ಕ್ರುಶ್ಣಾನೀ ಬ್ಯಾಗನೆ ಬಾರೋ

ಕ್ರುಶ್ಣಾನೀ ಬ್ಯಾಗನೆ ಬಾರೋ

ಕ್ರುಶ್ಣಾನೀ ಬ್ಯಾಗನೆ ಬಾರೋ
ಶ್ರೀ ಡಿ ಎನ್ ಶಂಕರ ಭಟ್ಟರವರು ಹೊಸದಾಗಿ ಕನ್ನಡ ವ್ಯಾಕರಣವನ್ನು ಬರೆದಿದ್ದಾರೆ. ಇದರಲ್ಲಿ ಯಾವ ಮಹಾಪ್ರಾಣಗಳಿಲ್ಲ-ಎಂಬುದು ಇದರ ಹೆಗ್ಗಳಿಕೆ. ಇವರು ಹಾಗೂ ಇವರಿಂದ ಪ್ರಭಾವಿತರಾದವರು, ಕನ್ನಡವು ಸಂಸ್ಕೃತೀ ಕರಣ ಹೊಂದಿದೆ(ಬೃಷ್ಠಗೊಂಡಿದೆ?) ಎಂದು ಇದನ್ನು ಶುದ್ಧೀಕರಿಸವ ಪ್ರಯತ್ನವನ್ನು ಮಾಡುತ್ತಿದ್ದಾರೆ.
ಶ್ರೀ ವೈಭವರವರು ಕೊಟ್ಟ ಮಾಹಿತಿಯಂತೆ  ಭಟ್ಟರು ತಮ್ಮ ಪುಸ್ಥಕದಲ್ಲಿ ಕೃಷ್ಣ ಎಂಬ ಸಂಸ್ಕೃತ ಪದವನ್ನು ಕನ್ನಡದಲ್ಲಿ ಕ್ರುಶ್ಣವೆಂದು ಬರೆದಿದ್ದಕ್ಕೆ ಸಂತಸವನ್ನು ವ್ಯಕ್ತಪಡಿಸಿದ್ದಾರೆ.

ಈ ಪಂಥದ ವಾದವನ್ನು ಒಪ್ಪಿ ನಾವು ಹೇಗೆ ಉಚ್ಚರಿಸುತ್ತೇವೆಯೋ ಅದನ್ನು ಹಾಗೆಯೇ ಬರವಣಿಗೆಗೆ ತಂದರೆ ಹೇಗಾಗಬಹುದೆಂಬುದಕ್ಕೆ ಕ್ರುಶ್ಣಾನೀ ಬ್ಯಾಗನೆ ಬಾರೋ ಎಂಬುದೊಂದು ಉದಾಹರಣೆ. ತಮತಮಗೆ ಇಷ್ಟಬಂದಂತೆ ಬೇರೆಬೇರೆ ಪ್ರದೇಶದವರು ಜಾತಿ ಜನಾಂಗದವರು ಬೇರೆ ಬೇರೆಯ ರೀತಿಯಲ್ಲಿ ಬರೆದರೆ ಅದು ಹೀಗಿರಬಹುದೇ? ;-
*ಕ್ರುಶ್ಣಾ ನೀ ಬೆಗ್ನೆ ಬಾರೋ * ಕುಶ್ಣಾ ನೀ ಬೇಗ್ಬಾರೋ * ಕ್ರಿಸ್ನಾ ನೀ ಬೇಗನೆ ಬಾರೋ * ಕ್ರಿಸ್ಣಾ ನೀ ಬೇಗಣೆ ಬಾರಲಾ. *ಕುಟ್ಣಾ ನೀ ಬೆಗ್ನೆಬಾರೋ  *ಕಿಟ್ಟಾನೀ ಬೇಗನೆ ಬಾರೋ * ಕಿಟ್ಟೀ ನೀ ಬೇಗನೆ ಬಾರೋ ಇತ್ಯಾದಿ ಇತ್ಯಾದಿ.
ಬೇಗನೆ ಎನ್ನುವ ಪದದ ಬದಲು ಬೇರೆ ಬೇರೆ ಪದವನ್ನು ಬಳಸುವವರು ಹೀಗೂ ಬರೆಯಬಹುದು;-  *ಕ್ರಿಶ್ಣಾ  ನೀ ದೌಡು ಬಾರೋ * ಕ್ರಿಶ್ಣಾ ನೀ ದೌಡ್ಬಾರೋ * ಕ್ರಿಶ್ನಾ ನಿ ಲಗೂನೆ ಬಾರೋ * ಕ್ರಿಶ್ಣಾ ನೀ ಜಲ್ದಿ ಬಾರೋ * ಕ್ರಿಶ್ಣಾ ನೀ ಲೌಕರ್ ಬಾರೋ *ಕ್ರೀಶ್ಣಾ ನೀ ಶೀಘ್ರ ಬಾರೋ * ಕ್ರಿಶ್ಣಾ ನೀ ಗಡಾನೆ ಬಾರೋ (ಕ್ರಿಶ್ಣಾ ನೀ ಅರ್ಜಂಟ್ ಬಾರೋ  *ಕ್ರಿಶ್ಣಾ ನೀ ಅರ್ಜಂಟಾಗಿ ಬಾರೋ  *ಕ್ರಿಶ್ಣಾ ನೀ ಕ್ವಿಕ್ಕಾಗಿ ಬಾರೋ?)

ಇದರಲ್ಲಿ ಕೆಲವು ಪದಗಳು ಕನ್ನಡ ಅಲ್ಲದಿರಬಹುದು ಆದರೆ ಇದೆಲ್ಲವೂ ಬೇರೆ ಬೇರೆ ಪ್ರದೇಶದ ಕನ್ನಡಿಗರು ತಮ್ಮ ಮನೆಮಾತಿನಲ್ಲಿ ಅಳವಡಿಸಿಕೊಂಡ ನಿತ್ಯ ಉಪಯೋಗಿಸುವ ಶಬ್ಧವೇ ಆಗಿರುತ್ತದೆ. ಹೀಗಾಗಿ ಇವರೆಲ್ಲಾ  ಸ್ರೀ ಬಟ್ಟರ  ಪಂತದವರನ್ನು ಸ್ವಾಗತಿಸುತ್ತಾರೆ ಎಂದು ನಾನು ಭಾವಿಸುತ್ತೇನೆ.

ಆದರೆ ನನಗೆ ವಿಚಿತ್ರವೆನ್ನಿಸಿದ್ದೇನೆಂದರೆ ಈ ಪಂಥವನ್ನು ಬಲವಾಗಿ ಸಮರ್ಥಿಸಿಕೊಳ್ಳುವ ಮಹೇಶರು ಕ್ರುಶ್ಣನ ಬಗ್ಗೆ ಅಪಸ್ವರ ಎತ್ತಿದ್ದು ಆಶ್ಚರ್ಯವನ್ನುಂಟು ಮಾಡಿದೆ. ಕೃಷ್ಣ ನನ್ನು ಕ್ರಿಶ್ಣ ಎಂದು ಬರೆಯ ಬೇಕಾಗಿತ್ತೆಂಬುದು ಅವರ ಅಂಬೋಣ. ಅಥವಾ ಕಿಣ್ಣ /ಕಣ್ಣ ಆಗಬೇಕಿತ್ತೆಂದು ವ್ಯಾಕರಣ ಸೂತ್ರ ಹೇಳುತ್ತಾರೆ. ಆಡುಭಾಷೆಗೂ ವ್ಯಾಕರಣವೇ? ವ್ಯಾಕರಣ ಏನಿದ್ದರೂ ಷಿಷ್ಟ ಭಾಷೆಗೆ ಅಲ್ಲವೇ? ಇವರು ಹೇಳಿದಂತೆ ಕಿಣ್ಣ /ಕಣ್ಣವನ್ನು ಉಪಯೋಗಿಸುವ ಕನ್ನಡಿಗರಾರೂ ನನಗೆ ಇದುವರೆಗೆ ಸಿಕ್ಕಿಲ್ಲ. ಆದರೆ ತಮಿಳರು ಕಣ್ಣ ಅನ್ನುವುದನ್ನು ಕೇಳಿಬಲ್ಲೆನು. ಜೊತೆಗೆ ನಾನು ಮೇಲೆ ಹೇಳಿದ ಎಲ್ಲಾ ಶಬ್ಧವನ್ನು ಉಪಯೋಗಿಸುವ ಕನ್ನಡ ಜನರನ್ನು ನಾನು ಬಲ್ಲೆನು.

ಕನ್ನಡಕ್ಕೆ ಹೊಸ ವ್ಯಾಕರಣ  ತಂದು ಕನ್ನಡವನ್ನು ಆಂಡೈಯನ ಕಾಲಕ್ಕೆ ಒಯ್ದು ನಮ್ಮ ಮಕ್ಕಳು ಇಂಗ್ಲೀಷಿಗೇ  ಗಟ್ಟಿಯಾಗುತ್ತ  ಹೋಗುವಂತಾಗಬೇಕೇ?  ಅಥವಾ ಅವರಿಗೂ ಕನ್ನಡವನ್ನು ಓದಲು ಅವಕಾಶವನ್ನು ಮಾಡಿ ಕೊಡಬೇಕೇ?  ಭಟ್ಟರು ಹಾಗೂ ಅವರ ಅಭಿಮಾನಿಗಳು ತಮ್ಮನ್ನು ಮರುವಿಮರ್ಷೆ ಮಾಡಿಕೊಳ್ಳುವುದು ಕನ್ನಡ ಹಾಗೂ ಕನ್ನಡಿಗರ ಹಿತರಕ್ಷಣೆಗೆ ತುಂಬಾ ಸಹಕಾರಿಯಾದದ್ದೆಂದು ಭಾವಿಸುವವರಲ್ಲಿ ನಾನು ಒಬ್ಬ. ಆಡುಮಾತಿನಲ್ಲಿ ಕನ್ನಡ ಜನತೆಗೆ ಇಷ್ಟವಾದಂತಿರಲಿ ಆದರೆ ಬರವಣಿಗೆಯಲ್ಲಿ ಬದಲಾವಣೆ ಸಲ್ಲ. ಇಂದಿನ ದಿನದಲ್ಲಿ ಪ್ರಜಾವಾಣಿ, ಕನ್ನಡಪ್ರಭ, ಸಂಯುಕ್ತಕರ್ನಾಟಕ ವಿಜಯಕರ್ನಾಟಕ  ಇತ್ಯಾದಿಗಳು ಯಾವ ಬಗೆಯ ಕನ್ನಡವನ್ನು ಲೇಖನದಲ್ಲಿ  ಬಳಸುತ್ತವೆಯೋ ಅವು ಮಾತ್ರ ಮುಂದುವರೆಯಬೇಕು, ಅದರಲ್ಲಿ ಮಾಡುವ ಬದಲಾವಣೆಗಳು ಕನ್ನಡವನ್ನು ಉಳಿಸುವುದಿಲ್ಲ. ಬದಲಿಗೆ ಪತ್ರಿಕೆಗಳೆಲ್ಲಾ, ನಮಗೆಲ್ಲ ಗೊತ್ತಿರುವ ನಿನ್ನೆ / ನೆನ್ನೆ ಗಳಿಗೆ ಬದಲಾಗೆ ಮಹೇಶರು ನೆಂನೆ ಎಂದು ಉಪಯೋಗಿಸಿದಂತೆ  ತಮಗಿಷ್ಠ ಬಂದಹಾಗೆ ಬರೆಯಲು ಪ್ರಾರಂಭಿಸಿದಲ್ಲಿ  ಕನ್ನಡ .......,,,,,,,,,,,,,,,,,,,,,,,

Rating
No votes yet

Comments