ಕ್ವೀರ್

ಕ್ವೀರ್

ಹಾಗೆಂದರೆ ಏನಪ್ಪಾ , ನಮ್ಮಲ್ಲಿ ಕ್ವೀರ್ ಅಂದರೆ ಹೊಸತು,ಸಾಮನ್ಯದ್ದಲ್ಲದ್ದೊಂದು, ವಿಚಿತ್ರ, ಎನ್ನುವ ಭಾವನೆ ಉಂಟಾಗುತ್ತದೆ ಅಲ್ಲವೇ?
ಅಮೆರಿಕಾದಲ್ಲಿ ಹಾಗಲ್ಲ ಲಿಂಗ ಭಂಗಿಗಳಿಗೆ ಕ್ವೀರ್ ಅನ್ನುತ್ತಾರೆ, ಯಾರೆಂದುಕೊಳ್ಳುವುದೇನು ಅವರೇ ಹಾಗೆ ತಮ್ಮನ್ನು ತಾವೇ ಕರೆದುಕೊಳ್ಳುತ್ತಾರೆ!
ನನಗೆ ಇವರನ್ನು ಕಂಡರೆ ಅಸಾಧ್ಯ ಕುತೂಹಲ, ನಮ್ಮ ಭಾರತದಲ್ಲಿ ಕ್ವೀರ್ಗಳಿಲ್ಲ ಡ್ರ್ಯಾಗ್ ಕ್ವೀನ್ ಗಳಿದ್ದಾರೆ ಇವರನ್ನು ನಾವು ಸಾಧಾರಣವಾಗಿ ಹಿಜಡಾ ಎಂದು ಕರೆಯುತ್ತೇವೆ, ನಾವು ನಮ್ಮ ಸಮಾಜ ಇವರನ್ನು ನೋಡುತ್ತಿರುವುದೇ ಒಂದು ರೀತಿ, ಇವರು ನಮ್ಮ ಸಮಾಜದ ಒಂದು ಅಂಗವಾಗಿ, ಎಲ್ಲಿ ಹಬ್ಬ, ಹುಟ್ಟು,ಮದುವೆಗಳಿದ್ದರೂ ಬಂದು ಹಾಜರ್ ಆಗಿ, ಗಂಡಸರ ಮೈಮೇಲೆ ಬೀಳುತ್ತಾ ಬೈಸಿಕೊಳ್ಳುತ್ತ, ಕೆಟ್ಟದಾಗಿ ಡ್ರೆಸ್ ಮಾಡಿಕೊಂಡು ಅತ್ತ ಹೆಣ್ಣೂ ಅಲ್ಲದೆ ಇತ್ತ ಗಂಡೂ ಅಲ್ಲದೆ ಒದ್ದಾಡುವ ಈ ಹಿಜಡಾ ಗಳದ್ದು ಗೋಳಿನ ಕಥೆ, ಭಾರತದಲ್ಲಿ ಮಗು ಹುಟ್ಟಿದಾಗಲೇ ಲಿಂಗ ನಿರ್ಣಯವಾಗಿ ಹೀಗೆ ಕ್ವೀರ್ ಆಗಿ ಹುಟ್ಟುವ ಮಕ್ಕಳನ್ನು ಹಿಜಡಾ ಗಳಿಗೇ ದಾನ ಮಾಡುವರೆಂದು ಕೇಳಿದ್ದೇನೆ ...ಮುಂಬೈನಲ್ಲಿ ಇವರ ದೊಡ್ಡ ಗುಂಪೇ ಇದೇ, ಸಾಮಾನ್ಯವಾಗಿ ಇವರು ವೈಶ್ಯೆಗಳಾಗಿಯೇ ವೃತ್ತಿನಿರತರಾಗಿರುತ್ತರೆಂದು ಎಲ್ಲರೂ ತಿಳಿದಿರುವ ವಿಶಯವೇ...ಅಮೆರಿಕಾದಲ್ಲಿ ಕೂಡ ಕ್ವೀರ್ಗಳು ಅಂದರೆ ಸಲಿಂಗ ಕಾಮಿಗಳು ಇದ್ದಾರೆ , ಆದರೂ michigun ಒಂದೇ ಕಾನೂನು ಪ್ರಕಾರವಾಗಿ ಇವರ ಸ್ವಯಂವರಗಳನ್ನು ಊರ್ಜಿತ ಗೊಳಿಸುತ್ತೆ, ಉಳಿದ ರಾಜ್ಯಗಳೆಲ್ಲ ಕ್ವೀರ್ ಬಗ್ಗೆ ಅಸಡ್ಡೆ ಇಟ್ಟುಕೊಂಡ ಕ್ಯಾಥೊಲಿಕ್ ಪ್ರಧಾನ ಸರಕಾರಗಳು .
ಸಲಿಂಗ ಕಾಮ ದೇವರ ದ್ರಿಷ್ಟಿಯಲ್ಲಿ ತಪ್ಪು ಎಂದು ಎಲ್ಲರ ಭಾವನೆ ಇವರ ಬಗ್ಗೆ ಒಂದು ರೀತಿಯ ತಿರಸ್ಕಾರ,ಅಸಹ್ಯ ಎಲ್ಲವನ್ನೂ ಅಮೇರಿಕಾದ ಪ್ರೋಗ್ರೆಸ್ಸಿವ್ ಸೊಸೈಟಿ ಕೂಡ ಒಳಗೊಳಗೇ ಅನುಸರಿಸುತ್ತಿದೆ, ರೇಸಿಸಮ್ ಹೇಗೆ ಇಲ್ಲ ಎಂದು ಕೊಂಡೇ ಎಲ್ಲಾಕಡೆ ನಾಯಿಕೊಡೆಯಂತೆ ತುಂಬಿಕೊಂಡಿದೆಯೋ ಹಾಗೆ, ಆದರೂ ಇಲ್ಲಿ ಎಲ್ಲ ಬಹಳ ಸೂಕ್ಷ್ಮ, ಗೊತ್ತಿದ್ದೂ ಗೊತ್ತಿಲ್ಲದಂತಿರುವ ಸಮಾಜ .
ಕ್ವೀರ್ ಗಳು ಕ್ವೀರ್ಗಳೇಕಾದರು ಅನ್ನುವುದು ನನ್ನ ಸಮಸ್ಯೆ, ಇಂದು ಗೇಯ್ ಪರೇಡ್ ಗಳನ್ನೂ ನಡೆಸುವ ಕ್ವೀರ್ಗಳು ಸಂತಸದಿಂದ ತಮ್ಮ ವೈಚಿತ್ರ್ಯವನ್ನು ಸಂಭ್ರಮದಿಂದ ಆಚರಿಸುತ್ತಾರೆ ..ನ್ಯೂಯಾರ್ಕ್ನ ಬೀದಿಗಳಲ್ಲಿ ಚಿತ್ರ ವಿಚಿತ್ರ ಬಟ್ಟೆಗಳನ್ನು ತೊಟ್ಟು ಬಹುತೇಕ ತಮ್ಮ ಲೈಂಗಿಕತೆಯ ಬಗ್ಗೆ ಅತಿರೇಕ ಪ್ರದರ್ಶನ ಮಾಡುತ್ತಾರೆ
ಹೀಗೇಕೆ? ನೀವು ನಮ್ಮ ಹಾಗಿಲ್ಲ ಸರಿ, ನೀವು ನಿಮ್ಮ ಹಾಗುಇಲ್ಲವಲ್ಲ?
ಲಿಂಗ ದಲ್ಲಿ ಹೆಣ್ಣು ಗಂಡು ಎರಡೇ ಇರಬೇಕು ಅನ್ನುವುದೇಕೆ? ಇನ್ನೂ ತರಾವರಿ ತಳಿಗಳಿರಬಹುದಲ್ಲವೇ ?
ಬರಿ ಗಂಡು ಹೆಣ್ಣು ಅನ್ನುವುದೇ ನಾರ್ಮಲ್ ಎಂದು ನಿಮಗ್ಯಾರು ಹೇಳಿರಬಹುದು? ಕ್ವೀರ್ ಗಳು ಕ್ವೀರ್ ಗಳೆಂದು ನಾಮಕರಣ ವಾಗಿದ್ದು ಹೇಗೆ?
ಎಂತೆಲ್ಲ ಯೋಚಿಸುವಂತಾಗುತ್ತದೆ, ಈ ಕ್ವೀರ್ಗಳು ತಮ್ಮನ್ನು ತಾವೇ ಕ್ವೀರ್ಗಳೆಂದು ಸಂಕಟ ಪಟ್ಟುಕೊಳ್ಳುವುದೇಕೆ ಬೇರೆಲ್ಲರ ರೀತಿ ಶರ್ಟ್ ಪ್ಯಾಂಟ್ ಅಥವಾ ಶರ್ಟಿನ ಮೇಲೆ ಲಂಗವೋ ಹಾಕಿ ಕೊಂಡು ಒಂದು ಕೆಲಸ ಹಿಡಿದು, ಇಷ್ಟಬಂದ ಹುಡುಗನೋ ಹುಡುಗಿಯ ಜೊತೆಗೋ ನಾರ್ಮಲ್ ಆಗಿ ಸದ್ದಿಲ್ಲದೆ ಜೀವನವೇಕೆ ಮಾಡುವುದಿಲ್ಲ, ತಮ್ಮದೇ ಗುಂಪು ಕಟ್ಟಿಕೊಂಡು ಮತ್ತಷ್ಟು ವಿಚಿತ್ರವಾಗಿ ನಮ್ಮನ್ನೆಲ್ಲ ಹೆದರಿಸುವುದೇಕೆ ?
ಹಾಗಾದರೆ ಇದು ಸಮಾಜದ ತಪ್ಪಲ್ಲ, ನಿಮ್ಮದೇ ತಪ್ಪು, ನಿಮ್ಮನ್ನು ನೀವೇ ನಾರ್ಮಲ್ ಆಗಿ ನೋಡಿಕೊಳ್ಳದಿದ್ದರೆ ನಮ್ಮದೇನು ತಪ್ಪು ಸ್ವಾಮಿ?
ಕ್ವೀರ್ ಗಳೇ ನಿಮ್ಮನ್ನ ನೀವು ಕ್ವೀರ್ಗಳೆಂದು ಕರೆದು ಕೊಳ್ಳದೆ ಸುಮ್ಮನೆ ತೆಪ್ಪಗೆ ನಮ್ಮಂತೆ ಜೀವಿಸಿ...ನಿಮ್ಮನ್ನು ಯಾರೂ ಏನೂ ಅನ್ನುವುದಿಲ್ಲ
ಮುಂದಿನ ಜನಾಂಗದಲ್ಲೇ ನೀವೊಬ್ಬರೇ ಕ್ವೀರ್ಗಳಂತೂ ಇರಲಿಕ್ಕಿಲ್ಲ , ಇನ್ನೆಷ್ಟು ತಳಿಯ ಕ್ವೀರ್ಗಳು ಹುಟ್ಟ ಬಹುದೋ ತಿಳಿದಿಲ್ಲ , ಮುಂದೆ ಗಂಡು ಹೆಣ್ಣು ಎನ್ನುವ ಎರಡೇ ತಳಿಯಲ್ಲದೆ ಗಂಡ್-ಹೆಣ್ಣು ಎನ್ನುವ ತಳಿಯೂ ಪ್ರಸಿದ್ಧಿ ಯಾಗ ಬಹುದು , ಅಥವಾ ಗಂಡು ಹೆಣ್ಣೇ ಕ್ವೀರ್ಗಳಾಗಬಹುದು ಯಾರಿಗೆ ಗೊತ್ತು ಸ್ವಾಮಿ...

Rating
No votes yet