ಕೋರಿಕೆ

ಕೋರಿಕೆ

 

 

 

ಚೆನ್ನವಿದು ಮುಖಕಮಲ ಸೋಗಿರದ ಮುಗುದನಿವ

ತನ್ನ ಪೊಂಗೊಳಲುಲಿಯ ತಾನೆ ಸವಿದಿಹನು!

ಇನ್ನಿವನ ಕೆಂದಾವರೆಯ ಪಾದ ನಲಿಯುತಿರ-

ಲೆನ್ನೆದೆಯದವನಲ್ಲೆ ತಲ್ಲೀನವಾಗಿಹುದು!

 

ಸಂಸ್ಕೃತ ಮೂಲ: ಲೀಲಾಶುಕ (ಬಿಲ್ವಮಂಗಳ) ಕೃಷ್ಣಕರ್ಣಾಮೃತ (೧-೧೫)

 

ವ್ಯಾಜಮಂಜುಲಮುಖಾಂಬುಜ ಮುಗ್ಧಭಾವೈಃ
ಆಸ್ವಾದ್ಯಮಾನ ನಿಜವೇಣುವಿನೋದನಾದಮ್
ಆಕ್ರೀಡತಾಮರುಣಪಾದಸರೋರುಹಾಭ್ಯಾಮ್
ಆರ್ದ್ರೇ ಮದೀಯಹೃದಯೇ ಭುವನಾರ್ದ್ರಮೋಜಃ

 

 

 

Rating
No votes yet

Comments

Submitted by venkatb83 Wed, 01/23/2013 - 15:27

ಚಿತ್ರವೂ ಸಖತ್
ಜೊತೆಗೆ ಆ ಬಗೆಗಿನ ಬರಹವೂ...

ತನ್ನ ಪೊಂಗೊಳಲುಲಿಯ ತಾನೆ ಸವಿದಿಹನು! >>.
ಇಲ್ಲಿ ಪೊಂಗೊಳಲುಲಿಯ ಅಂದ್ರೇನು ಅಂತ ಗೊತ್ತಾಗಲಿಲ್ಲ...

ಶುಭವಾಗಲಿ..

\|

Submitted by swara kamath Wed, 01/23/2013 - 16:20

In reply to by venkatb83

ಸಪ್ತಗಿರಿ ಯವರೆ ಸಂಸ್ಕೃತ ಮೂಲಪದ್ಯದಲ್ಲೇ ತಮ್ಮ ಪ್ರಶ್ನೆಗೆ ಉತ್ತರ ಸಿಗುತ್ತದೆ. ತಾವು ಗಮನಿಸಲಿಲ್ಲವೆಂದು ಕಾಣುತ್ತದೆ.ಪೊಂಗೊಳಲುಲಿಯ ಅಂದರೆ ಕೋಳಲಿನಿಂದ ಹೊಮ್ಮಿದ ಗಾನ ಎಂದು ಅರ್ಥಮಾಡಿಕೊಳ್ಳಬಹುದು.ವಂದನೆಗಳು
ಸುಂದರ ಚಿತ್ರ ನೀಡಿದ ಹಂಸಾನಂದಿ ಅವರಿಗೂ ನನ್ನ ವಂದನೆಗಳು.

Submitted by hamsanandi Wed, 01/23/2013 - 22:01

In reply to by swara kamath

ಹೌದು. "ನಿಜವೇಣು" - ಸಂಸ್ಕೃತದಲ್ಲಿ ನಿಜ ಅನ್ನುವುದಕ್ಕೆ ತನ್ನ, ಸ್ವಂತದ ಎಂಬ ಅರ್ಥ. ಕೃಷ್ಣ ತನ್ನ ಕೊಳಲಿನ ನಾದವನ್ನು ತಾನೇ ಸವಿಯುತ್ತಿದ್ದಾನೆಂಬುದು ಭಾವ.

Submitted by ಗಣೇಶ Wed, 01/23/2013 - 23:36

In reply to by swara kamath

ಪಾಪ...ಸಪ್ತಗಿರಿಗೆ ಕನ್ನಡನೇ ಅರ್ಥವಾಗಿಲ್ಲ...ಇನ್ನು ಸಂಸ್ಕೃತ ಮೂಲ ಪದ್ಯ!! :) ಸುಮ್ಮನೆ ಬರೆದದ್ದು ಬೇಸರಿಸಬೇಡಿ :). ---ಇಲ್ಲಿ ಕೊಳಲಿನಿಂದ ಹೊಮ್ಮಿದ ಗಾನ ಅಂದರೆ-ಕೊಳಲುಲಿಯ ಬಗ್ಗೆ ಸಪ್ತಗಿರಿಗೆ ಅರ್ಥ ಗೊತ್ತಿರಲೇಬೇಕು. ಆತ ರಾಜ್ ಅಭಿಮಾನಿ, ಸಿನೆಮಾ ಆತನ ಆಸಕ್ತಿ-"ಕೋಗಿಲೆ ಕೊರಳಿಂದ ಕೊಳಲುಲಿ ಗಾನ...." ಎಷ್ಟು ಸಲ ಹಾಡಿದ್ದಾನೋ ಏನೋ :) ಅವನಿಗೆ ಅರ್ಥವಾಗದ್ದು "ಪೊಂ"ಕೊಳಲ ಮುಂದೆ ಯಾಕೆ ಬಂತು ಎಂದಿರಬಹುದು. ಅದಕ್ಕೆ ನಾನು ಅರ್ಥ ಹೇಳುವ ಬದಲು ಸಂಪದದ ಈ ಲೇಖನ ಓದಲಿ- http://sampada.net/forum/10132 -ಹಂಸಾನಂದಿಯವರೆ ಕವಿತೆ ಚೆನ್ನಾಗಿದೆ.