ಕನ್ನಡ ನಾಡಿನ ಕಬ್ಬಿಗರು -೧ ನಯಸೇನ
ನಯಸೇನ ( 1112 )
ಈತ ಜಿನ ಕಬ್ಬಿಗ. 'ಧರಮಾಮ್ರುತ' ಈತನ ನೆಗೞ್ಚು. ಬೇಕರನದ/ವ್ಯಾಕರಣದ ಬಗ್ಗೆ ಕೂಡ ಬರೆದಿದ್ದಾನೆ. ಈತನ ಕಬ್ಬದಲ್ಲಿ ' ಮುಳುಗುಂದದೊಳಿರ್ದು.." ಇರುವುದರಿಂದ ಇವನು ಮುಳುಗುಂದದಲ್ಲಿ ಇದ್ದನೆಂದು ತಿಳಿಯಬಹುದು. ಕೆಳಗೆ ಕೊಟ್ಟಿರುವ ಸಾಲುಗಳಿಂದ ತಿಳಿಯುವುದೇನೆಂದರೆ ಈತನ ಹೊತ್ತಿ/ಕಾಲದಲ್ಲಿಯೇ ಕಬ್ಬಿಗರು ಬೇಡದೇ ಇರುವ ಸಕ್ಕದದ ಒರೆಗಳನ್ನು ಬಳಸುತ್ತಿದ್ದರೆಂದು ತಿಳಿಯುತ್ತದೆ.
೧) ಪೊಸಗನ್ನಡದಿಂ ವ್ಯಾವ|
ರ್ಣಿಸುವೆಂ ಸತ್ಕೃತಿಯನೆಂದು ಕನ್ನಡಮಂ ಚಿಂ|
ತಿಸಿ ಕೂಡಲಾಱದಕ್ಕಟ|
ಮಿಸುಕದ ಸಕ್ಕದಮನಿಕ್ಕುವವನುಂ ಕವಿಯೇ ||
ತಿಳಿವು: ಕನ್ನಡ ಕಬ್ಬಗಳನ್ನು ಬರೆಯಲು ತೊಡಗಿದರೆ ಅದರಲ್ಲೇ ಬರೆಯಬೇಕು. ಸಕ್ಕದ ಒರೆಗಳನ್ನು ತುಮ್ಬುವುದು ತಪ್ಪು, ಹಾಗೆ ಬರೆದವನನ್ನು ಕಬ್ಬಿಗ ಎನ್ನಬಹುದೇ?
೨) ಸಕ್ಕದಮಂ ಪೇೞ್ವೊಡೆ ನೆಱೆ|
ಸಕ್ಕದಮಂ ಪೇೞ್ಗೆ ಸುದ್ದಗನ್ನಡದೊಳ್ ತಂ
ದಿಕ್ಕುವುದೇ ಸಕ್ಕದಮಂ|
ತಕ್ಕುದೆ ಬೆರಸಲ್ಕೆ ಘೃತಮುಮಂ ತೈಲಮಂ
ತಿಳಿವು: ಸಕ್ಕದದಲ್ಲಿ ಹೇಳಬೇಕಾದುದನ್ನ ಸಕ್ಕದದಲ್ಲಿ ಹೇಳಿ/ಬರೆಯಿರಿ/ನೆಗೞ್ಚಿ, ಅದರ ಬದಲು ಸಕ್ಕದವನ್ನು ಕನ್ನಡದ ಕಬ್ಬದಲ್ಲಿ ತಂದಿಕ್ಕಿದರೆ ಎಣ್ಣೆಗೆ ತುಪ್ಪ ಬೆರೆಸಿದಂತಾಗುತ್ತದೆ. ಎಂದೂ ಹೊಂದಲ್ಲ.
[ತಿಳಿವು ತಪ್ಪಿದ್ದರೆ ಮನ್ನಿಸಿ]
ಹೆಚ್ಚಿನ ಓದಿಗೆ ರಾ.ನರಸಿಂಹಾಚಾರ್ಯರ 'ಕರ್ನಾಟಕ ಕವಿ ಚರಿತೆ' ಓದಿರಿ.
Comments
ಉ: ಕನ್ನಡ ನಾಡಿನ ಕಬ್ಬಿಗರು -೧ ನಯಸೇನ