ಗೌಡಪ್ಪನೂ ಸೇಲ್ಸ್ ಮ್ಯಾನು
ಗೌಡಪ್ಪನೂ ಸೇಲ್ಸ್ ಮ್ಯಾನು
ಟ್ರಿನ್ ಎಂದು ಒಂದೇ ಸಮನೆ ಗೌದಪ್ಪನಮನೆಯ ಕಾಲಿಂಗ್ ಬೆಲ್ ಹೊಡ್ಕೊತಿತ್ತು, ಅರೆ "ನಿಲ್ಲಪ್ಪಾ ...." ಬಂದ್ಬಿಟ್ಟೆ ಎಂದು ಗೌಡರ ಹೆಂಡತಿ ಹಟ್ಟಿಯಿಂದ ಬಂದು ಬಾಗಿಲ ತೆಗೆಯುವಷ್ಟರಲ್ಲಿ ಹೊರಗಡೆ ದೊಡ್ಡ ಬ್ಯಾಗ್ ಹಿಡ್ಕೊಂಡಿದ್ದ ಸೇಲ್ಸ್ ಮ್ಯಾನ್ ಒಳ್ಳಗೆ ಎಂಟ್ರಿ ಥಕೊಂಡ್ ಬಿಟ್ಟ . ಗೌಡತಿ "ಯಾರಪ್ಪ ನೀನು ? ಯಾರು ಬೇಕಾಗಿತ್ತು ?" ಆ ಮನುಷ್ಯನ ಉತ್ತರ ಇರಲಿಲ್ಲ, "ಯಪ್ಪಾ ಯಜಮಾನರು ಇಲ್ಲ ಕಣಪ್ಪ ..." ಆ ಮನಷ್ಯ ಇನ್ನು ಅವನ್ ಕೆಲ್ಸದಗೆ ಬ್ಯುಸಿ ಇದ್ದ ಗೌಡತಿ "ಅರೆ ಸುಬ್ಬಾ ,,, ದೊಣ್ಣೆ ಸೀನ ಎಲ್ಲಿ ಹಳಗೋದ್ರೋ ? ಯಜಮಾನ್ರು ಎಲ್ಲವ್ರೆ ? "
ಗೌಡತಿ ಮಾತ್ ಕೇಳ್ತಿದ್ದಂಗೆ ದೊಣ್ಣೆ ಸೀನ "ಅಮ್ಮಾವ್ರೇ, ಗೌಡ್ರು ಕೆರೆತಾವ ಹೋಗವ್ರೆ ... ಹೋರನಾಡಿಂದ ಬಂದಾಗಿಂದ ಶಾನೆ ಕೆರೆ ತಾವ ಹೋಗ್ತಿದ್ದಾರೆ .."
"...ಬಾಯ್ ತೆರ್ದ್ರೆ ... ಆ ಶಾನಿ ಅಕ್ಕನ್ನ ಬಯ್ತಾ ಇರ್ತಾರವ್ವಾ ... "
ಅದಕ್ಕೆ ಸುಬ್ಬ "ಇಸ್ಮೈಲ್ ಬಸ್ಸನಾಗ ತಿಂದ ಆಮ್ಲೆಟ್ , ಇರಾನಿ ಚಾಯ ಎಲ್ಲಾ ಕೆರೆಲಿ ಎರಡದಿನದಿಂದ ಬಿಡ್ತ್ಹಾವ್ರೆ ಅಮ್ಮ , "ಅಂದ
ಗೌಡತಿ "ಏಯ್ ಸುಬ್ಬು ಹೂಗಕೊಂಡು ಕರ್ಕೊಂಡ್ ಬಾರಲೇ.. ಯಜಮಾನ್ರ್ನಾ "ಅಂದ್ಲು
ಸುಬ್ಬು ಹಿಂಬದಿಯ ಬಾಗಿಲಿಂದ ಓಡ್ಹೋದ ಕೆರೆ ತಾವ ...
ಇಲ್ಲಿ ಒಳಗ ಬಂದ ಆಸಾಮಿ ಸೀನಂಗೆ "ಈ ಹಟ್ಟಿಯಾಗ ಸೆಗಣಿ ಇದ್ರೆ ತಕೊಂಡು ಬರ್ಲಾ..."
ಸೀನ "ಯಾಕೆ ಧಣಿ ?"
"ತಕೊಂಡು ಬರ್ಲಾ... "
ಸೀನ ಕೊಟ್ಟಿಗೆ ತಾವ ಹೋದ, ಗೌಡತಿ ಒಂದು ಮೂಲೆಯಾಗ್ ನಿಂತು ಈ ಆಸಾಮಿ ಮತ್ತವನ ಬ್ಯಾಗನ್ನೇ ನೋಡ್ತಿದ್ರು.
ಅಲ್ಲೇ ಬದಿಯಾಗೆ ಒಂದು ಕಾಲು ಮುರ್ದಿದ್ದ ಟಿಪಾಯಿ ಮೇಲೆ ಗೌಡ್ರು ಶಿವಮೊಗ್ಗದಿಂದ ಬರಬೇಕಾದರೆ ತಂದಿದ್ದ ಹೊಸ ಕಾರ್ಪೆಟ್ ನ ಆ ಹಯ್ದ ನಡು ಕೊಣೆಯಲ್ಲಿ ಹಾಸಿಬಿಟ್ಟ ,
ಇಲ್ಲಿ ಸೀನ ಒಂದು ಯಲುಮಿನಿಯಂ ಬಾಲ್ಡಿ ತುಂಬಾ ಹಾಳು ವಾಸನೆ ಬೀರೋ ತೆಳು ಸೆಗಣಿ ತಂದ
"ದನಿ ಸೆಗಣಿ ಇಲ್ಲೈಥಿ "
ಅದಕ್ಕೆ ಆ ವಯ್ಯ "ಇದರ್ನಾಗ್ ಹೊಯ್ಲಾ ..."
ಗೌಡತಿ "ಏನ್ ಮಾಡ್ತ್ಹಿದ್ದಿಯಪ್ಪಾ .. ಇನ್ನ ಹೊಸ ಚಾಪೆ ... ಸೆಗಣಿ ಹೊಯ್ಲಿಕ್ಕೆ ಹೇಳ್ತಿದ್ದಿಯ್ಯಾ , ಬುದ್ದಿ ನೆಟ್ಟಗಯ್ತಾ ಹೆಂಗೆ? ೩೦೦೦ ಕೊಟ್ಟವರಂತೆ ... ದುಬಾರಿ ಚಾಪೆ ... ಬೆಂಗಳೂರಿಂದ ಎದ್ಡಿಯುರಪ್ಪನವರು ಬಂದಾಗ ನಡು ಮನೆಗೆ ಹಾಸ ಬೇಕಂತ ತಂದಿದ್ದು... "
ಆ ವಯ್ಯ "ನಿಲ್ಲಮ್ಮಾ ... ನೀನು ಎಲ್ಲಾ ಬಾಲ್ಡಿ ಇಲ್ಲಿ ಹೊಯ್ಯಪ್ಪಾ ..."ಅಂದ ಸೀನಂಗೆ
ಬುದ್ದಿ ಇಲ್ಲದ ಸೀನ ಒಂದು ಬಾಲ್ಡಿ ಖಾಲಿ ಅಯಿತಿದ್ದಂತೆ "ಇನ್ನೊದು ಬಾಲ್ಡಿ ತರ್ಲಾ ಧಣಿ "ಅಂದ
ಗೌಡತಿ ಅಲ್ಲೇ ಕೆಳಗೆ ಬಿದ್ದಳು.
ಅದೇ ಹೊತ್ತಗೆ ಸರಿಯಾಗೇ ಮುಂದಿನ ಬಾಗಿಲಿಂದ ನಡು ಮನೆಗೆ ಎಂಟ್ರಿ ಹೊಡಿತಾರೆ, "ಯಾವನ್ಲಾ ನೀನು ? "
"ಗೌಡ್ರೆ ನೀವು ನಿಮ್ಮ ಹಳ್ಳಿ ತುಂಬಾ ವರ್ಲ್ಡ್ ಫೇಮಸ್ ಅಂತ ತಿಳೀತು, ನಿಮಗೆ ಯಡ್ಯುರಪ್ಪಾ ಬೇರೆ ಗೊತ್ತಂತೆ.., ನಿಮಗೆ ಸಹಾಯಕ್ಕೆ ಒಂದು ವಸ್ತು ತಂದಿವ್ನಿ , ಮನೆ ಪಳಪಳ ಹೊಳೆಯಂಗೆ ಮಾಡತ್ತೆ ... "
"ಏನ್ಲ ಪಿನಯಿಲ್ ... ಗಿನಾಯಿಲ್ ತಂದಿದ್ಯೇನೋ ...?"
"ವಾಕ್ಯುಂ ಕ್ಲೀನರ್ , ಧಣಿ"
"ಹ್ಯಾಂಗ್ ಅಂದ್ರೆ ಏನ್ಲಾ ?"
"ಇಲ್ಲಿ ನೋಡಿ , ನೀವು ನಿನ್ನೆ ತಂದ ೩೦೦೦ ದು ಕಾರ್ಪೆಟ್ ..."
"ಏನೋ ಮಾಡಿದ್ಯ ಇದ್ದಕ್ಕೆ ?... ಸೆಗಣಿ ಯಾಕೋ ಹೊಯ್ದೆ ?"
"ನೋಡಿ ದಣಿ , ಇದೆ ಈ ಯಂತ್ರದ್ದು ಮ್ಯಾಜಿಕ್, ನಿಮ್ಮ ೩೦೦೦ ಕಾರ್ಪೆಟ್ ನ ಈಗ ಹೊಚ್ಚ್ಚಾ ಹೊಸದ್ರಂಗೆ ಮಾಡ ಬಿಡ್ತ್ಹಿನಿ ... "
"... ಇನ್ನು ೧೦-೧೫ ಸೆಕೆಂಡ್ ನೊಳಗ ಈ ಎಲ್ಲಾ ಸೆಗಣಿ ಈ ಮಷಿನ್ ಕ್ಲೀನ್ ಮಾಡಿಲ್ಲಂದ್ರೆ, ಬಿದ್ದಿರೋ ಸೆಗಣಿ ನಾನ್ ತಿಂತೀನಿ... ಚಾಲೆಂಜ್ ಗೆ ತಯಾರಿದ್ದೀರ ...? "ಅನ್ನುತ್ತ ಪ್ಲುಗ್ ಆನ್ ಮಾಡಿದ ಆ ಸೇಲ್ಸ್ ಮ್ಯಾನ್
ಇದ್ದನ್ನು ನೋಡ್ತಾ ಗೌಡಪ್ಪ "ಯಪ್ಪಾ ಸೆಗಣಿ ಜೊತೆಗೆ ಏನ್ ಹಾಕೊಂಡ್ ತಿನ್ತಿಯಾ ? ಮನೆಯಲ್ಲಿ ಮಾಡಿದ ಉಪ್ಪಿನಕಾಯಿ ಸಾಕೋ .... ಇಲ್ಲ ಹೋರನಾಡಿಂದ ಬರಬೇಕಿದ್ರೆ ಮಂಜಣ್ಣ ತಿಂದು ಎಸೆದ ಮೂಳೆ ಮಾಂಸದ ಕಟ್ಟಾ ತರ್ಲೋ ...?"
ಯೀ ಮಾತ್ ಕೇಳ್ತಿದ್ದಂತೆ ಆ ಹಯ್ದ ದಂಗಾದ ಅವನಿಗೇನು ಗೊತ್ತು, ಈ ಹಳ್ಳಿಯಲ್ಲಿ ಗೌಡಪ್ಪ ಮಾಡುವ ಸ್ನಾನದ ತರಾನೆ ತಿಂಗಳಿಗೆ ಒಮ್ಮೆ ಇಲ್ಲಾಂದ್ರೆ ವರ್ಷಕ್ಕೆ ಒಮ್ಮೆ KEB ಯವರು ಕರೆಂಟ್ ಕೊಡ್ತಾರಂತ ....
ಅಂತು ಇಂತು ಷರತ್ತು ಹಾಕಿ ಸೊತ್ ಬಿಟ್ಟ ಸಿಟಿ ಸೇಲ್ಸ್ ಮ್ಯಾನ್ ನಮ್ಮ ಗೌಡರ ಮುಂದೆ.
Comments
ಉ: ಗೌಡಪ್ಪನೂ ಸೇಲ್ಸ್ ಮ್ಯಾನು
In reply to ಉ: ಗೌಡಪ್ಪನೂ ಸೇಲ್ಸ್ ಮ್ಯಾನು by gopaljsr
ಉ: ಗೌಡಪ್ಪನೂ ಸೇಲ್ಸ್ ಮ್ಯಾನು
ಉ: ಗೌಡಪ್ಪನೂ ಸೇಲ್ಸ್ ಮ್ಯಾನು
In reply to ಉ: ಗೌಡಪ್ಪನೂ ಸೇಲ್ಸ್ ಮ್ಯಾನು by prasannasp
ಉ: ಗೌಡಪ್ಪನೂ ಸೇಲ್ಸ್ ಮ್ಯಾನು
In reply to ಉ: ಗೌಡಪ್ಪನೂ ಸೇಲ್ಸ್ ಮ್ಯಾನು by kamath_kumble
ಉ: ಗೌಡಪ್ಪನೂ ಸೇಲ್ಸ್ ಮ್ಯಾನು
In reply to ಉ: ಗೌಡಪ್ಪನೂ ಸೇಲ್ಸ್ ಮ್ಯಾನು by prasannasp
ಉ: ಗೌಡಪ್ಪನೂ ಸೇಲ್ಸ್ ಮ್ಯಾನು
ಉ: ಗೌಡಪ್ಪನೂ ಸೇಲ್ಸ್ ಮ್ಯಾನು
In reply to ಉ: ಗೌಡಪ್ಪನೂ ಸೇಲ್ಸ್ ಮ್ಯಾನು by manju787
ಉ: ಗೌಡಪ್ಪನೂ ಸೇಲ್ಸ್ ಮ್ಯಾನು
ಉ: ಗೌಡಪ್ಪನೂ ಸೇಲ್ಸ್ ಮ್ಯಾನು
In reply to ಉ: ಗೌಡಪ್ಪನೂ ಸೇಲ್ಸ್ ಮ್ಯಾನು by gopinatha
ಉ: ಗೌಡಪ್ಪನೂ ಸೇಲ್ಸ್ ಮ್ಯಾನು
In reply to ಉ: ಗೌಡಪ್ಪನೂ ಸೇಲ್ಸ್ ಮ್ಯಾನು by kamath_kumble
ಉ: ಗೌಡಪ್ಪನೂ ಸೇಲ್ಸ್ ಮ್ಯಾನು
In reply to ಉ: ಗೌಡಪ್ಪನೂ ಸೇಲ್ಸ್ ಮ್ಯಾನು by Jayanth Ramachar
ಉ: ಗೌಡಪ್ಪನೂ ಸೇಲ್ಸ್ ಮ್ಯಾನು