'ಕಾಶ್ಮೀರ್ ಟು ಕನ್ಯಾಕುಮಾರಿ' - ನೀರಿನ ಸೆಲೆ ಹಿಡಿದು

'ಕಾಶ್ಮೀರ್ ಟು ಕನ್ಯಾಕುಮಾರಿ' - ನೀರಿನ ಸೆಲೆ ಹಿಡಿದು

ಸಿ ಎಸ್ ಶಾರದಾ ಪ್ರಸಾದ್ ನೀರಿನ ಸೆಲೆಗಳನ್ನು ಹುಡುಕಿಕೊಂಡು ಇಡಿಯ ದೇಶ ಬೈಕಿನಲ್ಲಿ ಸುತ್ತಲು ಹೊರಟದ್ದರ ಬಗ್ಗೆ ಈ ಹಿಂದೆ ಬರೆದಿದ್ದೆ. ಅವರು ೯೦ ದಿನಗಳಲ್ಲಿ ೧೯,೦೦೦ಕ್ಕೂ ಹೆಚ್ಚು ಕಿ.ಮಿ. ಪ್ರಯಾಣ ಮಾಡಿದರೂ ಟ್ರಿಪ್ ಯಶಸ್ವಿಯಾಗಿ ಮುಗಿಸಿಕೊಂಡು ಬಂದದ್ದು ಈಗ ಹಳೆಯ ಸುದ್ದಿ. ಆದರೆ ಈ ಯಾತ್ರೆಯಲ್ಲಿ ಅವರಿಗಾದ ಅನುಭವದ ಪುಟಗಳಲ್ಲಿನ ಭಾಗಗಳನ್ನು ಕೇಳಿ ತಿಳಿದು, ಜೋಡಿಸಿ ಕಳೆದ ವಾರದ ತರಂಗದಲ್ಲಿ ಮಾನ್ಯ ಶ್ರೀ ಪಡ್ರೆಯವರು ಒಂದು ಸಚಿತ್ರ ಲೇಖನ ಬರೆದಿದ್ದಾರೆ. ತರ‌ಂಗದ ಕಾಪಿ ಸಿಕ್ಕರೆ ಓದಿ.

ಶಾರದಾ ಪ್ರಸಾದ್ ಭಾರತುದ್ದಕ್ಕೂ ಅವರು ಭೇಟಿ ನೀಡಿದ ಸ್ಥಳಗಳಲ್ಲಿ ನೀರಿನ ಪರಿಸ್ಥಿತಿಯ ಫೋಟೋ ಲಾಗ್ ಮಾಡಿದ್ದಾರೆ. ಅದನ್ನು ಇಲ್ಲಿ ವೀಕ್ಷಿಸಬಹುದು.

ಭಾರತದಲ್ಲಿನ ನೀರಿನ ವ್ಯವಸ್ಥೆಯ ಕುರಿತು ಇಂಟರ್ನ್ಶಿಪ್ ಮಾಡುತ್ತಿದ್ದ ನಾರ್ವೆಯ ಸಿಲಿಯಾ ಕೂಡ ಇವರ ಜೊತೆಗೂಡಿದ್ದರಲ್ಲದೆ ಇವರ ಈ ಬೈಕ್ ಯಾತ್ರೆ GPS (ಗ್ಲೋಬಲ್ ಪೊಸಿಶನಿಂಗ್ ಸಿಸ್ಟಮ್) ಉಪಕರಣ ಬಳಸಿ ಲಾಗ್ ಮಾಡಿದ್ದಾರೆ.

ಪ್ರತಿಯೊಂದು ಫೋಟೋ ಜಿಯೋ ಟ್ಯಾಗಿನೊಂದಿಗಿದೆ - ಹೀಗಾಗಿ ಅದು ಎಲ್ಲಿ ತೆಗೆದದ್ದು ಎಂಬುದರ ಮಾಹಿತಿ ನಿಮಗೆ ಕೂಡಲೆ ಸಿಗುವುದು.

ಚಿತ್ರಗಳು: ಸಿ ಎಸ್ ಶಾರದಾ ಪ್ರಸಾದ್, ಸೀಲಿಯ

Rating
No votes yet