ಕಳೆದ ನೆನೆಪುಗಳು

ಕಳೆದ ನೆನೆಪುಗಳು

ನಾನು ಮೊದಲು ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲುಕಿನ ಬೂದಿಕೋಟೆಯಲ್ಲಿ ನಮ್ಮಧ್ವನಿ ಸಮುದಾಯ ರೇಡಿಯೋ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದೆ. ಇದು ಕರ್ನಾಟಕ, ಅಂದ್ರಪ್ರದೇಶ್ ಮತ್ತು ತಮಿಳುನಾಡಿನ ಗಡಿಬಾಗದಲ್ಲಿದೆ. ಇಲ್ಲಿನ ಜನರು ಅವಿದ್ಯಾವಂತರು, ಕೂಲಿಗಾರರು. ಇಲ್ಲಿ 10 ನೇತರಗತಿಯವರೆಗೆ ಓದಲು ಸ್ಕೂಲಿದೆ. ನಾನು ಹುಟ್ಟಿದ್ದು ಮತ್ತು ಹೈಸ್ಕೂಲ್ ತನಕ ಓದಿದ್ದು ಸಹ ಇಲ್ಲಿಯೇ. ನಂತರದ ವಿದ್ಯಾಬ್ಯಾಸ ಬಂಗಾರಪೇಟೆ ಮತ್ತು ಕೋಲಾರದಲ್ಲಿ ಇಲ್ಲಿನ ಜನರು ರಾಜಕಾರಣಿಗಳ ಕೀಲುಗೊಂಬೆಗಳು. ನಾನು ಇವರಿಗೊಸ್ಕರ ಏನಾದರು ಕೆಲಸ ಮಾಡಬೇಕು ಅಂದುಕೊಂಡಿದ್ದೆ, ಅದು ಬಹು ಬೇಗನೆ ಈಡೇರಿತು ಅದು ಸಹ ನಮ್ಮಧ್ವನಿಯ ಪ್ರಭಾವದಿಂದ. ನಾನು ಸ್ಟೇಷನ್ ಮ್ಯಾನೇಜರ್ ಆಗಿ ಕೆಲಸಕ್ಕೆ ಸೇರಿಕೊಂಡೆ ಇಲ್ಲಿ ನನ್ನ ಕೆಲಸ ಅಲ್ಲಿನ ಸ್ವಯಂಸೇವಕರಿಗೆ ಕಾರ್ಯಕ್ರಮದ ಧ್ವನಿಮುದ್ರಣ, ಎಡಿಟಿಂಗ್, ಸ್ಕ್ರಿಪ್ಟ್ ರೈಟಿಂಗ್ ಮತ್ತು ಟೆಕ್ನಿಕಲ್ ತರಬೇತಿಯನ್ನು ನೀಡುವುದು ಮತ್ತು ಕಾರ್ಯಕ್ರಮ ಪ್ರಸಾರ ಮಾಡುವುದು ಇತ್ಯಾದಿಗಳು. ಹೀಗೆ ಕಾರ್ಯಕ್ರಮಗಳು ಮಾಡುತ್ತಿರಬೇಕಾದರೆ ಗ್ರಾಮದ ಹಲವಾರು ಸಮಸ್ಯೆಗಳ ಬಗ್ಗೆ ಕಾರ್ಯಕ್ರಮಗಳನ್ನು ಮಾಡಿ ಜನರಿಗೆ ಹತ್ತಿರವಾಗಿತ್ತು ನಮ್ಮಧ್ವನಿ. ಇದರಲ್ಲಿ ಒಂದು ಬೂದಿಕೋಟೆ ಜನರ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಇದರ ಬಗ್ಗೆ ನಾನು ತಮ್ಮ ಮುಂದೆ ಹೇಳುತ್ತಿರುವೆ. ಅಂದು ಬೆಳಿಗ್ಗೆ 9 ಗಂಟೆಗೆ ಆಪೀಸಿಗೆ ಹೋಗುತ್ತಿದ್ದೆ, ಪಂಚಾಯ್ತಿಯ ಹತ್ತಿರದಲ್ಲಿ ಒಂದು ಬೋರ್ವೆಲ್ ಕೊರೆಸಿದ್ದರು ಅಲ್ಲಿಂದ ನೀರು ಟ್ಯಾಂಕ್ ಗೆ ಹೋಗತ್ತೆ ಅಲ್ಲಿಯೇ ಒಂದು ನಲ್ಲಿಯನ್ನು ಸಹ ಅಳವಡಿಸಿದ್ದರು ಅಲ್ಲಿ ನೀರಿಗಾಗಿ ಕಡಿಮೆ ಅಂದರು 30 ರಿಂದ 40 ಜನ ಮಹಿಳೆಯರು ಸೇರಿದ್ದರು. ಅಲ್ಲಿ ಒಂದೇ ಕಿತ್ತಾಟ ಒಂದೇ ಕಿರುಚಾಟ ಜೊತೆಗೆ ಬೈಗುಳ ಬೇರೆ, ನನಗೆ ಆಶ್ಚರ್ಯ ಆಯಿತು ಯಾವತ್ತು ಇಲ್ಲದ ಜನ ಈವತ್ತು ಇಷ್ಟೊಂದು ಸೇರಿದ್ದಾರೆ ಅಂತ. ಯಾವಾಗಲು ನನ್ನ ಬ್ಯಾಗ್ ನಲ್ಲಿ ಒಂದು ರೆಕಾರ್ಡರ್ ಇರತ್ತೆ ಅಲ್ಲಿಗೆ ಹೋಗಿ ರೆಕಾರ್ಡರ್ ತೆಗೆದು ಅವರ ಕಿರುಚಾಟ ರೆಕಾರ್ಡ್ ಮಾಡಿದೆ ನಂತರ ಕೆಲವರೋಟ್ಟಿಗೆ ಕಾರಣ ಕೇಳಿದಾಗ ಅವರು ಹೇಳಿದ್ದು ನಲ್ಲಿಯಲ್ಲಿ ನೀರು ಬಂದು ೫ದಿನವಾಗಿದೆ ಕುಡಿಯೋದಕ್ಕೆ ಒಂದು ತೊಟ್ಟು ನೀರಿಲ್ಲ ಅಂತ ಹೀಗೆ ಅವರ ಜೊತೆ ಅವರ ತೊಂದರೆಗಳ ಬಗ್ಗೆ ಮಾತನಾಡಿ ರೆಕಾರ್ಡ್ ಮಾಡಿದೆ. ನಂತರ ಅಲ್ಲಿಂದ ಪಂಚಾಯ್ತಿಗೆ ಹೋದೆ ಅಲ್ಲಿ ಪಂಚಾಯ್ತಿ ಮೀಟಿಂಗ್ ನಡಿತಾ ಇತ್ತು. ಎಲ್ಲಾ ಪಂಚಾಯ್ತಿ ಸದಸ್ಯರು, ಅದ್ಯಕ್ಷರು, ಉಪಾದ್ಯಕ್ಷರು ಮತ್ತು ಕಾರ್ಯದರ್ಶಿಗಳು ಸಹ ಇದ್ದರು. ಅವರ ಮುಂದೆ ಜನರ ತೊಂದರೆಗಳ ಬಗೆಗಿನ ಧ್ವನಿ ಮುದ್ರಣ ಪ್ಲೇ ಮಾಡಿದೆ. ಅದನ್ನು ಕೇಳಿದ ಅದ್ಯಕ್ಷರು ಮತ್ತು ಕಾರ್ಯದರ್ಶಿಗಳು ಬೋರ್ ವೆಲ್ನಲ್ಲಿ ನೀರು ಒಳಗೆ ಹೋಗಿದೆ ಬೋರ್ ವೆಲ್ ಗಳನ್ನು ರಿಬೋರ್ ಮಾಡಿಸಬೇಕು ಮಾಡಿಸಲು ನಮ್ಮ ಹತ್ತಿರ ಹಣ ಇಲ್ಲ ಅದ್ದರಿಂದ ನಾವು ಅದರ ಪ್ರಯುಕ್ತಾನೆ ಈ ದಿನ ಮೀಟಿಂಗ್ ಸೇರಿದ್ದೇವೆ ಅಂದರು. ಸ್ವಲ್ಪ ದಿನದಲ್ಲೇ ತಾಲ್ಲೂಕ್ ಪಂಚಾಯ್ತಿಯಿಂದ ಹಣ ಬರಲಿದೆ ಬಂದ ನಂತರ ರೀ ಬೋರ್ ಮಾಡಿಸಿ ನೀರು ಬರುವ ಅನುಕೂಲವನ್ನು ಮಾಡಿಸಿಕೊಡುತ್ತೇವೆ ಅಂದರು. ಇದು ತಡವಾಗುವುದರಿಂದ ನಮ್ಮ ಗ್ರಾಮದ ಜನ ಹಲವಾರು ತಿಂಗಳುಗಳಿಂದ ನೀರಿನ ಹಣ ಬಾಕಿ ಇದ್ದಾರೆ ಅದರಲ್ಲಿ ಸ್ವಲ್ಪ ಹಣ ಕಟ್ಟಿದರೆ ಅ ಹಣದಲ್ಲಿ ರೀ ಬೋರಿಂಗ್ ಮಾಡಿಸಬಹುದು ಎಂದರು. ನಂತರ ಅಲ್ಲಿಂದ ಸ್ಟುಡಿಯೋ ಕಡೆ ಹೋಗಿ ಕಂಪ್ಯೂಟರ್ಗೆ ವರ್ಗಾಯಿಸಿ ಎಡಿಟ್ ಮಾಡಿ ರಾತ್ರಿ ಕಾರ್ಯಕ್ರಮವನ್ನು ಪ್ರಸಾರ ಮಾಡಿದೆ ಅದನ್ನು ಕೇಳಿದ ಜನರು ಸ್ವಲ್ಪ ಸ್ವಲ್ಪವಾಗಿ ಹಣವನ್ನು ಪಂಚಾಯ್ತಿಗೆ ಕಟ್ಟಿದರು. ಎರಡೇ ದಿನದಲ್ಲಿ ೩ ಬೋರ್ವೆಲ್ ಗಳನ್ನು ರೀ ಬೋರ್ ಮಾಡಿಸಿ ಮನೆಗಳಿಗೆ ನೀರು ಬರುವಂತೆ ಮಾಡಿದರು. ನಮ್ಮಧ್ವನಿ ನೋಡಲು ಬೇಟಿನೀಡಿದವರು ಇದನ್ನು ದೆಹಲಿಯ ದಿನಪತ್ರಿಕೆಯಲ್ಲಿ ಪ್ರಕಟಿಸಿದರು ಇದನ್ನು ಕೇಳಿದ ಅಂದಿನ ಗೃಹ ಸಚಿವ ಎಲ್.ಕೆ ಅದ್ವಾನಿಯವರು ಮದ್ರಾಸಿನ ಅನ್ನ ಎಪ್.ಎಂ ಉದ್ಘಾಟನೆಯಲ್ಲಿ ಹೇಳಿ ಕೊಂಡಾಡಿದರು. ಇದೇ ರೀತಿಯಾಗಿ ನಮ್ಮ ಊರಿನ ಜನಕ್ಕೆ ಇನ್ನು ಹಲವಾರು ಸಹಾಯವನ್ನು ಮಾಡುವ ಯೋಚನೆ ಇದ ಆದರೆ ಯಾವಾಗ ನೆರವೆರತ್ತೋ ಏನೋ ........

Rating
No votes yet

Comments