ಗುರುವಿಗೆ ನಮ್ಮ ನಮನ

ಗುರುವಿಗೆ ನಮ್ಮ ನಮನ

                          -:ಗುರುವಿಗೆ ನಮ್ಮ ನಮನ :-

ತಂದೆ, ತಾಯಿ ಕೊಟ್ಟರು ಈ ಜನ್ಮ ನಮಗೆ ,

ಗುರುವೇ ಕೈ ಹಿಡಿದು ತಿದ್ದಿ ತೀಡಿ ಕಲಸಿದಿರಿ ವಿದ್ಯೆೆ ನಮಗೆ,

ಎಂದೊ ಮರೆಯಲಾಗದ  ಆ ವಿದ್ಯೆ

ಅಂದು ನಾನು ಕಲಿಯಲಾಗಲಿಲ್ಲ ಪೂರ್ತಿ ವಿದ್ಯೆ,

ಇಂದು ಮರುಗುತಿದೆ ಜೀವ  ಆ ಸಮಯದ  ಬಗ್ಗ ,

ಕಲಿಯಬೇಕಿತ್ತು ಇನ್ನೊ ಆ ವಿದ್ಯೆ,

ಕಳೆದು ಹೋಯಿತು ಆ ಸಮಯ ಪ್ರಜ್ಜೆ ,

ಗುರುಗಳೇ ಅರಿಯಿಲಿಲ್ಲ ನಿಮ್ಮ ಜ್ಞಾನ ಸಾಗರ,

ಎಲ್ಲೋ ಹುಡುಕಿದೆ ಇಲ್ಲದ ಜ್ಞಾನದಾಗರ,  

ಕೈಹಿಡಿದು ಸರಿ ದಾರಿ ತೋರಿದ ಗುರುವೆ ,

ಸರಿ-ತಪ್ಪು ಸತ್ಯದ ದಾರಿ ತೊರಿದವರು ನೀವೇ ,

 ಈ ಬದುಕಿಗೆ ಅರ್ಥ ಕೊಟ್ಟವರು ನೀವೇ ,

ಜೀವನ ಪಥಕ್ಕೆ ಮಾರ್ಗದರ್ಶಕರು ನೀವೇ ,

ನಿಮ್ಮಿಂದ ಸಾರ್ಥಕವಾಯಿತು,ಇಂದು ನಮ್ಮ ಜೀವನ ,

ಸದಾ ಇರಲಿ ಗುರುವೆ ನಿಮ್ಮ ಚರಣಕ್ಕೆ, ನಮ್ಮನಮನ,

ಇದುವೇ ನನ್ನ ಮೊದಲ ಪ್ರಯತ್ನದ ಕವನ,

ಈ ಮೂಲಕ  ಅರ್ಪಿಸುವೆ ಗುರುಗಳೇ, ನಿಮಗೆ ನನ್ನ ನಮನ. 

 

 

Rating
No votes yet

Comments

Submitted by H A Patil Tue, 11/26/2013 - 17:02

ರವೀಂದ್ರ ಎನ್ ಅಂಗಡಿ ಯವರಿಗೆ ವಂಧನೆಗಳು
' ಗುರುವಿಗೆ ನಮ್ಮ ನಮನ ' ಅನೇಕ ಅರ್ಥಗಳನ್ನು ತಿಳಿಸುವ ಸೂಕ್ಷ್ಮ ಒಳನೋಟಗಳನ್ನು ಹೊಂದಿರುವ ಕವನ, ನಿಮ್ಮೊಳಗೊಂದು ಸುಸಂಸ್ಕೃತ ಕವಿ ಮನವಿದೆ, ತಮ್ಮ ಬರವಣಿಗೆಗಳ ನಿರೀಕ್ಷೆಯಲ್ಲಿ ಸಂಪದಿಗರು, ಧನ್ಯವಾದಗಳು.