ಚಟುವಟಿಕೆಗಳು ಚುಟುಕಾದಾಗ-೪

ಚಟುವಟಿಕೆಗಳು ಚುಟುಕಾದಾಗ-೪

ಚಟುವಟಿಕೆಗಳು ಚುಟುಕಾದಾಗ, ಕಿರು ಪರೀಕ್ಷೆ ಒಮ್ಮೆಗೆ ಮುಗಿದಾಗ,
ಭಾವನೆಗಳ ಹಾರಾಟ ಪ್ರಾರಂಭವಾದಾಗ, ಪುಟ್ಟ ಪುಟ್ಟ ಕವನಗಳು ಹೊರಬರುತ್ತವೆ :)

ನೀ.. ಚಂದಿರ
*********

ಸುಂದರವಾದ ಸಂಜೆಗೆ,
ರಂಗೇರಿಸುವ ಆದಿತ್ಯ.
ಕಲರವದ ಕೊಳಕ್ಕೆ,
ನಗುಮೊಗದ ಕಮಲ.
ಬೆಳದಿಂಗಳ ರಾತ್ರಿಗೆ,
ದೀಪದಂತೆ ನಕ್ಷತ್ರ.
ನನ್ನೆದೆಯ ಬಾಂದಳಕ್ಕೆ,
ನೀನೆ ಚಂದಿರ..!

ನಿನ್ನ ನೆನಪು
**********

ಕಂಡಾಗ ನಿನ್ನ ಮೊಗವ
ಎದೆಯಲಿ ಏನೋ ಕಂಪನ!
ಕೇಳಿದೆ ನಿನ್ನ ದನಿಯ
ಕಿವಿಯಲಿ ಏನೋ ಕಲರವ
ನೆನೆದಾಗ ನಿನ್ನ ಸನಿಹ
ಬಳಿಯಲೇ ಬಂದಿರುವೆಯಾ?!!!

ಜೀವ ಬಂತೆ!!
**********

ತಂಗಾಳಿ ಬೀಸಿದಾಗ
ಮೈ ನವಿರಾದಂತೆ,
ಕೆಂಗುಲಾಬಿ ಕಂಡಾಗ
ಹೃದಯದಲಿ ಅರಳಿದಂತೆ,
ಇಂಪಾದ ದನಿಯ ಕೇಳಿದಾಗ
ರೋಮಾಂಚನವಾದಂತೆ,
ನಿನ್ನ ನೋಡಿದಾಗ
ಉಸಿರಿಗೆ ಜೀವ ಬಂತೆ??!!!

ಚಟುವಟಿಕೆಗಳು ಚುಟುಕಾಗುವುದು ಮುಂದುವರೆಯುವುದು... :)

Rating
No votes yet

Comments