ಕವನ ಬರೆದೆ
ಕವನ ಬರೆದೆ
========
ಈ ದೇಶಕ್ಕಾಗಿ ನೀನೇನು ಮಾಡಿದೆ ?
ಕವನ ಬರೆದೆ !
ಈ ದೇಶದಲ್ಲಿ ಬಡವರ ಒಳಿತಿಗಾಗಿ ನೀನೇನು ಮಾಡಿದೆ ?
ಕವನ ಬರೆದೆ !
ಇರಲಿ ಇಲ್ಲಿ ಅಸಹಾಯಕರಿಗಾಗಿ , ಶೋಷಿತರಿಗಾಗಿ, ಸಹಾಯ ಯಾಚಿಸುವರಿಗಾಗಿ ನೀನೇನೆ ಮಾಡಿದೆ ?
ಕವನ ಬರೆದೆ !
ಇದೇನಿದು ಹೋಗಲಿ ನಿನ್ನ ಊಟಕ್ಕಾಗಿ ನೀನೇನು ಮಾಡಿದೆ ?
ಅದಕ್ಕೆ ನಾನು ಮಾಡಬೇಕೆ !!! ಅಡುಗೆ ಆಗಿದೆ ಎಂದು ಹೆಂಡತಿ ಕರೆದರೆ ಹೋಗಿ ಊಟಮಾಡಿದರೆ ಆಯ್ತಲ್ಲ !!
ಹೌದ ಸರಿಯೆ ! ಹೋಗಲಿ ಇರಲು ಮನೆಗೇನು ಮಾಡುವಿರಿ ?
ಮನೆಯೆ ! ಅದಕ್ಕೆ ನಾನೇನು ಮಾಡಬೇಕು ಅಪ್ಪ ಕಟ್ಟಿದ ಮನೆ ಇದೆಯಲ್ಲ !
ಸರಿ ಬಿಡಿ ! ಎಲ್ಲವು ಸರಿ ಇದೆ ನಾನಿನ್ನು ಬರಲೆ ?
ಅಯ್ಯಯ್ಯೊ ! ಇರಿ ಅದೇಕೆ ಹೊರಟಿರಿ ನಾನು ಬರೆದಿರುವ ಕವನ ಕೇಳಿ ಹೋಗುವಿರಂತೆ
.....
ಇದೇನು ಈ ಮನುಷ್ಯ ! ಬಡವರ ಬಗ್ಗೆ ದೇಶ ಭಕ್ತಿಯ ಬಗ್ಗೆ ಶೋಷಿತರ ಬಗ್ಗೆ ಬರೆದಿರುವ ಕವನ ಓದುವೆ ಕೇಳು ಎಂದರೆ ಓಡಿ ಹೋಗುತ್ತಿದ್ದಾನೆ ಸ್ವಲ್ಪ ವಾದರು ದೇಶದ ಬಗ್ಗೆ ಯೋಚನೆ ಇಲ್ಲ ! ಛೇ !
Rating
Comments
ಉ: ಕವನ ಬರೆದೆ
ಸಕತ್ ವಿಡಂಬನೆ,ಪಾರ್ಥರೇ. ಸ್ವಾತಂತ್ರ್ಯೋತ್ಸವದ ಶುಭಾಶಯಗಳು.
ಉ: ಕವನ ಬರೆದೆ
ಪಾರ್ಥಾ ಸಾರ್, ಸುಸಂಗತ ಸ್ವಗತ, ಬೇರೇನಿರದಿದ್ದರೂ ಬರಿ ಕವನ ಬರೆದಿದ್ದೆ ಲಾಭ ಅನ್ನಬೇಕೊ ಏನೊ? - ಸ್ವಾತಂತ್ರ್ಯೋತ್ಸವದ ಹಾರ್ದಿಕ ಶುಭಾಶಯಗಳು.
ಧನ್ಯವಾದಗಳೊಂದಿಗೆ,
ನಾಗೇಶ ಮೈಸೂರು
In reply to ಉ: ಕವನ ಬರೆದೆ by nageshamysore
ಉ: ಕವನ ಬರೆದೆ
ನಾಗೇಶರೆ ವಂದನೆಗಳು
ಕವನದಲ್ಲಿ ಯಾವ 'ಕರೆಯು' ಇಲ್ಲ ಕಳಕಳಿಯು ಇರಲಿಲ್ಲ ಸುಮ್ಮನೆ ಕುಳಿತೆ ಮನಸಿಗೆ ಬಂದ ಸಾಲುಗಳನ್ನು ಬರೆದೆ ಅಷ್ಟೆ ನೀವು ಹೇಳಿದಂತೆ ಕವನ ಬರದದ್ದಷ್ಟೆ ಲಾಭ ! ನಿಜ
ತಮಗು ಸಹ
ಸ್ವಾತಂತ್ರ್ಯೋತ್ಸವದ ಹಾರ್ದಿಕ ಶುಭಾಶಯಗಳು.
ಹಾಗೆ ಸಂಪದಿಗರೆಲ್ಲರಿಗೂ ಸಹ
ಸ್ವಾತಂತ್ರ್ಯೋತ್ಸವದ ಹಾರ್ದಿಕ ಶುಭಾಶಯಗಳು.
ಪಾರ್ಥಸಾರಥಿ