ಕಾಲ್ಮುರಿಹಾಕು

ಕಾಲ್ಮುರಿಹಾಕು

ಹೆದರ ಬೇಡಿ. ನಾನು ಯಾವುದೇ ಇಲೆಕ್ಷನ್ ಭಾಷಣ ಮಾಡುತ್ತಿಲ್ಲ.

ಇವತ್ತು ಐಪಿಲ್ ಕ್ರಿಕೆಟ್ ನೋಡುತ್ತಿದ್ದಾಗ ಕೇಳಿಸಿದ ಕನ್ನಡ ಇದು.

ಸಂಧರ್ಭ : ಬೆಂಗಳೂರಿನ ರಾಯಲ್ ಚ್ಯಾಲ್ಂಜರ್ಸ್ ಹಾಗು ರಾಜಾಸ್ಥಾನ್ ರಾಯಲ್ಸ್ ನಡುವಿನ ಪಂದ್ಯ.
ರಾಬಿನ್ ಉತ್ತಪ್ಪ ವಿಕೆಟ್ ಕೀಪಿಂಗ್ ಮಾಡುತ್ತಿದ್ದಾರೆ.
ಅನಿಲ್ ಕುಂಬ್ಳೆ ಚೆಂಡೆಸೆಯುತ್ತಿದ್ದಾರೆ.

ಆಗಾಗ ಉತ್ತಪ್ಪ ಅನಿಲ್ ಗೆ ಹಾಕುತ್ತಿದ್ದ ಕೂಗು - ಕಾಲ್ಮುರಿ ಹಾಕು. ಕಾಲ್ಮುರಿ !

ಅಂದರೆ ಲೆಗ್ ಬ್ರೇಕ್ ಇರಬೇಕಲ್ಲವೇ?

ಕುಂಬ್ಳೆಯವರಿಗೆ ೫ ಕ್ಕೆ ೫ ವಿಕೆಟ್ ದೊರೆಯಿತು. ಬೆಂಗಳೂರು ಹುಡುಗರು ಗೆದ್ದರಲ್ಲಪ್ಪ !

ಸಿರಿಗನ್ನಡಂ ಗೆಲ್ಗೆ.

Rating
No votes yet

Comments