ಕೆರೆಯ ಕೊಲೆ

ಕೆರೆಯ ಕೊಲೆ

ಕೆಲವು ಕೆರೆಗಳು ಬೇಸಿಗೆ ಕಾಲದಲ್ಲಿ ಬತ್ತಿ, ಪುನಃ ಮಳೆಗಾಲದಲ್ಲಿ ತುಂಬಿ ತುಳುಕುತ್ತದೆ. ಲಾರಿಗಟ್ಟಲೆ ಕಸ ಕಡ್ಡಿ ಮಣ್ಣು, ಕೆಡವಿದ ಮನೆಗಳ ತ್ಯಾಜ್ಯಗಳನ್ನು ಕೆರೆಯಲ್ಲಿ ತುಂಬುವುದಿದೆಯಲ್ಲಾ- ಅದು ಕೆರೆಯ ಕೊಲೆ.


ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಸಂಭ್ರಮ ಕಾಲೇಜಿನ ಸಮೀಪದ ಬಂಡೆಯಲ್ಲಿರುವ "ಶಿವ ದೇವಾಲಯದ ಬಗ್ಗೆ ಬರೆದಿದ್ದೆ.   http://sampada.net/blog/%E0%B2%9A%E0%B2%BE%E0%B2%B0%E0%B2%A3%E0%B2%A6-%E0%B2%B8%E0%B2%82%E0%B2%AD%E0%B3%8D%E0%B2%B0%E0%B2%AE/04/03/2012/35873  ಬರಹದ ಕೊನೆಯಲ್ಲಿ ದೇವಾಲಯದ ಹಿಂಬದಿಯಲ್ಲಿರುವ ಕೆರೆಯ ಚಿತ್ರವಿದೆ. ಆ ಕೆರೆಯನ್ನು ನೋಡುವ ಉದ್ದೇಶದಿಂದಲೇ ಈ ಶಿವರಾತ್ರಿ ದಿನ ಸಂಜೆ ಅಲ್ಲಿಗೆ ಹೋಗಿದ್ದೆ. ಶಿವದೇವಾಲಯ ಜನರಿಂದ ತುಂಬಿತ್ತು.  ಕೆರೆ ಬತ್ತಿಹೋಗಿತ್ತು. ಸ್ವಾಭಾವಿಕ, ಈ ಸಲ ಮಳೆನೂ ಜಾಸ್ತಿ ಇರಲಿಲ್ಲ, ಬಿಸಿಲ ಝಳನೂ ಜಾಸ್ತಿ. ಆದರೆ ಪುನಃ ಮಳೆಗಾಲದಲ್ಲಿ ನೀರು ತುಂಬದಂತೆ ಕಲ್ಲುಮಣ್ಣು ರಾಶಿ ತುಂಬಿದ್ದು ನೋಡುವಾಗ ಸಂಕಟವಾಯಿತು.



"ಚೀರ್ ಅಪ್. ಎಂತೆಂತಹ ಕೆರೆಯನ್ನೆಲ್ಲಾ ನುಂಗಿ ಬೆಳೆದಿರುವ ಬೆಂಗಳೂರಿದು. ಈ ಪುಟಾಣಿ ಕೆರೆಗೆ ಚಿಂತೆ ಮಾಡುತ್ತೀಯಾ..ಅಭಿವೃದ್ಧಿಗೆ ಕೆರೆಮರಗಳ ಬಲಿ ಆಗಲೇಬೇಕು." ಎಂದು ಮನಸ್ಸಲ್ಲೇ ಸಮಾಧಾನ ಮಾಡಿಕೊಂಡು ಹಿಂದೆ ಬಂದೆನು.


ಈ ಸಂಡೆ ಪುನಃ ಕೆರೆಯ ಅರೋಗ್ಯದಲ್ಲಿ ಚೇತರಿಕೆಯೇನಾದರೂ ಆಗಿರಬಹುದೇ ಎಂದು,ದೂರದ ಆಸೆಯೊಂದಿಗೆ ನೋಡಲು ಹೋದೆ. ಇನ್ನಷ್ಟು ಬಿಗಡಾಯಿಸಿದೆ.  ಹಿಂದೆ ಬರುವಾಗ ದೇವಾಲಯದ ಬಾಗಿಲು ತೆರೆದಿರುವುದು ಕಾಣಿಸಿತು. ಬಳಿ ಹೋಗಿ ಲೈಟು ಬೆಳಕಲ್ಲಿ ಬಗ್ಗಿ ನೋಡಿದಾಗ ಆಶ್ಚರ್ಯ! ಕಳೆದ ವರ್ಷ ಬಂದಿದ್ದಾಗ ಕತ್ತಲೆಯಲ್ಲಿ ಶಿವಲಿಂಗ ಎಂದು ಕೈಮುಗಿದ ಮೂರ್ತಿ -ಶಿವಲಿಂಗದ ಎದುರಿಗಿರುವ "ಬಸವ"ನ ಹಿಂಬದಿ..


:)

Rating
No votes yet

Comments

Submitted by venkatb83 Wed, 03/20/2013 - 15:43

ಗಣೇಷ್ ಅಣ್ನಾ ನೀವ್ ಭಲೇ ಮಾರಾರೆ..!! ಈಗ್ ಇದು ಖಾತ್ರಿ ಆಯ್ತು..ನೀವ್ವ್ ಹೋದ‌ ಜಾಗಕ್ಕೆ ಮತ್ತ್ತೆ ಮತ್ತೆ ಹೋಗೋದು ಇದೆ.... ಈಗ‌ ಆ ಜಾಗಗಳ‌ ಪಟ್ಟಿ ಮಾಡಿ.......!!

ಕೆರೆಗ್ಳ‌ ನು0ಗಿ ನಿರ್ ಕುಡಿವ‌ ಜನ‌ ಎಲ್ಲೆಡೆ ಇರ್ವರು..ಹಳ್ಳಿ ದಿಲ್ಲಿ ಹೊರತಲ್ಲ‌.. ಕುಡಿಯಲು ನೀರ್ ಸಿಗದೆ ಬಾಯ್ ಬಾಯ್ ಬಡಿ....ವಾಗ‌ ಆ ನೀರಿನ‌ ಜಲ‌ ಮೂಲದ‌ ಮಹತ್ವ ಅರಿವಾಗೊದು...
ಸಕಾಲಿಕ‌ ಬರಹ‌...
ಅಲ್ಲಿ ದೇವರ‌ ಮು೦ದೆ ಬಾಗಿರೊದು ನೀವೆ ಆದ್ರೆ ‍‍‍ ಆ ಪೋಟೊ ತೆಗೆದದ್ದು ಬೇರೆ ಯಾರೋ ಇರ್ಬೆಕು..!

ಒಳೀತಾಗಲಿ..

\|/

Submitted by ಗಣೇಶ Wed, 03/20/2013 - 23:30

In reply to by venkatb83

>>ಅಲ್ಲಿ ದೇವರ‌ ಮು೦ದೆ ಬಾಗಿರೊದು ನೀವೆ ಆದ್ರೆ...---ಗುಡಿಯೊಳಗೆ ಹೋಗೋ ಅವಕಾಶ ಸಿಕ್ಕಿದ್ದರೆ ಇನ್ನಷ್ಟು ಫೋಟೋ ಹಾಕುತ್ತಿದ್ದೆ. ಆತ ಆರತಿ ಮಾಡಿ ತಿರುಗುವುದರೊಳಗೇ ಪೋಟೋ ತೆಗೆಯಬೇಕೆಂದು ಅವಸರದಲ್ಲಿ ತೆಗೆದೆ.

Submitted by RAMAMOHANA Wed, 03/20/2013 - 16:29

ಹಿಂದೆ ಬರುವಾಗ ದೇವಾಲಯದ ಬಾಗಿಲು ತೆರೆದಿರುವುದು ಕಾಣಿಸಿತು. ಬಳಿ ಹೋಗಿ ಲೈಟು ಬೆಳಕಲ್ಲಿ ಬಗ್ಗಿ ನೋಡಿದಾಗ ಆಶ್ಚರ್ಯ! ಕಳೆದ ವರ್ಷ ಬಂದಿದ್ದಾಗ ಕತ್ತಲೆಯಲ್ಲಿ ಶಿವಲಿಂಗ ಎಂದು ಕೈಮುಗಿದ ಮೂರ್ತಿ -ಶಿವಲಿಂಗದ ಎದುರಿಗಿರುವ "ಬಸವ"ನ ಹಿಂಬದಿ.. >> ಗಣೇಶ್ ಜಿ ಚಿತ್ರದಲ್ಲಿ ಎರಡು ಬಸವಗಳ‌ ಹಿ0ಬಾಗ‌ ಕಾಣುತ್ತಿದೆ. ನೀವು ಹೋದ‌ ವರ್ಷ‌ ನೋಡಿದ್ದು ಯಾವ‌ ಬಸವದ‌...............??
ಚಿತ್ರಗಳು ಮಾತ್ರ ಸೂಪರ್.
ರಾಮೋ.

Submitted by partha1059 Wed, 03/20/2013 - 19:32

ಗಣೇಶರೆ ದೊಡ್ಡ ದೊಡ್ಡ ಕೆರೆಗಳನ್ನೆ ದೊಡ್ಡವರು ನುಂಗಿ ನೀರುಕುಡಿಯುತ್ತಿದ್ದಾರೆ, ಕೆ ಅರ್ ಎಸ್ ಅನ್ನು ಜಯಲಲಿತಮ್ಮ ನುಂಗಿ ನೊಣೆದ ಹಾಗೆ, ನಮ್ಮ ಏರಿಯದ ಹೊಸಕೆರೆಹಳ್ಳಿಯ ದೊಡ್ಡ ಕೆರೆಯನ್ನು ನೈಸ್ ರಸ್ತೆಯ ಹೆಸರಿನಲ್ಲಿ ಮುಕ್ಕಾಲು ಮುಚ್ಚಿ ಹಾಕಿದರು ಕೆರೆಗಳೆಲ್ಲ ಇನ್ನು ಮುಂದೆ ಕವನಗಳಲ್ಲಿ ಅಷ್ಟೆ. ನಾವಂತು ಅತಿ ಕೆಟ್ಟಕಾಲದಲ್ಲಿ ಬದುಕುತ್ತಿದ್ದೇವೆ ಅನ್ನುವುದೆ ಬೇಸರ !!
@ಸಪ್ತಗಿರಿ
ಈಗ ನೋಡಿ ಸಾಕಷ್ಟು ಕ್ಲೂ, ಗಣೇಶರು ಬೆಳಗ್ಗೆ ವಾಕಿಂಗ್ ಮಾಡುವ ಜಾಗ ಹೆಚ್ಚು ಕಡಿಮೆ ಹೀಗಿದೆ
ಸಂಭ್ರಮ ಕಾಲೆಜಿನ ಆಸುಪಾಸು, ಅಂಬಭಾವನಿ ದೇವಾಲಯ, ಎಮ್ ಎಸ್ ಪಾಳ್ಯದು ಸುತ್ತಮುತ್ತ, ಜಾಲಹಳ್ಳಿ ಈಸ್ಟ್ ಎನ್ನುವ ಜಾಗಗಳು
ಅನ್ನುವುದು ಸಹ ಒಂದು ಊಹೆ, ಸಂಬ್ರಮ ಕಾಲೇಜಿನ ಹಿಂದಿನ ಬೆಟ್ಟಳ್ಳಿ ಕ್ವಾರೆ, ಶಿವ ದೇವಾಲಯ ಇಲ್ಲೆಲ್ಲ ಗಮನವಿಡಿ , ಅವರು ನೋಡಿದ ದೇವಾಲಯದ ಗೂಗಲ್ ನೋಟ ಹೀಗಿದೆ , ಸಂಪದದ ಪ್ರತಿಕ್ರಿಯೆಯಲ್ಲಿ ಕೊಡುವುದು ಸ್ವಲ್ಪ ಕಷ್ಟವೆ
href="https://www.google.com/search?um=1&hl=en&bav=on.2,or.r_cp.r_qf.&bvm=bv.44011176,d.bmk&biw=1024&bih=653&q=sambhram%20engineering%20college%20shiva%20temple%20&ie=UTF-8&sa=N&tab=iw&ei=6r1JUZ6GFobYrQef84Ew#hl=en&sclient=psy-ab&q=shiva+temple+near+sambhram+engineering+college+++&oq=shiva+temple+near+sambhram+engineering+college+++&gs_l=serp.12...5775.11565.1.12674.8.8.0.0.0.3.170.1141.0j8.8.0...0.0...1c.1.7.psy-ab.UYH2Bk9qu1c&pbx=1&bav=on.2,or.r_cp.r_qf.&bvm=bv.44011176,d.bmk&fp=4f694d2609e7462f&biw=1024&bih=653"> shiva-ಶಿವ

Submitted by partha1059 Wed, 03/20/2013 - 19:38

In reply to by partha1059

ಸರಿಯಾಗಿ ಬರಲಿಲ್ಲ , ಮತ್ತೊಮ್ಮೆ ಗೂಗಲ್ ಮ್ಯಾಪ್ ನೋಡಿ ಹೀಗಿದೆ
href="https://maps.google.com/maps?hl=en&ie=UTF-8&q=sambhram+engineering+college+bangalore&fb=1&hq=sambhram+engineering+college&hnear=0x3bae1670c9b44e6d:0xf8dfc3e8517e4fe0,Bangalore,+Karnataka,+India&ei=rbxJUariCIzwrQe5sIGYBA&sqi=2&ved=0CKMBELYD"> ಸಂಬ್ರಮ ಕಾಲೇಜ್

Submitted by ಗಣೇಶ Wed, 03/20/2013 - 23:35

In reply to by partha1059

ಪಾರ್ಥಸಾರಥಿಯವರೆ, ಹೆಸರಿಗೆ ತಕ್ಕಂತೆ ವ್ಯೂಹ ಭೇದಿಸಿ ಒಳನುಗ್ಗಿದ್ದೀರಿ! ಇನ್ನೇನು ಕೆಲವೇ ದಿನಗಳಲ್ಲಿ ಭೇಟಿಯಾಗಲಿದ್ದೇವೆ:)

Submitted by venkatb83 Thu, 03/21/2013 - 13:53

In reply to by partha1059

ನಾ ಇರೋದ್ ಅಲ್ಲಿ ಹತ್ತಿರದಲ್ಲಿಯೆ.....ಸಂಬ್ರಮ ಕಾಲೇಜ್ ಜಸ್ತ್ 3 ಕಿಲೋ ಮೀಟರ್..!! ಸಿಕ್ರೋ ಸಿಗ್ಬಹುದು...ನೊಡ್ವ‌...

ಒಳೀತಾಗಲಿ..

\|

Submitted by ಗಣೇಶ Fri, 03/22/2013 - 23:45

In reply to by venkatb83

ಲಾಸ್ಟ್ ಬಸ್ ೨೭೧ D ಯಲ್ಲಿ ನಾನೂ ಕೆಲಸ ಮುಗಿಸಿ ಬರುತ್ತಿದ್ದೆ. ನಿಮ್ಮ ಗಮನವೆಲ್ಲಾ ಒಂದೋ ಮೊಬೈಲ್ ಕಡೆ,ಇಲ್ಲಾ ಬಾಂಬು ಇರುವ ಚೀಲದ ಕಡೆ..ನಾನೇನು ಮಾಡಲಿ..:(

Submitted by partha1059 Thu, 03/21/2013 - 14:09

ಗಣೇಶರೆ
ಅ0ದಹಾಗೆ ನೀವು ಮೊದಲ‌ ಬಾರಿ ಅಲ್ಲಿ ಹೋಗಿ ಒಳಗೆ ಹೋಗದೆ ಕೈ ಮುಗಿದಾಗ‌ ಮಗಳ‌ ಎಮ್ ಬಿ ಬಿ ಎಸ್ ರಿಸಲ್ಟ್ ಬ0ದು ಪಾಸ್ ಆಯಿತು, ಈಗ‌ ಒಳಗೆ ಹೋಗಿ ಕೈ ಮುಗಿದಿರಿ, ಬಹುಷ ಮೊನ್ನೆ ಜಯನಗರದಲ್ಲಿ ಬರೆದ‌ ಎ0ಟ್ರೆನ್ಸ್ ಟೆಸ್ಟ್ ನಲ್ಲಿ ಸಕ್ಸಸ್ ಆಗಿ , ಅವಳಿಗೆ ಬೇಕಾದ‌ ಕಾಲೇಜಿನಲ್ಲಿಯೆ ಮತ್ತೆ ಅಡ್ಮಿಷನ್ ಸಿಗಬಹುದು. :‍)

Submitted by sasi.hebbar Thu, 03/21/2013 - 17:42

In reply to by partha1059

! ಬಸವಣ್ಣನ ಪೃಷ್ಠಕ್ಕೆ ಕೈಮುಗಿದರೂ, ಆ ಭಕ್ತಿಯು ಬಸವಣ್ಣನ ಮಾಲೀಕನಾದ ಶಿವನಿಗೆ ತಲುಪುತ್ತೆ ! ಅಲ್ವೆ! ಆದರೆ, ಕೆರೆಯ ಕೊಲೆ ಮಾತ್ರ ನುಂಗಲಾರದ ತುತ್ತು.

Submitted by ಗಣೇಶ Sat, 03/23/2013 - 00:02

In reply to by sasi.hebbar

ನಿಜ ಹೆಬ್ಬಾರರೆ. ಶಿವನಿಗೆ ತಲುಪಿ ಉತ್ತಮ ರಿಸಲ್ಟೂ ನೀಡಿದ್ದ. >>>ಆದರೆ, ಕೆರೆಯ ಕೊಲೆ ಮಾತ್ರ ನುಂಗಲಾರದ ತುತ್ತು.---ನುಂಗಲಾರದ ತುತ್ತನ್ನೂ ನುಂಗಿದ ವಿಷಕಂಠನಲ್ಲಿ ಕೆರೆಯ ಬಗ್ಗೆಯೂ ಮೊರೆಯಿಟ್ಟಿದ್ದೇನೆ...ನೋಡೋಣ.

Submitted by ಗಣೇಶ Fri, 03/22/2013 - 23:57

In reply to by partha1059

ಪಾರ್ಥರೆ, ನಿಮ್ಮ ಹಾರೈಕೆಗೆ ತುಂಬಾ ಧನ್ಯವಾದಗಳು. ಸಿ ಇ ಟಿ ಪರೀಕ್ಷೆ ಹೇಗೆ ಮೆಡಿಕಲ್ ಆಕಾಂಕ್ಷಿ ವಿದ್ಯಾರ್ಥಿಗಳಿಗೆ ಸಹಾಯಕವಾಯಿತೋ, ಅದೇ ರೀತಿ ಎಮ್ ಡಿ ಸೇರ ಬಯಸುವ ಡಾಕ್ಟ್ರುಗಳಿಗೆ, ಆಲ್ ಇಂಡಿಯಾ ಮಟ್ಟದಲ್ಲಿ "NEET" ಪರೀಕ್ಷೆ ಒಂದು ಉತ್ತಮ ಪ್ರಯತ್ನವಾಗುತ್ತಿತ್ತು. ( http://www.nbe.gov.in/neetpg/resultscoring.php ) ಖಾಸಾಗಿ ಕಾಲೇಜ್ ಕುಳಗಳು ಕೋರ್ಟ್‌ನಲ್ಲಿ ತಕರಾರೆತ್ತಿದ್ದಾರೆ. ಯಾವಾಗ ತೀರ್ಮಾನ ಬರುವುದೋ ಗೊತ್ತಿಲ್ಲ. ಕೊನೇ ಪಕ್ಷ ಕಟ್ಟಿದ ಪರೀಕ್ಷೆಯ ರಿಸಲ್ಟ್ ಆದರೂ ಪ್ರಕಟಿಸುತ್ತಿದ್ದರೆ- ಮಕ್ಕಳು ಬೇರೆ ಏನಾದರೂ ಪ್ರಯತ್ನಿಸಬಹುದು. ನನ್ನ ಮಗಳದ್ದು ಇದು ಮೊದಲ ಪ್ರಯತ್ನ. ಅನೇಕ ವರ್ಷದಿಂದ ಪ್ರಯತ್ನಿಸುತ್ತಿರುವವರ ಬಗ್ಗೆ ಯೋಚಿಸುವಾಗ ಬೇಸರವಾಗುತ್ತದೆ. ನಮ್ಮ ಸರ್ಕಾರ ಕೋರ್ಟ್‌ಗಳು ಯಾವಾಗ ಸುಧಾರಿಸುತ್ತವೆ... http://www.rguhspget2013.com/# http://timesofindia.indiatimes.com/city/mumbai/NEET-results-delayed-as-case-pending-in-apex-court/articleshow/18941485.cms

Submitted by partha1059 Sat, 03/23/2013 - 10:53

In reply to by ಗಣೇಶ

ನಮ್ಮ ಸರ್ಕಾರ ಕೋರ್ಟ್‌ಗಳು ಯಾವಾಗ ಸುಧಾರಿಸುತ್ತವೆ. <\p>

ಹಹ್ಹ....ಹಹ್ಹಹ್ಹಹ್ಹಹ್ಹ........ಹಹ್ಹಹ್ಹಹ್ಹ :‍) ಹಹ್ಹ....ಹಹ್ಹಹ್ಹಹ್ಹಹ್ಹ........ಹಹ್ಹಹ್ಹಹ್ಹ :‍)
ಹಹ್ಹ....ಹಹ್ಹಹ್ಹಹ್ಹಹ್ಹ........ಹಹ್ಹಹ್ಹಹ್ಹ :‍) ಹಹ್ಹ....ಹಹ್ಹಹ್ಹಹ್ಹಹ್ಹ........ಹಹ್ಹಹ್ಹಹ್ಹ :‍)
ಹಹ್ಹ....ಹಹ್ಹಹ್ಹಹ್ಹಹ್ಹ........ಹಹ್ಹಹ್ಹಹ್ಹ :‍) ಹಹ್ಹ....ಹಹ್ಹಹ್ಹಹ್ಹಹ್ಹ........ಹಹ್ಹಹ್ಹಹ್ಹ :‍)
ಹಹ್ಹ....ಹಹ್ಹಹ್ಹಹ್ಹಹ್ಹ........ಹಹ್ಹಹ್ಹಹ್ಹ :‍) ಹಹ್ಹ....ಹಹ್ಹಹ್ಹಹ್ಹಹ್ಹ........ಹಹ್ಹಹ್ಹಹ್ಹ :‍)
ಹಹ್ಹ....ಹಹ್ಹಹ್ಹಹ್ಹಹ್ಹ........ಹಹ್ಹಹ್ಹಹ್ಹ :‍) ಹಹ್ಹ....ಹಹ್ಹಹ್ಹಹ್ಹಹ್ಹ........ಹಹ್ಹಹ್ಹಹ್ಹ :‍)
ಹಹ್ಹ....ಹಹ್ಹಹ್ಹಹ್ಹಹ್ಹ........ಹಹ್ಹಹ್ಹಹ್ಹ :‍) ಹಹ್ಹ....ಹಹ್ಹಹ್ಹಹ್ಹಹ್ಹ........ಹಹ್ಹಹ್ಹಹ್ಹ :‍)
ಹಹ್ಹ....ಹಹ್ಹಹ್ಹಹ್ಹಹ್ಹ........ಹಹ್ಹಹ್ಹಹ್ಹ :‍) ಹಹ್ಹ....ಹಹ್ಹಹ್ಹಹ್ಹಹ್ಹ........ಹಹ್ಹಹ್ಹಹ್ಹ :‍)
.
.
.
..
.
.
ಹಹ್ಹ....ಹಹ್ಹಹ್ಹಹ್ಹಹ್ಹ........ಹಹ್ಹಹ್ಹಹ್ಹ :‍) ಹಹ್ಹ....ಹಹ್ಹಹ್ಹಹ್ಹಹ್ಹ........ಹಹ್ಹಹ್ಹಹ್ಹ :‍)

Submitted by ಗಣೇಶ Sat, 03/30/2013 - 00:17

In reply to by partha1059

ಹಹ್ಹ....ಹಹ್ಹಹ್ಹಹ್ಹಹ್ಹ........ಹಹ್ಹಹ್ಹಹ್ಹ :‍) ಪಾರ್ಥರೆ, ಬರೆಯುವಾಗ ಯೋಚನೆಯೇ ಆಗಲಿಲ್ಲ. ಈಗ ನಿಮ್ಮ ಪ್ರತಿಕ್ರಿಯೆ ನೋಡುವಾಗ ಅನಿಸಿತು- ದೊಡ್ಡ ಜೋಕೇ ಹೇಳಿದ್ದೆ:) :)

Submitted by venkatb83 Sat, 03/23/2013 - 13:02

;())) ಅದು ಜಾಲಹಳ್ಳಿ ವಿಲೆಜ್ ಗೆ ಹೋಗೋ ಬಸ್ಸು/.... ನಮ್ದು ಬೇರೆ ಬಿಡಿ..ಆದ್ರೂ ನಿಮಗೆ ಹತ್ತಿರವೇ ನಾವ್ ಇರೊದು.....!!
.....!! 271 ಸರಿ...ಆದ್ರೆ ಡಿ ಅಲ್ಲ‌...ಗೆಸ್ ಮಾಡೀ..

ಒಳಿತಾಗಲಿ...

\|

Submitted by ಗಣೇಶ Sat, 03/30/2013 - 00:27

In reply to by venkatb83

271-A ಅಬ್ಬಿಗೆರೆ,271-B ಕುವೆಂಪು ನಗರೆ ೨ನೇ ಫೇಸ್,271-C ಸಿಂಗಾಪುರ,271-E ವೀರಸಾಗರ,271-F ಚಿಕ್ಕಬಾಣಾವರ,271-G ಸೋಮಸೆಟ್ಟಿಹಳ್ಳಿ,271-H ಯಲಹಂಕ ಸ್ಯಟಲೈಟ್ ೫ನೇ ಫೇಸ್,271-J ಜಾಲಹಳ್ಳಿ ವಿಲೇಜ್ (271-D ಸಹ),271-K ಮುತ್ಯಾಲ ನಗರ ಟೆಂಪ್‌ಲ್,271-M ಜಾಲಹಳ್ಳಿ ೭ನೇಕ್ಯಾಂಪ್,271-N ಕೆರೆಗುಡ್ಡದ ಹಳ್ಳಿ, 271-P ರಾಘವೇಂದ್ರ ಬಡಾವಣೆ,271-Q ಯಶವಂತಪುರ,271-R ಯಶವಂತಪುರ.....ಗೆಸ್ ಮಾಡುತ್ತಿದ್ದೇನೆ. :)