ಓಶೋ ಸನ್ನಿಧಿಯ ಮೂವರು ಧ್ಯಾನಿಗಳು

ಓಶೋ ಸನ್ನಿಧಿಯ ಮೂವರು ಧ್ಯಾನಿಗಳು

ನಮಗೆಲ್ಲ ಅಂದರೆ ಶಿಬಿರಾರ್ಥಿಗಳಿಗೆ ಶಿಬಿರದ ಬಗ್ಗೆ, ಹೊಸದಾಗಿ ಕಟ್ಟಲಾಗಿರುವ ಧ್ಯಾನ ಸಭಾಂಗಣದ ಬಗ್ಗೆ ವಿವರಿಸಿದ ಮಹಾನುಭಾವರೇ ವೇಣುಗೋಪಾಲ್ ಎಂದು ತಿಳಿದದ್ದು ಅವರು ತಮ್ಮನ್ನು ಪರಿಚಯಿಸಿಕೊಂಡ ಮೇಲೆಯೇ. ಯಾಕೆಂದರೆ, ವಕೀಲಿ ವೃತ್ತಿಯ ಇವರು, ಓಶೋ ಆರಾಧಕರಾಗಿರುವುದು ತಿಳಿದ ಮೇಲೆ ಇವರ ವೃತ್ತಿ-ಪ್ರವೃತ್ತಿಗಳ Contradiction ಬಗ್ಗೆ ತಿಳಿದ ಮೇಲೆ ಒಂದು ರೀತಿಯ ಅಚ್ಚರಿ, ಒಂದು ಕುತೂಹಲ ನನ್ನಲ್ಲಿ ಮೂಡಿತು. ಆಗ ನನ್ನ ಕಲ್ಪನೆಯಲ್ಲಿ ಮೂಡಿ ಬಂದ ಚಿತ್ರ ಅವರೊಬ್ಬ ಡೊಳ್ಳುಹೊಟ್ಟೆಯ, ತಲೆಯಲ್ಲಿ ನಾಲ್ಕು ಕೂದಲೂ ಇರದ 50ರ ಆಸುಪಾಸಿನಲ್ಲಿರುವ ವ್ಯಕ್ತಿ ಇರಬಹುದೆಂದು. ಯಾಕೆಂದರೆ, ಆಧ್ಯಾತ್ಮಕ್ಕೂ ವಯಸ್ಸಿಗೂ ಯಾವ ಸಂಬಂಧವಿಲ್ಲದಿದ್ದರೂ, ಸಾಮಾನ್ಯ ಪರಿಕಲ್ಪನೆಯಿರುವುದು ಆಧ್ಯಾತ್ಮದೆಡೆ ವಾಲುವವರು ವಯಸ್ಸಾದವರು ಎಂದೇ. ಆ ಆಧ್ಯಾತ್ಮಕ್ಕೂ ಈ ಆಧ್ಯಾತ್ಮಕ್ಕೂ ವ್ಯತ್ಯಾಸವಿರುವುದರಿಂದ ಮೊದಲನೆಯದಾಗಿ 'ಆಧ್ಯಾತ್ಮ' ಎಂದರೇನೆಂದು ನಾವು ಮೊದಲಿಗೆ ಅರಿತುಕೊಳ್ಳಬೇಕಿದೆ ಎಂಬುದು ಮತ್ತೊಮ್ಮೆ ಸ್ಪಷ್ಟವಾಯಿತು. ನನ್ನ ಕಲ್ಪನೆಯ ವೇಣುಗೋಪಾಲ್‌ಗೆ ವಾಸ್ತವದಲ್ಲಿರುವ ವೇಣುಗೋಪಾಲ್ ತದ್ವಿರುದ್ಧವಾಗಿದ್ದರು. ಎತ್ತರದ ತೆಳುವಾದ ಆಳು. ನನ್ನಂತೆಯೇ, ಆದರೆ ನನಗಿಂತ ಸ್ವಲ್ಪ ಹೆಚ್ಚು ಎನಿಸುವಷ್ಟು ಬಿಳಿ-ಕರಿ ಮಿಶ್ರಿತ ಗಡ್ಡ. ತುಂಡು ತಲೆಗೂದಲಿನ, ದೊಡ್ಡ ಕಣ್ಣಿನ ಸೂಜಿಗಲ್ಲಿನಷ್ಟೇ ಆಕರ್ಷಕ ವ್ಯಕ್ತಿತ್ವ. ಸದಾ ಹಸನ್ಮುಖಿ. ಇದು ಅವರ Physical Descriptionnu. ಅದು ಯಾಕೋ ಕಾಣೆ, ಅಷ್ಟಾದರೂ ನನಗೆ ಇವರೇ ವೇಣುಗೋಪಾಲ್ ಎಂದು ನಂಬಿಕೆಯಾಗುತ್ತಿರಲಿಲ್ಲ. ಇವರು ಬೇರೊಬ್ಬ 'ವೇಣುಗೋಪಾಲ್' ಎಂದೇ ಮನಸ್ಸು ಹೇಳುತ್ತಿತ್ತು. ಆದರೆ, ಕಡೆಗೂ ನಂಬುವಂತಹ ಕಾಲ ಬಂದೇಬಿಟ್ಟಿತು.

ಓಶೋ ವಚನದ ಸಂವಾದದಲ್ಲಿ ಅಂತರ್ ವಿಶ್ವಾಸ್ ಬರೆದಿರುವ ಹಾಗೆ, " ಈ ಶಿಬಿರದ ಅತಿ ಮುಖ್ಯ ಅಂಶ - ನಗೆ, ವಿನೋದ. ಶಿಬಿರದಲ್ಲಿ ವೇಣೂನ ಹುಡುಕಬೇಕಾದ್ರೆ ಎಲ್ಲಿ ಜೋರಾಗಿ ನಗೆಯ ಸದ್ದು ಕೇಳಿಸುತ್ತಿರುತ್ತೋ ಅಲ್ಲಿಗೆ ಹೋದರೆ ವೇಣು ಖಂಡಿತ ಸಿಕ್ತಾರೆ - ನೂರಕ್ಕೆ ನೂರೂ ಸಲ. ಒಂದು ರೀತಿಯಲ್ಲಿ 'ನಗು'ವಿಗೆ ಪರ್ಯಾಯ ಹೆಸರು 'ವೇಣೂ' ಎಂದೇ ಹೇಳಬಹುದು". ಹಾಗೆಯೇ ಹೆಸರಿಗೆ ತಕ್ಕಂತೆ ಶ್ರೀ 'ವೇಣುಗೋಪಾಲ್' ತನ್ನ ನಗೆಯೆಂಬ ವೇಣುವಿನಿಂದ ಗೋಪಾಲನಂತೆ ಎಲ್ಲರನ್ನೂ ಆಕರ್ಷಿಸುವ 'ಗಾರುಡಿಗ' ಎಂಬುದು ಶಿಬಿರ ಮುಗಿಯುವಷ್ಟರಲ್ಲಿ ನನಗನಿಸಿತ್ತು. ಆದರೆ, ಶಿಬಿರ ಮುಗಿದ ನಂತರ ಅವರೊಂದಿಗೆ ಅವರ ಮನೆಯಲ್ಲಿ ಅವರೊಂದಿಗೆ ನಡೆದ ಮಾತುಕತೆ ಹಾಗೂ ಅವರೊಂದಿಗೆ ನಡೆದ ಎಸ್ಎಂಎಸ್ ಸಂವಾದದಿಂದ ನಾನು ಗ್ರಹಿಸಿದ್ದೇನೆಂದರೆ ಜಿದ್ದು ಕೃಷ್ಣಮೂರ್ತಿಯವರು In seriousness there is a great laughter ಎಂಬ ಮಾತನ್ನು ವೇಣೂರಿಗೆ ಅನ್ವಯಿಸುವುದಾದರೆ, In laughter there is a great seriousness ಎಂದೇ ಹೇಳಬಹುದು. ಅಂತರಂಗದಲ್ಲಿ ಬಹಳ ಗಂಭೀರವಾದ ವ್ಯಕ್ತಿ ಈ ವೇಣೂ(ನಾನು ಹೀಗೆ ಕರೆಯುವುದನ್ನು ಅವರು ತಪ್ಪಾಗಿ ಭಾವಿಸುವುದಿಲ್ಲವೆಂದು ತಿಳಿದಿದ್ದೇನೆ.)

ವೇಣೂ ಈ ಶಿಬಿರದ ಸೂತ್ರಧಾರರಾದರೆ, ಈ ಶಿಬಿರದ ಮತ್ತೊಬ್ಬ ಸಂತ, ಪ್ರಮುಖ ಆಧಾರ ಸ್ತಂಭ ಶ್ರೀ ಕೃಷ್ಣ. ನೋಡಲು ವಿದೇಶಿಗರಂತೆ ಕಂಡರೂ ಇವರು ಭಾರತೀಯರೇ. ನನಗಂತೂ ಇವರು ಓಶೋ ಬಹಳವಾಗಿ ಮೆಚ್ಚಿದ್ದ ರಷ್ಯಾದ ಸಾಹಿತಿಗಳಂತೆಯೇ ಕಾಣುತ್ತಿದ್ದರು. ಅದ್ಯಾಕೋ ಇವರು Joke ಮಾಡಿದರೂ ನನಗೆ ಅದು Serious ಆಗಿಯೇ ಕಾಣುತ್ತಿತ್ತು. Highly Dynamic person. ಅದಕ್ಕೆ ಕಾರಣ ಅವರು ಹೇಳಿಕೊಡುತ್ತಿದ್ದ Dynamic Technique ಇರಬೇಕೆಂಬ ಸಂಶಯ ನನಗೆ ಈಗ ಶುರುವಾಗಿದೆ. ಇವರು ಮುಖ್ಯವಾಗಿ ನಮಗೆ 'ಡೈನಮಿಕ್' ಮತ್ತು 'ಕುಂಡಲಿನಿ'ಯನ್ನು ಕಲಿಸಿದರು. ನಮ್ಮೆಲ್ಲರ ಬೆವರಿಳಿಸಿದರು. ನಾನು Feel ಮಾಡಿದ ಹಾಗೆ ಇವೆರಡಕ್ಕೂ ಖರ್ಚಾಗುವಷ್ಟು Energy (as a whole) ಮತ್ತಾವ Techniqueಗೂ ಖರ್ಚಾಗುವುದಿಲ್ಲ.

ವೇಣೂ ಹಾಗೂ ಕೃಷ್ಣ (ಎರಡೂ ಶ್ರೀಕೃಷ್ಣನ ಹೆಸರುಗಳೇ)ರ ಜತೆಗೆ ಮತ್ತೊಬ್ಬರ ಹೆಸರು ಹೇಳದಿದ್ದರೆ ತಪ್ಪಾದೀತು. ಅವರೇ ಆಂಜಿ ಅಲಿಯಾಸ್ ಚಂದ್ರು ಅಥವಾ ಚಂದ್ರಶೇಖರ್. ಕಟ್ಟುಮಸ್ತಾದ ಆಳು. ವೃತ್ತಿಯಿಂದ ವೈದ್ಯರು. ಇವರ ಮುಖದ ತುಂಬಾ ಗಡ್ಡ ಮೀಸೆ ಬಿಟ್ಟರೆ ಬೇರೇನೂ ಕಾಣುವುದಿಲ್ಲ. ಅವರ ಚರ್ಯೆ ನೋಡಿ ನಾನು ಮಲಯಾಳಿ ಇರಬಹುದು ಎಂದೇ ಭಾವಿಸಿದ್ದೆ. ವೇಣೂರವರ ಒಂದಿಗಿದ್ದಾಗ ನಗುವುದಕ್ಕೂ ಹಿಂಜರಿವ ಇವರು ಒಬ್ಬರೇ ನಮಗೆ ಕಲಿಸುವಾಗ ಬಹಳ ನಗಿಸುತ್ತಿದ್ದರು. ಆಗಲೇ ನನಗನಿಸಿದ್ದು, ಈ Techniqueಗಳನ್ನು ಕಲಿತರೆ ನಮಗೂ ಕೂಡ ತಮಾಷೆ ಮಾಡುವುದು ತಾನೇ ತಾನಾಗಿ ಒಲಿದು ಬರುವುದೇನೋ ಎಂದು. ಇವರು ಧ್ಯಾನದ ಎಲ್ಲಾ Technique ಕಲಿಸುವಾಗಲೂ ವೇಣೂರ ಜತೆಗೆ, ಹಾಗೆಯೇ ನಮ್ಮ ಜತೆಗೆ ಇದ್ದು ನಮಗೆ ಅತ್ಯುತ್ತಮವಾಗಿ ಸಾಥ್ ನೀಡುತ್ತಿದ್ದರಾದರೂ ಸ್ವತಂತ್ರವಾಗಿ ಕಲಿಸಿದ್ದು ನಾದಬ್ರಹ್ಮ, ಕುಂಡಲಿನಿ, ಸರ್ವಸಾರ್ ಇತ್ಯಾದಿ. ಒಟ್ಟಿನಲ್ಲಿ ಚಂದ್ರು is very lively and joyful person.

Rating
No votes yet