ಗೊತ್ತಿದ್ದರೂ ಕೇಳುವ ಹತ್ತು ಮಳ್ಳ ಪ್ರಶ್ನೆಗಳು
(ಮಿಂಚಂಚೆಯಲ್ಲಿ ಬಂದದ್ದು)
೧) ಸಿನಿಮಾ ತೇಟರ್-ನಲ್ಲಿ: ಗೆಳೆಯರು ಸಿಕ್ಕಾಗ,
ಮಳ್ಳತನದಿಂದ ಕೇಳೋದು : ಏನ್ ಗುರು, ಇಲ್ಲಿ?
ಉತ್ತರ : ಬ್ಲಾಕ್ ನಲ್ಲಿ ಟಿಕೆಟ್ ಮಾರ್ತಿದಿನಮ್ಮ, ಗೊತ್ತಿಲ್ವ?
೨) ಬಸ್-ನಲ್ಲಿ ಹೈ-ಹೀಲ್ಡ್ ಚಪ್ಪಲಿ ಮೆಟ್ಟಿಕೊಂಡ ಆಂಟಿ, ಕಾಲು ತುಳಿದಾಗ,
ಮಳ್ಳತನದಿಂದ ಕೇಳೋದು : ಸಾರಿ, ನೋವಾಯ್ತಾ?
ಉತ್ತರ : ಇಲ್ವಲ್ಲ.., ಇವತ್ತು ಅಸಸ್ತೇಸಿಯ ತುಗೊಂಡಿದಿನಿ, ಇನ್ನೊಂದ್ ಸಲ ತುಳಿದು ಟ್ರೈ ಮಾಡಿ...
೩) ಪರಿಚಯದವರು ತೀರಿಕೊಂಡಾಗ, ಕಣ್ಣು ತುಂಬಿಕೊಂಡ ಹತ್ತಿರದವರೊಬ್ಬರು,
ಮಳ್ಳತನದ ಕೇಳೋದು : ಪ್ರಪಂಚದಲ್ಲಿ ಇಸ್ಟೊಂದ್ ಜನರಲ್ಲಿ, ಯಾಕೆ ಇವರಿಗೇ ಹಿಂಗಾಗಬೇಕು?
ಉತ್ತರ : ಯಾಕೆ? ನಿಮಗಾಗಬೇಕಿತ್ತಾ?
೪) ಹೊಟೇಲ್ ನಲ್ಲಿ, ವೇಟರ್ ನನ್ನು,
ಮಳ್ಳತನದಿಂದ ಕೇಳೋದು : ಬಟರ್ ಪನೀರ್ ಮಸಾಲಾ ಚೆನ್ನಾಗಿದೆಯ?
ಉತ್ತರ : ಇಲ್ಲ, ತುಂಬಾ ಕೆಟ್ಟದಾಗಿದೆ, ಅದನ್ನು ಕೆಟ್ಟು ಹೋದ, ಸಿಮೆಂಟ್ ಹಾಕಿ ಮಾಡಿದ್ದೇವೆ.
೫) ನೆಂಟರಿಸ್ಟರು ಸೇರಿರುವಾಗ,
ಮಳ್ಳತನದಿಂದ ಕೇಳೋದು : ಪುಟ್ಟ, ತುಂಬಾ ದೊಡ್ಡವನಾಗಿದ್ದೀಯಾ!!?
ಉತ್ತರ : ತಾವೇನು ಕುಗ್ಗಿ ಚಿಕ್ಕವರಾಗಿಲ್ವಲ್ಲ.
೬) ಗೆಳತಿಯೊಬ್ಬಳು ಮದುವೆ ಆಗುತ್ತಿರುವದನ್ನು ಹೇಳಿದಾಗ,
ಮಳ್ಳತನದಿಂದ ಕೇಳೋದು : ಹುಡುಗ ಚೆನ್ನಾಗಿದಾನ?
ಉತ್ತರ : ಇಲ್ಲ, ಅಂವ ಕುಡುಕ, ಹೆಂತೀನ ಹೊಡಿಯೋನಂತೆ, ರೌಡಿ.. ದುಡ್ಡಿದೆ ಅಂತ ಆಗ್ತಿರೋದು..
೭) ಸರಿ ರಾತ್ರಿ ಫೋನ್ ಮಾಡಿ, ನಿದ್ದೆ ಕೆಡಿಸಿದಾಗ,
ಮಳ್ಳತನದಿಂದ ಕೇಳೋದು : ಮಲಕೊಂಡಿದ್ದೆಯ?
ಉತ್ತರ : ಇಲ್ಲ, ಆಫ್ರಿಕಾದ ಜುಲು ಜನಾಂಗದವರು ಮದ್ವೆ ಆಗ್ತಾರ ಇಲ್ವ ಅಂತ, ರಿಸರ್ಚ್ ಮಾಡ್ತಿದ್ದೆ, ಮಲಗಿದ್ದೆ, ಅನ್ಕೊಂಡಿಯ?
೮) ಉದ್ದವಿದ್ದ ಕೂದಲು, ಕಡಿಮೆ ಆಗಿದ್ದು ನೋಡಿ,
ಮಳ್ಳತನದಿಂದ ಕೇಳೋದು: ಕಟಿಂಗ್ ಮಾಡಿಸಿಕೊಂಡಿಯ?
ಉತ್ತರ : ಇಲ್ಲ, ಇದು ಯುಗಾದಿ ಟೈಮಲ್ವ, ಹಳೆ ಕೂದಲು ಉದುರಿ ಹೊಸ ಕೂದಲು ಬರುತ್ತಿದೆ.
೯) ಡೆಂಟಿಸ್ಟ್ ಡಾಕ್ಟರ್-ನ,
ಮಳ್ಳತನದಿಂದ ಕೇಳೋದು : ನೋಯಲ್ಲ, ಅಲ್ವ?
ಉತ್ತರ : ಇಲ್ಲ, ಸುಮ್ನೆ, ನೆತ್ತರು ಸುರಿಯುತ್ತೆ ಅಸ್ಟೇ.
೧೦) ನೀವು ಸಿಗರೇಟ್ ಸೇದುವದನ್ನು ನೋಡಿ, ಹೊಸತಾಗಿ ಪರಿಚಯವಾದ ಹುಡುಗಿ,
ಮಳ್ಳತನದಿಂದ ಕೇಳೋದು : ಸೋ, ನೀವು, ಸ್ಮೋಕ್ ಮಾಡ್ತಿರ?
ಉತ್ತರ : ಓ!.. ಇಸ್ಟೊತ್ತೂ ಚಾಕ್ ಪೀಸ್ ಆಗಿತ್ತಿದು, ಇದೇನಿದು, ಇದಕ್ಕೆ ಉರಿ ಹತ್ಕೊಂಡಿದೆ?
Comments
ಉ: ಗೊತ್ತಿದ್ದರೂ ಕೇಳುವ ಹತ್ತು ಮಳ್ಳ ಪ್ರಶ್ನೆಗಳು
ಉ: ಗೊತ್ತಿದ್ದರೂ ಕೇಳುವ ಹತ್ತು ಮಳ್ಳ ಪ್ರಶ್ನೆಗಳು
ಉ: ಗೊತ್ತಿದ್ದರೂ ಕೇಳುವ ಹತ್ತು ಮಳ್ಳ ಪ್ರಶ್ನೆಗಳು
ಉ: ಗೊತ್ತಿದ್ದರೂ ಕೇಳುವ ಹತ್ತು ಮಳ್ಳ ಪ್ರಶ್ನೆಗಳು