ಚಿರನಿದ್ರೆ

ಚಿರನಿದ್ರೆ

ಚಂದ್ರನಿರದ ಮೋಡದ ರಾತ್ರಿಯಲಿ, ಆ ಕಗ್ಗತ್ತಲಿನ ಕಪ್ಪು ನೆರಳಲಿ
ಕುಳಿತಿರಲು, ದಿಗಂತವ ನೊಡುತಾ...
ನೆನಪೊಂದು ಮನಸ್ಸೊಳಗೆ ಮೂಡಿ ನನಾತ್ಮವ ಮುಟ್ಟಲು,
ಕಣ್ಣಂಚಿಂದ ಹನಿಯೊಂದು ಉದರಲು, ನನ್ನೆದುರಿನ ನೋಟ ಮುಸಕಾಗಲು...
ದೂರ ದೂರದಲ್ಲಿಯೂ ಭರವಸೆಯ ಬೆಳಕು ಕಾಣಲಿಲ್ಲವಾಗಿ....

ದಿಕ್ಕಿಲ್ಲದ ಸಾಗರದಿ, ಒಂಟಿ ನೌಕೆಯ ಎಕಾಂಗಿ
ನಾವಿಕನಾಗಿರಲು, ಸೂರ್ಯನಡೆಗೆ ಸಾಗುತಾ....
ಮರಿಚೀಕೆಯೊನ್ದು ಕಾಣಿಸಿ, ಕಾಡಿಸಿ, ನನ್ನಳಿಸಿ ಹೋಗಲು,
ನನ್ನೆದೆ ಬಿರಿದಿ ಬರಿದಾಗಲು.....
ತೋರುಬೆರಳೊಂದು ದಡದೆಡೆಗೆ ದಾರಿ ನೊಡಿಸಿಲಿಲ್ಲವಾಗಿ....

ಜೀವನವೆಂಬ ಕವನದಿ, ಬದುಕೆಂಬ ಪದಗಳಲ್ಲಿ
ಹುಡುಕುತ್ತಿರಲು ಅರ್ಥವ....
ಪ್ರೀತಿಯೆಂಬ ರಾಗವು ಮೂಡಿ, ನನ್ನ ಕಾವ್ಯದ ಚರಣ ಪಲ್ಲವಿಗಳೊಡನೆ
ಕೂಡದೆ, ನಿಶಬ್ದವೆ ನನ್ನ ಹಾಡಗಿರಲು...
ಒಲವಿನ ದನಿಯೊಂದು ಕೇಳಸಿದಿರಲು...

ಸಾಗಿದೆ ನಾ ಚಿರನಿದ್ರೆಯಡೆಗೆ

ಸ್ಪ್ರಹಿ

Rating
No votes yet