ಗುರುವಿಗೆ ನಮ್ಮ ನಮನ
-:ಗುರುವಿಗೆ ನಮ್ಮ ನಮನ :-
ತಂದೆ, ತಾಯಿ ಕೊಟ್ಟರು ಈ ಜನ್ಮ ನಮಗೆ ,
ಗುರುವೇ ಕೈ ಹಿಡಿದು ತಿದ್ದಿ ತೀಡಿ ಕಲಸಿದಿರಿ ವಿದ್ಯೆೆ ನಮಗೆ,
ಎಂದೊ ಮರೆಯಲಾಗದ ಆ ವಿದ್ಯೆ
ಅಂದು ನಾನು ಕಲಿಯಲಾಗಲಿಲ್ಲ ಪೂರ್ತಿ ವಿದ್ಯೆ,
ಇಂದು ಮರುಗುತಿದೆ ಜೀವ ಆ ಸಮಯದ ಬಗ್ಗ ,
ಕಲಿಯಬೇಕಿತ್ತು ಇನ್ನೊ ಆ ವಿದ್ಯೆ,
ಕಳೆದು ಹೋಯಿತು ಆ ಸಮಯ ಪ್ರಜ್ಜೆ ,
ಗುರುಗಳೇ ಅರಿಯಿಲಿಲ್ಲ ನಿಮ್ಮ ಜ್ಞಾನ ಸಾಗರ,
ಎಲ್ಲೋ ಹುಡುಕಿದೆ ಇಲ್ಲದ ಜ್ಞಾನದಾಗರ,
ಕೈಹಿಡಿದು ಸರಿ ದಾರಿ ತೋರಿದ ಗುರುವೆ ,
ಸರಿ-ತಪ್ಪು ಸತ್ಯದ ದಾರಿ ತೊರಿದವರು ನೀವೇ ,
ಈ ಬದುಕಿಗೆ ಅರ್ಥ ಕೊಟ್ಟವರು ನೀವೇ ,
ಜೀವನ ಪಥಕ್ಕೆ ಮಾರ್ಗದರ್ಶಕರು ನೀವೇ ,
ನಿಮ್ಮಿಂದ ಸಾರ್ಥಕವಾಯಿತು,ಇಂದು ನಮ್ಮ ಜೀವನ ,
ಸದಾ ಇರಲಿ ಗುರುವೆ ನಿಮ್ಮ ಚರಣಕ್ಕೆ, ನಮ್ಮನಮನ,
ಇದುವೇ ನನ್ನ ಮೊದಲ ಪ್ರಯತ್ನದ ಕವನ,
ಈ ಮೂಲಕ ಅರ್ಪಿಸುವೆ ಗುರುಗಳೇ, ನಿಮಗೆ ನನ್ನ ನಮನ.
Rating
Comments
ಉ: ಗುರುವಿಗೆ ನಮ್ಮ ನಮನ
ರವೀಂದ್ರ ಎನ್ ಅಂಗಡಿ ಯವರಿಗೆ ವಂಧನೆಗಳು
' ಗುರುವಿಗೆ ನಮ್ಮ ನಮನ ' ಅನೇಕ ಅರ್ಥಗಳನ್ನು ತಿಳಿಸುವ ಸೂಕ್ಷ್ಮ ಒಳನೋಟಗಳನ್ನು ಹೊಂದಿರುವ ಕವನ, ನಿಮ್ಮೊಳಗೊಂದು ಸುಸಂಸ್ಕೃತ ಕವಿ ಮನವಿದೆ, ತಮ್ಮ ಬರವಣಿಗೆಗಳ ನಿರೀಕ್ಷೆಯಲ್ಲಿ ಸಂಪದಿಗರು, ಧನ್ಯವಾದಗಳು.
In reply to ಉ: ಗುರುವಿಗೆ ನಮ್ಮ ನಮನ by H A Patil
ಉ: ಗುರುವಿಗೆ ನಮ್ಮ ನಮನ
ನಿಮ್ಮ ೀ ಪ್ರೋತ್ಸಾಹವೆ ನನ್ನಗೆ ಸ್ಪೂರ್ತ, ಧನ್ಯವಾದಗಳು.
ಉ: ಗುರುವಿಗೆ ನಮ್ಮ ನಮನ
ರವೀಂದ್ರ ಅಂಗಡಿಯವರಿಗೆ;,
ನಿಮ್ಮ ಕವನವು ತುಂಬಾ ಚೆನ್ನಾಗಿದೆ,