ಕಣ್ಣು: ಪದ ಹಳತು, ಬಳಕೆ ಹೊಸತು
ಕನ್ನಡದಲ್ಲಿ ಪದಗಳನ್ನು ಸೇರಿಸಿ ಹೊಸಪದಗಳನ್ನು ಸೃಷ್ಟಿಮಾಡಿಕೊಳ್ಳುತ್ತೇವೆ. ಈಗೀಗ ಇಂಥ ಸಾಮರ್ಥ್ಯ ಭಾಷೆಗೆ ಕಡಮೆಯಾಗುತ್ತಿದೆಯೋ ಎಂಬ ಅನುಮಾನ ಕೆಲವರಲ್ಲಿಯಾದರೂ ಮೂಡಿದೆ. ಈ ಕಾಲಮ್ಮಿನಲ್ಲಿ ಕನ್ನಡದಲ್ಲಿ ಬಳಕೆಯಲ್ಲಿದ್ದ, ಈಗಿನ ಬರವಣಿಗೆಯಲ್ಲಿ ಕಾಣದಾಗಿರುವ ಕೆಲವು ಪದಗಳನ್ನು ನಿಮ್ಮ ಗಮನಕ್ಕೆ ತರುವ, ಆ ಮೂಲಕ ಮತ್ತೆ ಚಾಲ್ತಿಗೆ ತರುವ ಪ್ರಯತ್ನ. ಬೇರೆ ಬೇರೆ ಸಂದರ್ಭದ ಬರವಣಿಗೆಯಲ್ಲಿ ಬಳಸಬಹುದಾದ ಇಂಥ ಪದಗಳನ್ನು ನೀವೂ ಸೂಚಿಸಿ. ಸದ್ಯಕ್ಕೆ ಕಣ್ಣು ನನ್ನ ಆಸಕ್ತಿಯ ಪದ.
ಕಣ್ಣು ಎಂಬುದರೊಡನೆ ಸೇರಿ ಸುಮಾರು ನೂರಕ್ಕೂ ಹೆಚ್ಚು ನುಡಿಬಳಕೆಗಳು ಕನ್ನಡದಲ್ಲಿವೆ.
ಕಣ್ಗಾಣು (ಕಣ್+ಕಾಣ್) = ಮನಗಾಣು ಎಂಬುದಕ್ಕೆ ವಿರುದ್ಧವಾಗಿ ಕೇವಲ ಕಣ್ಣಿಂದ ಮಾತ್ರ, ನೋಟದಿಂದ ಮಾತ್ರ ಅರಿಯುವುದು. ಮನಗಾಣುವುದು ಅನುಭವದ ಸತ್ಯ, ಕಣ್ಗಾಣುವುದು ಕೇವಲ ತೋರಿಕೆಯ ಸತ್ಯ.
ಉದಾ: ಅವನ ಪ್ರೀತಿಯನ್ನು ಮನಗಂಡೆ ಎಂದುಕೊಂಡಳು. ಆದರೆ ಅವನ ಪ್ರೀತಿ ಕೇವಲ ಕಣ್ಗಾಣುವ ಪ್ರೀತಿ.
ಕಣ್ಚಲ್ಲ = ಸರಸಾಲೋಕನ. ಕಣ್ಣಿನಲ್ಲಿ ತೋರುವ ಮುಗುಳು ನಗು.
ಉದಾ. ಹುಡುಗಿಯರ ಕಣ್ಚಲ್ಲಾಟಕ್ಕೆ ಮರುಳಾಗದವರು ಯಾರು?
ಕಣ್ಗಿಚ್ಚು = ಕೋಪ ತುಂಬಿದ ದೃಷ್ಟಿ. ಕಣ್ಣಿನಲ್ಲಿ ಕಿಡಿ ಸುರಿಸಿದ ಎಂಬ ಮಾತು ಕೇಳಿಲ್ಲವೆ, ಅದರಂಥದು, ಆದರೆ ಹೊಸತು ಅನ್ನಿಸೀತು.
ಉದಾ. ಅಪ್ಪನ ಕಣ್ಗಿಚ್ಚಿಗೆ ಮನೆಯೆಲ್ಲ ಸುಟ್ಟುಹೋಗುತ್ತದೆ ಅನಿಸಿತು.
Rating
Comments
ಅಪ್ಪ ಅಮ್ಮ ಕಳೆದುಹೋಗಿದ್ದ
In reply to ಅಪ್ಪ ಅಮ್ಮ ಕಳೆದುಹೋಗಿದ್ದ by pavanaja
ಸರಿ ಸ್ವಾಮಿ, ಯಾಕೆ ಗೊತ್ತೆ!
In reply to ಸರಿ ಸ್ವಾಮಿ, ಯಾಕೆ ಗೊತ್ತೆ! by olnswamy
ಬಹುಶಃ
In reply to ಬಹುಶಃ by ಶ್ಯಾಮ ಕಶ್ಯಪ
ಉ: ಬಹುಶಃ
ಉ: ಕಣ್ಣು: ಪದ ಹಳತು, ಬಳಕೆ ಹೊಸತು
ಉ: ಕಣ್ಣು: ಪದ ಹಳತು, ಬಳಕೆ ಹೊಸತು
In reply to ಉ: ಕಣ್ಣು: ಪದ ಹಳತು, ಬಳಕೆ ಹೊಸತು by kannadakanda
ಉ: ಕಣ್ಣು: ಪದ ಹಳತು, ಬಳಕೆ ಹೊಸತು