾಚ್ ನೋಡೋಕೆ ಬರ್ತೀನಿ. ನಾ: ಬೇಡ, ಸುಮ್ನೆ ಎಲ್ರಿಗೂ ತೊಂದ್ರೆ ಆಲ್ವಾ!!? ಗ: ಹ್ಹೆ ಹ್ಹೆ, ಛೆ, ಹಾಗೇನಿಲ್ಲ. ನಾನೂ ಇದೂವರೆಗೆ ಸ್ಟೇಡಿಯಮ್ನಲ್ಲಿ ಕ್ರಿಕೆಟ್ ನೋಡಿಲ್ಲ, ನೋಡಿದ ಹಾಗಾಗತ್ತೆ ಅಂತ. ನಾ: ಹ್ಮ್ಮ್!!!!!!, ಸರಿ ಗಣೇಶಣ್ಣ ಹಾಗಿದ್ರೆ ನಾಳೆ ಸಿಗಣ. ಮುಂದೆ ರಾಮಮೋಹನವ್ರಿಗೆ ಕಾಲ್ ಮಾಡಿದೆ. ಅವ್ರ ಮನೆಯವರು ಕಾಲ್ ರಿಸೀವ್ ಮಾಡಿದ್ರು. ನಾನು ಅವ್ರ ಸಂಪದ ಮಿತ್ರ ಅಂದಾಗ, ತಡೀರಿ ಕರ್ದೆ ಅಂದ್ರು. ( ಬ್ಯಾಕ್ಗ್ರೌಂಡ್ನಲ್ಲಿ, ರೀ ನಿಮ್ಮ ಫ್ರೆಂಡ್, ಅದ್ಯಾರೋ ಸಂಪದ.... ಬಂದೆ ತಡಿ ಲಲ್ತಾ, ಶಾರದಾ ಥತ್... ಯಾವಳ್ರೀ ಅವ್ಳು ಲಲ್ತಾ, ಶಾರದಾ? ಏ ಯಾರೂ ಇಲ್ಲಾ ಕಣೇ. ಸುಮ್ನೆ ಕೂತ್ಕೊಳ್ರೀ ಸಾಕು, ಈ ವಯಸ್ಸಲ್ಲಿ ನಿಮ್ಗೆನ್ರೀ ಬಂತು. ಎಂಥ ಇಲ್ಲ ಕ... ........................................ .........................................) ಅಲ್ಲಿಗೆ ಪಕ್ಕಾ ಆಯ್ತು, ರಾಮಮೋಹನವ್ರು ಮ್ಯಾಚಿಗೆ ಬರಲ್ಲ ಅಂತ. ಕಾಲ್ ಕಟ್ ಮಾಡಿ ನೆಕ್ಸ್ಟ್ ಮಂಜಣ್ಣಗೆ ಕಾಲ್ ಮಾಡಿದೆ.
Rating
No votes yet

Comments