ಕವನ ಬರೆದೆ

ಕವನ ಬರೆದೆ

ಕವನ ಬರೆದೆ

========

 

ಈ ದೇಶಕ್ಕಾಗಿ ನೀನೇನು ಮಾಡಿದೆ ?

 

ಕವನ ಬರೆದೆ !

 

ಈ ದೇಶದಲ್ಲಿ ಬಡವರ ಒಳಿತಿಗಾಗಿ ನೀನೇನು ಮಾಡಿದೆ ?

 

ಕವನ ಬರೆದೆ !

 

ಇರಲಿ ಇಲ್ಲಿ ಅಸಹಾಯಕರಿಗಾಗಿ , ಶೋಷಿತರಿಗಾಗಿ,  ಸಹಾಯ ಯಾಚಿಸುವರಿಗಾಗಿ ನೀನೇನೆ ಮಾಡಿದೆ ?

 

ಕವನ ಬರೆದೆ !

 

ಇದೇನಿದು ಹೋಗಲಿ ನಿನ್ನ ಊಟಕ್ಕಾಗಿ ನೀನೇನು ಮಾಡಿದೆ ?

 

ಅದಕ್ಕೆ ನಾನು  ಮಾಡಬೇಕೆ !!! ಅಡುಗೆ ಆಗಿದೆ ಎಂದು ಹೆಂಡತಿ ಕರೆದರೆ ಹೋಗಿ ಊಟಮಾಡಿದರೆ ಆಯ್ತಲ್ಲ !!

 

ಹೌದ ಸರಿಯೆ !  ಹೋಗಲಿ ಇರಲು ಮನೆಗೇನು ಮಾಡುವಿರಿ ? 

 

ಮನೆಯೆ ! ಅದಕ್ಕೆ ನಾನೇನು ಮಾಡಬೇಕು ಅಪ್ಪ ಕಟ್ಟಿದ ಮನೆ ಇದೆಯಲ್ಲ ! 

 

ಸರಿ ಬಿಡಿ ! ಎಲ್ಲವು ಸರಿ ಇದೆ ನಾನಿನ್ನು ಬರಲೆ ?

 

ಅಯ್ಯಯ್ಯೊ ! ಇರಿ ಅದೇಕೆ ಹೊರಟಿರಿ ನಾನು ಬರೆದಿರುವ ಕವನ ಕೇಳಿ ಹೋಗುವಿರಂತೆ

 

.....

 

ಇದೇನು ಈ ಮನುಷ್ಯ !  ಬಡವರ ಬಗ್ಗೆ ದೇಶ ಭಕ್ತಿಯ ಬಗ್ಗೆ ಶೋಷಿತರ ಬಗ್ಗೆ ಬರೆದಿರುವ ಕವನ ಓದುವೆ ಕೇಳು ಎಂದರೆ ಓಡಿ ಹೋಗುತ್ತಿದ್ದಾನೆ ಸ್ವಲ್ಪ ವಾದರು ದೇಶದ ಬಗ್ಗೆ ಯೋಚನೆ ಇಲ್ಲ ! ಛೇ !

 

Rating
No votes yet

Comments

Submitted by kavinagaraj Thu, 08/15/2013 - 15:37

ಸಕತ್ ವಿಡಂಬನೆ,ಪಾರ್ಥರೇ. ಸ್ವಾತಂತ್ರ್ಯೋತ್ಸವದ ಶುಭಾಶಯಗಳು.

Submitted by nageshamysore Thu, 08/15/2013 - 20:02

ಪಾರ್ಥಾ ಸಾರ್, ಸುಸಂಗತ ಸ್ವಗತ, ಬೇರೇನಿರದಿದ್ದರೂ ಬರಿ ಕವನ ಬರೆದಿದ್ದೆ ಲಾಭ ಅನ್ನಬೇಕೊ ಏನೊ? - ಸ್ವಾತಂತ್ರ್ಯೋತ್ಸವದ ಹಾರ್ದಿಕ ಶುಭಾಶಯಗಳು.
 
ಧನ್ಯವಾದಗಳೊಂದಿಗೆ,
ನಾಗೇಶ ಮೈಸೂರು
 

Submitted by partha1059 Thu, 08/15/2013 - 20:13

In reply to by nageshamysore

ನಾಗೇಶರೆ ವಂದನೆಗಳು
ಕವನದಲ್ಲಿ ಯಾವ‌ 'ಕರೆಯು' ಇಲ್ಲ ಕಳಕಳಿಯು ಇರಲಿಲ್ಲ ಸುಮ್ಮನೆ ಕುಳಿತೆ ಮನಸಿಗೆ ಬಂದ‌ ಸಾಲುಗಳನ್ನು ಬರೆದೆ ಅಷ್ಟೆ ನೀವು ಹೇಳಿದಂತೆ ಕವನ‌ ಬರದದ್ದಷ್ಟೆ ಲಾಭ‌ ! ನಿಜ‌
ತಮಗು ಸಹ‌
ಸ್ವಾತಂತ್ರ್ಯೋತ್ಸವದ ಹಾರ್ದಿಕ ಶುಭಾಶಯಗಳು.
ಹಾಗೆ ಸಂಪದಿಗರೆಲ್ಲರಿಗೂ ಸಹ‌
ಸ್ವಾತಂತ್ರ್ಯೋತ್ಸವದ ಹಾರ್ದಿಕ ಶುಭಾಶಯಗಳು.
‍ಪಾರ್ಥಸಾರಥಿ