ಕೋಲಾಹಲ

ಕೋಲಾಹಲ

"ಈ ಹೊಸ ವರ್ಷದ ಬರುವಿಕೆಯನ್ನು ತಂಪು ಪಾನೀಯ ಕುಡಿಯದೆ ಆಚರಿಸಿ"

ಕೋಲಾದಂತಹ ತಂಪು ಪಾನೀಯಗಳನ್ನು ಕುಡಿಯದಿರಲು ಕಾರಣಗಳು-

* ಕಾರ್ಬೋನೇಟೆಡ್ ತಂಪು ಪಾನೀಯಗಳನ್ನು ಊಟದ ನಂತರ ಸೇವಿಸುವುದರಿಂದ ಪಚನಕ್ರಿಯೆಗೆ ಬೇಕಾದ ಉಷ್ಣತೆ ದೊರೆಯದೆ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ.

* ಕಾರ್ಬನ್ ಅನ್ನು ದೇಹ ಯಾವಾಗಲೂ ಹೊರ ಹಾಕುತ್ತಿರುತ್ತದೆ. ಅಂತಹ ಕಾರ್ಬನ್ ಅನ್ನು ಒತ್ತಾಯದಿಂದ ದೇಹಕ್ಕೆ ಸೇರಿಸುವುದು ಆರೋಗ್ಯಕ್ಕೆ ಹಾನಿಕರ.

* ತಂಪುಪಾನೀಯಗಳು ತಂಬಾಕು ಮುಂತಾದ ಮಾದಕ ದ್ರವ್ಯದಂತೆ ಅಪಾಯಕಾರಿಯಾಗಿದೆ.

* ಹೊಸತನದ (=ಆಧುನಿಕ) ಜೀವನಶೈಲಿ ಅಳವಡಿಸಿಕೊಂಡು ಇಂದಿನ ಪೀಳಿಗೆ ನಾನಾ ರೋಗಗಳಿಗೆ ಗುರಿಯಾಗುತ್ತಿದೆ.

* ಈ ಪಾನೀಯಗಳು ಕೀಟನಾಶಕಗಳನ್ನೊಳಗೊಂಡಿರುತ್ತವೆ. ಕೆಲವು ರಾಜ್ಯಗಳಲ್ಲಿ ಒಕ್ಕಲಿಗರು (=ರೈತರು) ಕೀಟನಾಶಕವಾಗಿ ಕೋಲಾಗಳನ್ನು ಬಳಸುತ್ತಿದ್ದಾರೆ.

* ಭಾರತದಂತಹ ದೇಶಗಳಲ್ಲಿ ಕೆಲವು ಕಂಪನಿಗಳು ಬೇಕೆಂದೇ (=ಉದ್ದೇಶಪೂರ್ವಕವಾಗಿ) ಕೀಟನಾಶಕ ಸೇರಿಸುವುದನ್ನು ಅಲ್ಲಗಳೆಯಲಾಗದು.

* ಕೀಟನಾಶಕ ಇರಲಿ ಬಿಡಲಿ, ಕೋಲಾಗಳು ಆರೋಗ್ಯಕ್ಕೆ ಒಳ್ಳೆಯದಲ್ಲ.

* ಪೆಪ್ಸಿಕೊ ಇಂಡಿಯಾದ ಅಧ್ಯಕ್ಷ ರಾಜೀವ್ ಬಕ್ಷಿ ಈ ಕುರಿತು ಹೇಳಿಕೆಯೊಂದನ್ನು ನೀಡಿದ್ದು, ನಿರ್ಧಿಷ್ಟ ವಯೋಮಾನದೊಳಗಿನ ಮಕ್ಕಳಿಗೆ ಕೋಲಾ ಪಾನೀಯದ ಮಾರಾಟವನ್ನು ಕಂಪೆನಿಯು ಹಿಂತೆಗೆಯಲಿದೆ ಎಂದು ತಿಳಿಸಿದ್ದಾರೆ.

* ಬಹುರಾಷ್ಟ್ರೀಯ ಕಂಪನಿಗಳು ತಮ್ಮ ಕಂಪನಿ ನಡೆಸಲು ಹೊಳೆ (=ನದಿ)ಗಳನ್ನು, ಉಳುವ ಜಮೀನುಗಳನ್ನು ಕೊಂಡು ಅವುಗಳನ್ನು ಮಲೀನಗೊಳಿಸುತ್ತಿವೆ. ಫಲವತ್ತಾದ ಭೂಮಿಯನ್ನು ಒಕ್ಕಲಿಗರು ಕಳೆದುಕೊಳ್ಳುತ್ತಿದ್ದಾರೆ.

* ಈ ಕಂಪನಿಗಳನ್ನು ವಿರೋಧಿಸುವವರನ್ನು ಕೊಲ್ಲಲಾಗುತ್ತದೆ. ('ಮುಕ್ತ' ಧಾರಾವಾಹಿ ನೋಡಿದವರಿಗೆ ಗೊತ್ತಿರಬಹುದು. ಇದು ಬರಿಯ ಕಥೆಯಲ್ಲ).

* ಬಹುರಾಷ್ಟ್ರೀಯ ಕಂಪನಿಗಳು ಕೇವಲ 10 ಪೈಸೆ ಬೆಲೆಯ ಸರಕನ್ನು 10 ರೂಪಾಯಿಗೆ ಮಾರಾಟ ಮಾಡುತ್ತವೆ. ಇದರಿಂದ ಕೋಟ್ಯಾಂತರ ರೂಪಾಯಿ ಹಣ ವಿದೇಶಗಳಿಗೆ ಹರಿದು ಹೋಗುತ್ತಿದೆ.

* ಅಮೆರಿಕಾಕ್ಕೆ ಹರಿದು ಹೋಗುವ ಹಣ ಅಲ್ಲಿಂದ ಶಸ್ತ್ರಾಸ್ತ್ರಗಳ ರೂಪದಲ್ಲಿ, ಹಣಕಾಸಿನ ನೆರವಿನ ರೂಪದಲ್ಲಿ ಪಾಕಿಸ್ತಾನಕ್ಕೆ ಹರಿದು ಬರುತ್ತದೆ. ಪಾಕಿಸ್ತಾನಕ್ಕೆ ಬರುವ ಹಣ ಅಲ್ಲಿಂದ ಭಯೋತ್ಪಾದಕರ ಕೈಸೇರುತ್ತದೆ.

ಇತ್ತಿಚಿನ 'ಕೋಲಾಹಲ! 'ಕ್ಕೆ ನಂಟುಳ್ಳ (=ಸಂಬಂಧಿಸಿದ) ವರದಿಗಳ ಸಂಗ್ರಹವನ್ನು ನನ್ನ ಬ್ಲಾಗಿನಲ್ಲಿ ಓದಬಹುದು.

oarjuna.blogspot.com

Rating
No votes yet