ಗಂಡಂದಿರ ಪರಿಸ್ಥಿತಿ

ಗಂಡಂದಿರ ಪರಿಸ್ಥಿತಿ

 


ಮಿಂಚಂಚೆಯಲ್ಲಿ ಬಂದದ್ದು..

ಗಂಡ : ಇವತ್ತು ಊಟಕ್ಕೆ ಏನು ಮಾಡ್ತಿದ್ಯ?

ಹೆಂಡತಿ : ನಿಮಗೆ ಏನು ಬೇಕೋ ಅದೇ ಮಾಡ್ತೀನಿ

ಗ : ಅನ್ನ ಸಾಂಬಾರ್ ಮಾಡು

ಹೆ: ನೆನ್ನೆ ತಾನೇ ಮಾಡಿದ್ದೆ.

ಗ: ಚಪಾತಿ ಸಾಗು ಮಾಡು

ಹೆ: ಮಕ್ಕಳು ತಿನ್ನಲ್ಲ..

ಗ: ಪೂರಿ ಬಟಾಣಿ ಪಲ್ಯ ಮಾಡು

ಹೆ: ಅಯ್ಯೋ ನನಗೆ ಜಾಸ್ತಿ ಆಗತ್ತೆ ಅದು

ಗ: ಮೊಟ್ಟೆ ಬುರ್ಜಿ ಮಾಡು

ಹೆ: ಇಂದು ಗುರುವಾರ ಮೊಟ್ಟೆ ಮಾಡಲ್ಲ.

ಗ: ಪರೋಟ ಮಾಡು

ಹೆ: ರಾತ್ರಿ ಹೊತ್ತು ಯಾರಾದ್ರೂ ಪರೋಟ ತಿಂತಾರ?

ಗ: ಹೋಗ್ಲಿ ಹೋಟೆಲ್ ಇಂದ ಏನಾದ್ರೂ ತರೋಣ

ಹೆ: ಹೋಟೆಲ್ ತಿಂಡಿ ತಿಂದು ಯಾಕೆ ಹೊಟ್ಟೆ ಕೆಡಿಸ್ಕೋಬೇಕು

ಗ: ಬರೀ ಅನ್ನ ಮಾಡು

ಹೆ: ಅದಕ್ಕೆ ಸಾರು ಇಲ್ವಲ್ಲ..

ಗ: ಇಡ್ಲಿ ಸಾಂಬಾರ್?

ಹೆ: ಅದಕ್ಕೆ ತುಂಬಾ ಸಮಯ ಬೇಕು, ಮುಂಚೆ ಹೇಳಿದ್ರೆ ಮಾಡ್ತಿದ್ದೆ.

ಗ: ಮ್ಯಾಗಿ ಮಾಡು ಹೋಗ್ಲಿ

ಹೆ: ಅದೇನು ಹೊಟ್ಟೆ ತುಂಬತ್ತ?

ಗ: ಹೋಗ್ಲಿ ಏನೋ ಒಂದು ಮಾಡು

ಹೆ: ನೀವೇನು ತಿನ್ತೀರೋ ಹೇಳಿ ಅದೇ ಮಾಡ್ತೀನಿ. 
Rating
No votes yet

Comments