ಒಂದು ಮರೆಯಲಾಗದ ದಿನ!

ಒಂದು ಮರೆಯಲಾಗದ ದಿನ!

ನೆನ್ನೆ ನಮ್ಮ ತಂದೆ ತಾಯಿಗಳ ವಿವಾಹ ವಾರ್ಷಿಕೋತ್ಸವ. ಆಫೀಸಿಂದ ಸ್ವಲ್ಪ ಬೇಗ ಹೊರಟೆ.
ಎಷ್ಟು ಬೇಗ ಅಂದರೂ ೬ ಗಂಟೆ ಆಗಿಹೋಯ್ತು. ೬-೮ ರ ಮಧ್ಯೆ ಹೊರಡದೆ ಇರುವುದು ಲೇಸು ಎಂಬುದು ನನ್ನ ಅಭಿಪ್ರಾಯ. ಯಾಕೆಂದರೆ ಆ ಎರಡು ಘಂಟೆಗಳಲ್ಲಿ ಯಾವಾಗ ಹೊರಟರೂ ಮನೆ ಸೇರೋದು ಒಂದೇ ಸಮಯಕ್ಕೆ! ೯ ಘಂಟೆ ಮೇಲೆಯೇ :)

ಮಧ್ಯಾಹ್ನವೇ ನನ್ನ ತಂಗಿ ಫೋನ್ ಮಾಡಿ ಇವತ್ತು ಊಟಕ್ಕೆ ಹೊರಗೆ ಹೋಗೋಣ ಬೇಗ ಬಾ ಅಂತ ಹೇಳಿದ್ಲು. ಅದೇನೋ ಗೊತ್ತಿಲ್ಲ ನಾನು ಬೇಗ ಬರ್ತೀನಿ ಅಂತ ಮನೇಲಿ ಹೇಳಿದ ದಿನವೇ ಏನಾದರೊಂದು ಕೆಲಸ ಬಂದು ೭:೩೦ ಕ್ಕೆ ಮೊದಲು ಹೊರಡಲಾಗುವುದಿಲ್ಲ :(  ಅಂತೂ ಬೇರೆಯವರು ನನ್ನ ನೋಡಿ ಕೆಲಸ ಹೇಳೋ ಮೊದಲು ಹೊರಟೆ. ಪುಣ್ಯಕ್ಕೆ ಹೆಚ್ಚು ಟ್ರಾಫಿಕ್  ಇರಲಿಲ್ಲ. ಹೇಗೋ ೮ ಘಂಟೆ ಹೊತ್ತಿಗೆ ಹೋಟೆಲ್ ಸೇರಿದೆ.
ಅಷ್ಟರಲ್ಲಿ ಅಪ್ಪ ಅಮ್ಮ ತಂಗಿ ಎಲ್ಲ ಬಂದಿದ್ದರು.  ಆಮೇಲೆ ಅದು ಇದು ಮಾತಾಡುತ್ತಾ ಊಟ ಮಾಡಿದೆವು.

ನಾನು ಆಗ ಗಮನಿಸಿದ್ದು ಏನಂದ್ರೆ ಅಪ್ಪ ಅಮ್ಮ ಆ ಊಟವನ್ನ ಎಷ್ಟು ಎಂಜಾಯ್ ಮಾಡ್ತಿದ್ರು ಅಂತ.... ಸಾಮಾನ್ಯವಾಗಿ ಹೋಟೆಲ್ಗೆ  ಹೋಗದ ಅವರು ತಂಗಿಯ ಬಲವಂತಕ್ಕೆ ಬಂದಿದ್ದರು.
ನಾನು ಸಣ್ಣವಳಿದ್ದಾಗ ಅಂಗಡಿಗಳಲ್ಲಿ ,ಬೇಕರಿಗಳಲ್ಲಿ  ಕೈ ತೋರಿಸಿ ಅದು ಬೇಕು, ಇದು ಬೇಕು ಅಂತ ಕೇಳಿದಾಗ ಅದನ್ನೆಲ್ಲ ಕೊಡಿಸಿ ನಾನು ಮತ್ತು ತಂಗಿ ತಿನ್ನುವುದನ್ನು ನೋಡಿ ಸಂತೋಷ ಪಡುತ್ತಿದ್ದ ಅಪ್ಪ ಅಮ್ಮ ಇಂದು ನಾನು ಆರ್ಡರ್ ಮಾಡಿದ್ದನ್ನು ಖುಷಿ ಇಂದ ತಿನ್ದಿದ್ದನು ನೋಡಿ  ಮನಸು ತುಂಬಿ ಬಂತು.

ಮೊದಲ ಬಾರಿ ಅಮ್ಮನನ್ನು ಫೋರುಂಗೆ ಕರೆದುಕೊಂಡು ಹೋದಾಗಲೂ ಅಷ್ಟೇ ಅಲ್ಲಿಯ ಆಡಂಬರ, lighting  ಎಲ್ಲ ನೋಡಿ ಆವಾಕ್ಕಗಿದ್ದರು....

ನಾವು ಬೆಳೆಯುತ್ತ ಇದ್ದಂತೆ ಅವರು ಮಕ್ಕಳಗುವುದನ್ನು ನೋಡಿ ಮನಸು ತುಂಬಿತು...  ಅಪ್ಪ ಎಲ್ಲರಿಗೂ ಹೇಳ್ತಾರೆ, ನಂ ಮಗಳು ತಂದಿದ್ದು, ನನ್ ಮಗಳು ಕೊಡ್ಸಿದ್ದು ಅಂತ...  ಆಗ ಆಗೋ ಸಂತೋಷಾನೇ ಬೇರೆ.....
ಒಂದು ಮರೆಯಲಾಗದ ದಿನ ಅದು....

Rating
No votes yet

Comments