ಕೆಳದಿ ವೆಂಕಣ್ಣ ಕವಿಯ ಕೀತಱನೆಗಳ ಸೊಗಸು

ಕೆಳದಿ ವೆಂಕಣ್ಣ ಕವಿಯ ಕೀತಱನೆಗಳ ಸೊಗಸು

ಕೆಳದಿ ಸಾಮ್ರಾಜ್ಯದ ಇತಿಹಾಸದಲ್ಲಿ ಕೆಳದಿ ಕವಿ ಮನೆತನದ ಪಾತ್ರ ಅತ್ಯಂತ ಅಮೂಲ್ಯವಾದುದು. ಕೆಳದಿ ಆಸ್ಥಾನ ಕವಿ ಕವಿ ಲಿಂಗಣ್ಣನು ರಚಿಸಿದ 'ಕೆಳದಿ ನ್ಋಪ ವಿಜಯ' ವೆಂಬ ಅನುಪಮ ಕ್ಋತಿ ಇಡೀ ಕೆಳದಿ ಇತಿಹಾಸಕ್ಕೆ ಹಿಡಿದ ಕ್ಐಕನ್ನಡಿ. ಈ ಕವಿ ಲಿಂಗಣ್ಣನ ಮಗನೇ ವೆಂಕ ಕವಿ ಅಥವಾ ಕವಿ ವೆಂಕಣ್ಣ. ಸುಮಾರು 1760-70 ರ ಆಸುಪಾಸಿನಲ್ಲಿ (ಅಂದರೆ ಕೆಳದಿ ಸಾಮ್ರಾಜ್ಯದ ಅವನತಿಯ ಕಾಲದಲ್ಲಿ) ಈ ಕವಿ ಸಾಗರ ಅಥವಾ ಸಾಗರದ ಸಮೀಪದ ಸುಳಗೋಡು ಎಂಬ ಗ್ರಾಮದಲ್ಲಿ ಕಷ್ಟಕರವಾದ ಜೀವನವನ್ನು ಸಾಗಿಸಿದಂತೆ ತೋರುತ್ತದೆ. ತನ್ನ ಪೂವಿಱಕರಂತೆ ಉತ್ತಮ ಕವಿಯಾಗಿದ್ದಖೀ
ಈತ 'ನರಹರಿ ವಿಜಯ' (ಭಾಮಿನಿ ಷಟ್ಪದಿಯ ಕಾವ್ಯ), 'ಗಣ ಸಹಸ್ರನಾಮ' ಮತ್ತು ಪಾವಱತೀ ವಲ್ಲಭ ಶತಕ' ಎಂಬ ಕ್ಋತಿಗಳ ರಚನೆಕಾರ.

ಕೆಳದಿ ರಾಮೇಶ್ವರ ದೇವರನ್ನು ಮತ್ತು ಕುಲದ ಆರಾಧ್ಯದೇವತೆಯಾದ ಕೊಲ್ಲೂರು ಮೂಕಾಂಬಿಕೆಯನ್ನು ಅಂಕಿತವಾಗಿಟ್ಟುಕೊಂಡು ಈ ವೆಂಕಣ್ಣ ಕವಿ ಭಕ್ತಿಯಿಂದ ರಚಿಸಿದ ಹಲವಾರು ಕೀತಱನೆಗಳು ತಾಡವೋಲೆಯಲ್ಲಿ ದೊರೆತಿದ್ದು, ಕೆಳದಿ ಗುಂಡಾಜೊಯಿಸರು 'ಕೆಳದಿ ವೆಂಕಣ್ಣ ಕವಿಯ ಕೀತಱನೆಗಳು' ಎಂಬ ಪುಸ್ತಕದಲ್ಲಿ ಸಂಪಾದಿಸಿ ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಪ್ರಕಟಿಸಿದ್ದಾರೆ (1977). ವಿನಾಯಕ, ಸುಬ್ರಹ್ಮಣ್ಯ ಮುಂತಾದ ದೇವರುಗಳ ಮೇಲೂ ಈ ಕವಿ ರಚಿಸಿರುವ ಅನೇಕ ಕೀತಱನೆಗಳು ದೇವರ ಮೇಲೆ ಇಟ್ಟಿರುವ ಅಚಲ ಶ್ರದ್ಧಾಭಕ್ತಿಯ ದ್ಯೋತಕವಾಗಿದೆ. ಇವರ ಅನೇಕ ಕ್ಋತಿಗಳು ಭಕ್ತಿಭಾವದ ಜೊತೆಗೆ ಪುರಂದರದಾಸರ ಹಾಗೂ ಕನಕದಾಸರ ಕೀತಱನೆಗಳಂತೆ ಪಾಮರರನ್ನು ಸನ್ಮಾಗಱಕ್ಕೆ ಒಯ್ಯಯವಲ್ಲಿ ಅತ್ಯಂತ ಸಹಕಾರಿಯಾದೆ. ವೆಂಕಣ್ಣ ಕವಿ ರಚಿಸಿದ ಅನೇಕ ಕೀತಱನೆಗಳಲ್ಲಿ ಬದುಕಿನಾಥಱದ ಬಗ್ಗೆ ಹಾಗೂ ಹಲವು ದೇವರ ಮಹಿಮೆಯ ಬಗ್ಗೆ ವಿವರಣೆಗಳು ಬಲು ಮನೋಜ್ಞವಾಗಿದ್ದು, ಅಂತಹ ಕೆಲವು ರಚನೆಗಳಿಂದ ಆಯ್ದ ಕೆಲವು ಸಾಲುಗಳನ್ನು ಇಲ್ಲಿ ಪ್ರಸ್ತುತ ಪಡಿಸುವ ಮೂಲಕ ಈ ರಚನೆಗಳ ಒಂದು ಸೂಕ್ಷ್ಮ ಪರಿಚಯವನ್ನೂ ಮಾಡಿಕೊಡುವ ಪ್ರಯತ್ನ ಇದಾಗಿದೆ.

'ಹೂವ ಕೊಡೇ ದೇವೀ..' ಎಂಬ ಕೀತಱನೆಯಲ್ಲಿ ಸುಂಗಲಿಯರು ದೇವೆಯನ್ನು ಸ್ತುತಿಸಿ ಬೇಡುವ ಈ ಸಾಲುಗಳು ಅತ್ಯಂತ ಸುಂದರವಾಗಿವೆ:

"...ಮುತ್ಐದೆತನವನು ನಿತ್ಯ ಸೌಭಾಗ್ಯವ
ಉತ್ತಮ ಧನಕನಕಾಂಬರವ
ಪುತ್ರಸಂತಾನವ ಕೊಡುವೆನೆನುತ ಕರ
ವೆತ್ತಿ ಆಭಯವಿತ್ತು | ಹೂವ ಕೊಡೆ | ಹೂವ...
ಎಂದೆಂದೂ ಈ ಮನೆಗೆ ಕುಂದದ ಭಾಗ್ಯವ
ಚಂದವಾಗಿಹ ಛತ್ರ ಚಾಮರವ
ಚಂದ್ರ ಸೂಯಱರ ಪೊಲ್ವ ನಂದನರನುದಯ
ದಿಂದಲಿ ಕೊಟ್ಟು ರಕ್ಷಿಪೆನೆಂದು ಸೂಡಿದ ಹೂವ........."

ಕಮಾಚ್ ರಾಗದಲ್ಲಿರುವ ಈ ಹಾಡು ಶಾಸ್ತ್ರೀಯ ಸಂಗೀತದಲ್ಲೂ ಹಾಗೂ ಸುಗಮ ಸಂಗೀತದಲ್ಲೂ ಹಾಡಲು ಬಲು ಸೊಗಸಾಗಿದೆ. ಅದೇ ರೀತಿ ನೀಲಾಂಬರಿ ರಾಗದಲ್ಲಿ ರಚಿತವಾದ ಮಕ್ಕಳಿಗೆ ಆಶೀವಾಱದವ ಕೋರುವ ಕೀತಱನೆಯಲ್ಲಿ ಮಕ್ಕಳು ಮುಂದೆ ಯಾವ ರೀತಿ ಆಗಬೇಕೆಂಬುದನ್ನು ಕವಿ ಈ ರೀತಿ ವಿವರಿಸದ್ಧಾನೆ:

"....ಇಂದ್ರನಾಗು ಭೋಗದೊಳು ಸತ್ಯವಾಕ್ಯದೊಳು ಹರಿ-
ಶ್ಚಂದ್ರನಾಗು ಪಾಲನೆಯ ಮಾಡುವದರೊಳಗೆ ಉ-
ಪೇಂದ್ರನಾಗು ಬುದ್ಧಿ ಕೌಶಲದೊಳು ತಿಳಿಯಲು ನಾ-
ಗೇಂದ್ರ ನೀನಾಗು............"

ಇದಕ್ಕಿಂತ ಮಕ್ಕಳಿಗೆ ಹೆಚ್ಚಿನ ಆಶೀವಾಱದ, ಹಾರ್ಐಕೆ ಬೇಕೇ? ಇಡೀ ಕೀತಱನೆ ಇಂತಹ ಆಶೀವಱಚನಗಳೊಂದಿಗೆ ಮಕ್ಕಳಿಗೆ ಮುಂದೆ ಜೀವನದಲ್ಲಿ ಹೇಗೆ ಬದುಕಬೇಕು; ನಡೆದುಕೊಳ್ಳಬೇಕು ಎಂಬ ಬಗ್ಗೆ ಕೂಡಾ ಸಾಕಷ್ಟು ಮಾಗಱದಶಱನವೂ ಕೂಡಿರುವುದು ಗಮನಾಹಱ.
ಬಹುಶ: ಗ್ಐಹಿಣಿಯರನ್ನು ಉದ್ದೇಶಿಸಿ ಬರೆದ ಈ ಸಾಲುಗಳು ಸ್ವಯಂವೇದ್ಯವಾಗಿವೆ:

"......ಪರಿಮಳಿಸುವ ಪುಷ್ಪ ಸರಗಳ ಮುಡಿದು
ಗುರು ಹಿರಿಯರ ಆಶೀವಾಱದವ ಪಡೆದು
ಹರುಷದಿ ಪುತ್ರ ಪೌತ್ರರ ಸಲಹುತ ಪತಿ
ಚರಣ ಸೇವೆಯ ಮಾಡಿ ಸುಖವಿರು ಕುಕ್ಕೆಯ
ವರ ಸುಬ್ರಹ್ಮಣ್ಯನ ಕ್ಋಪೆಯಿಂದಾ...."
ಪೂವಿಱಕಲ್ಯಾಣಿ ರಾಗದಲ್ಲಿ ರಚಿತವಾದ ಮತ್ತೊಂದು ಅಪೂವಱ ಕೀತಱನೆ ಆಧ್ಯಾತ್ಮ ಚಿಂತನೆಯತ್ತ ನಮ್ಮನ್ನು ಸೆಳೆಯುತ್ತದೆ. ಅದರಲ್ಲಿ ಬರುವ ಈ ಸಾಲುಗಳು ಅತ್ಯಂತ ನೀತಿ ಬೋಧಕವೂ, ಅನುಕರಣೀಯವೂ ಆಗಿವೆ:
"ತನ್ನ ತಾನೇ ತಿಳಿಯಬೇಕು | ತೋರುವ ಲೋಕ-
ವನ್ನು ದ್ಐಶ್ಯವೆಂದಿರಬೇಕು
ತನ್ನಂತೆ ಸಕಲರ ನೋಡಲು ಬೇಕು
ಅನ್ಯನಾದರು ಹಿತವನೆ ಮಾಡಬೇಕು
ಪ್ರಸನ್ನ ರಾಮೇಶನ ನೆನಹಿರಬೇಕು || ..."
ಭಗವದ್ಗೀತೆಯಲ್ಲಿ ಬರುವಂತೆ ನಾವು ಈ ಸಂಸಾರ ಬಂಧನದಲ್ಲಿದ್ದರೂ ಕೂಡ ಮಾನಸಿಕವಾಗಿಯಾದರೂ ಆ ಜಂಜಾಟಕ್ಕೆ ಸಿಲುಕಬಾರದು. ನಾವು ಮಾಡಬೇಕಾದ ಕತಱವ್ಯಗಳನ್ನು ಯಾವುದೇ ಫಲಾಪೇಕ್ಷೆಯಿಲ್ಲದೆ, ನಿವಿಱಕಾರ ಭಾವದಿಂದ ಮಾಡುವ ಪ್ರವ್ಐತ್ತಿ ಬೆಳೆಸಿಕೊಳ್ಳಬೇಕು; ಎಲ್ಲ ಜೀವಿಗಳನ್ನು ಸಮಭಾವದಿಂದ ನೋಡುವ ಹಾಗು ಪೂಜ್ಯರನ್ನು ಗೌರವಭಾವದಿಂದ ಕಾಣುವ ಪರಿ ನಮದಾಗಬೇಕು;; ಅನ್ಯರಿಗೆ ಹಿತವಾಗುವಂತೆ-ಅದಿಲ್ಲದಿದ್ದರೆ ನೋವಾಗದಂತೆ ನಮ್ಮ ನಡೆ-ನುಡಿಯಿರಬೇಕು; ಹಾಗೂ ರಾಮೇಶ್ವರನ (ಭಗವಂತನ) ಸ್ಮರಣೆ ಸದಾ ಇರಬೇಕೆಂಬ ಕವಿವಾಣಿ ಜೀವನ್ಮುಕ್ತಿಯೆಡೆಗೆನಮ್ಮನ್ನು ಕರೆದೊಯ್ಯುವ ಹಾಯಿದೋಣಿಯೆಂದರೂ ತಪ್ಪಾಗಲಾರದು.
ಪುರಂದರ ದಾಸರು ರಚಿಸಿದ 'ರಾಮ ಮಂತ್ರವ ಜಪಿಸೋ ಹೇ ಮನುಜ...." ಎಂಬ ಧಾಟಿಯಲ್ಲಿಯೇ ಕವಿ ವೆಂಕಣ್ಣನು ಮಧ್ಯಮಾವತಿ ರಾಗದಲ್ಲಿ 'ಶಿವ ಮಂತ್ರವ ಜಪಿಸೋ ಮೂಢ' ಎಂಬ ಸುಂದರ ಕೀತಱನೆಯನ್ನು ಸಹ ರಚಿಸಿದ್ದಾನೆ. ಇದರಲ್ಲಿನ ಕೊನೆಯ ಅನುಪಲ್ಲವಿ ಇಂತಿದೆ:
"...ಕಾಲನು ದೂತರು ಎಳೆಯುವ ಮುನ್ನ
ನಾಲಿಗೆ ತನ್ನಾಧೀನವಾಗಿರುವಾಗ
ಏಳುಕೋಟಿ ಮಂತ್ರಕೆ ಮಣಿಯದ ವಿ-
ಶಾಲ ಕೆಳದಿ ರಾಮೇಶ್ವರನೆ ಗತಿಯೆಂದು||....."
ಸದಾ ಭಗವಂತನ ನಾಮಸ್ಮರಣೆಯೇ ಜೀವನದ ತಾರಕ ಮಂತ್ರವೆಂಬ ನಿತ್ಯಸತ್ಯ ಇದರಲ್ಲಡಗಿದೆ. ಸುಶ್ರಾವ್ಯವಾಗಿ ಹಾಡಲು ಕೂಡ ಈ ಕೀತಱನೆ ಪ್ರಶಸ್ತವಾಗಿದೆ.
ತುಳಸಿ ನಮ್ಮೆಲ್ಲರಿಗೂ ಅತ್ಯಂತ ಪೂಜನೀಯವಾದ ಗಿಡ. ಆಯುವೇಱದದ ರೀತ್ಯಾ ಇದೊಂದು ಸಂಜೀವಿನಿ. ತುಳಸಿ ಮಹಿಮೆ ಸಾರುವ ಕೀತಱನೆಯ ಈ ಅನುಪಲ್ಲವಿಗಳ ಬಗ್ಗೆ ವಿವರಣೆ ಅನಗತ್ಯ:
"...ತುಳಸಿಹ ವ್ಋಕ್ಷಗಳ ದಳದಳಗಳ ಮೇಲೆ
ನೆಲಸಿಹನು ಹರಿಯು ಮುದದಿಂದ
ಮುದದಿ ತುಲಸಿಯ ಪೂಜೆಗಳ
ಮಾಡಬೇಕು ಸುಜನರು ||
ತುಲಸಿಯ ಮೂಲದೆ ನದಿಗಳು
ತುಲಸಿಯ ದಳದೊಳೆ ಶ್ರೀ ಹರಿಯು
ತುಲಸಿಯ ಶಾಖೆಯೊಳೆ ಸುರರೆಲ್ಲಾ
ನೆಲಸಿಹರು ಶ್ರೀ ತುಲಸಿಯ
ಮಹಿಮೆಗೆಣೆಯುಂಟೆ ||
ಲಭ್ಯವಿರವ ಓಲೆಗರಿಗಳಲ್ಲಿ ಹೀಗೆ ಹಲವಾರು ಮನೋಜ್ಞ ರಚನೆಗಳನ್ನು ವೆಂಕಣ್ಣ ಕವಿಯು ಮಾಡಿದ್ದು, ಬಹುಶ: ಸೂಕ್ತ ಪ್ರಚಾರದ ಕೊರೆತೆಯಿಂದ ಹೆಚ್ಚು ಪ್ರಚಲಿತವಾಗಿಲ್ಲವೆಂದು ತೋರುತ್ತದೆ. ಅನೇಕ ಕೀತಱನೆಗಳಿಗೆ ಕವಿಯು ರಾಗವನ್ನು ಸಹ ಸೂಚಿಸಿದ್ದು, ಕವಿಗೆ ಸಂಗೀತದಲ್ಲೂ ಸಾಕಷ್ಟು ಜ್ಞಾನ-ಪರಿಣತಿ ಇತ್ತೆಂಬ ಅಂಶ ಸ್ಪಷ್ಟವಾಗುತ್ತದೆ.

Rating
No votes yet

Comments