ಕನ್ನಡ ಕೇವಲ ನುಡಿಯಲ್ಲ ನಮ್ಮಂತರಂಗದಾ ಮಾತು

ಕನ್ನಡ ಕೇವಲ ನುಡಿಯಲ್ಲ ನಮ್ಮಂತರಂಗದಾ ಮಾತು

ಕನ್ನಡ ಕೇವಲ ನುಡಿಯಲ್ಲ ನಮ್ಮಂತರಂಗದ ಮಾತು
ಈಗ್ಗೆ ಒಂದು ವಾರ, ಹತ್ತು ದಿನಗಳ ಕೆಳಗೆ ವೀಣಾ ಅವರು “ಕರ್ನಾಟಕ ಬರಿ ನಾಡಲ್ಲ, ನಮ್ಮ ಸಂಸ್ಕೃತಿಯ ಧಾತು; ಕನ್ನಡ ಕೇವಲ ನುಡಿಯಲ್ಲ ನಮ್ಮಂತರಂಗದಾ ಮಾತು|” ಎಂಬ ಹಾಡು ಬರೆದವರು ಯಾರು ಎಂದು ಕೇಳಿದ್ದರು. ಅದನ್ನು ನಮ್ಮ ಶಾಲೆಯಲ್ಲಿ ಸಂಜೆ ಪ್ರಾರ್ಥನೆಗೆ ಮಕ್ಕಳು ಹಾಡುತ್ತಿದ್ದರು. ಹಾಗಾಗಿ ಆ ಹಾಡು ನನಗೆ ಚಿರಪರಿಚಿತ. ಆದರೆ ಅದನ್ನು ಬರೆದವರು ಯಾರು ಎಂದು ಮರೆತು ಹೋಗಿತ್ತು. ಯೊಚಿಸಿ ಯೋಚಿಸಿ ಸಾಕಾಯಿತು ನೆನಪಾಗಲಿಲ್ಲ. ಕೊನೆಗೆ ನಮ್ಮ ಶಾಲೆಯ ಸಂಗೀತ ಶಿಕ್ಷಕರಿಗೆ ಕೇಳಿದೆ. ಅವರು ನಮ್ಮ ಶಾಲೆಯ ಲೈಬ್ರರಿಯಲ್ಲಿ ಹುಡುಕಿ ಅದನ್ನು ಬರೆದವರು ಪ್ರಖ್ಯಾತ ಕವಿ ಬಿ.ಆರ್. ಲಕ್ಷ್ಮಣ ರಾವ್ ಎಂದು ತಿಳಿಸಿದರು. ಅದನ್ನು ವೀಣಾ ಅವರ ಬ್ಲಾಗ್ ಅಡಿಯಲ್ಲಿ ಪ್ರತಿಕ್ರಿಯೆಯಾಗಿ ಹಾಕೋಣ ಎಂದು ಯೋಚಿಸಿದೆ. ಆದರೆ ಇಷ್ಟು ದಿನಗಳಾದ ಮೇಲೆ ಅವರು ಅದನ್ನು ನೋಡುತ್ತಾರೋ ಇಲ್ಲವೋ ಎಂಬ ಅನುಮಾನ, ಜೊತೆಗೆ ಕನ್ನಡ ರಾಜ್ಯೋತ್ಸವದೊಂದಿಗೆ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರಕಿರುವ ಈ ಸಂದರ್ಭಕ್ಕೆ ಹೊಂದುವ ಒಂದು ಸುಂದರ ಹಾಡು ಎಂದೂ ಮನಸ್ಸಿಗೆ ಬಂದ ಕಾರಣ ಆ ಹಾಡಿನ ಸಾಹಿತ್ಯವನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಆಸೆಯಿಂದ ನಾನು ಆ ಹಾಡನ್ನು ಇಲ್ಲಿ ಹಾಕಿರುವೆ. ಆ ಹಾಡಿನ ಸಾಹಿತ್ಯ ಹೀಗಿದೆ.
ಕರ್ನಾಟಕ ಬರಿ ನಾಡಲ್ಲ, ನಮ್ಮ ಸಂಸ್ಕೃತಿಯ ಧಾತು
ಕನ್ನಡ ಕೇವಲ ನುಡಿಯಲ್ಲ, ನಮ್ಮಂತರಂಗದಾ ಮಾತು||
ಕಂಗೊಳಿಸುವ ಬರಿ ಗಿರಿಯಲ್ಲ ಸಹ್ಯಾದ್ರಿಯ ಸಾಲು,
ಹೊಮ್ಮಿದೆ ಸಲಹುವ ಅಮ್ಮನೆದೆ ಊಡಲೆಮಗೆ ಹಾಲು|
ಬರಿನೆರೆ ನುಗ್ಗುವ ನೀರಲ್ಲ ಕೃಷ್ಣ ಕಾವೇರಿ ತುಂಗಾ
ಧಮನಿ ಧಮನಿಯಲಿ ಹರಿವ ಚೇತನ, ಕಣ್ಣ ಬೆಳಕು ನಮಗೆ||೧||
ಪಂಪ ಕುಮಾರವ್ಯಾಸರೆಂದರೆ ಅಲ್ಲ ಕವಿಗಳು ಮಾತ್ರ;
ಇಂದು ಕನ್ನಡ ಕಾವ್ಯ ಮಾಲೆಗೆ ಅವರೇ ಅಂತಃಸೂತ್ರ|
ಶಿಲ್ಪ ಕಲೆಯು ಬರಿ ಕಲೆಯಲ್ಲ ಬೇಲೂರು ಹಳೇಬೀಡು
ನಮ್ಮ ಬೇರನು ತೋರುತಿದೆ, ಅಲ್ಲೇ ನಮ್ಮ ತಲೆಮಾರು||೨||

Rating
Average: 3.3 (4 votes)

Comments