'' ಚುಟುಕುಗಳು-21 ''

Submitted by H A Patil on Thu, 11/22/2012 - 14:58

ಅಶ್ರುಧಾರೆ ಆನಂದ ಭಾಷ್ಫ


ಇವೆರೆಡೂ ಕಣ್ಣುಗಳಿಂದ


ಸುರಿವ ಭಾವಾಭಿವ್ಯಕ್ತಿಯ


ಸ್ರವಗಳು ಒಂದು


ದುಃಖದ ಅಭಿವ್ಯಕ್ತಿಯಾದರೆ 


ಇನ್ನೊಂದು ಸುಖದ ಅಭಿವ್ಯಕ್ತಿ


 


     ***


 


ಕೇದಿಗೆಯ ಅಂಚಿಗೆ


ಮುಳ್ಳುಗಳ ಬೇಲಿ


ಕೇದಿಗೆಯ ದಳಕೆ ಮುಳ್ಳು


ಅದರ ಸುವಾಸನೆಗೆ ಅಲ್ಲ


 


     ***


 


ಸಿಕ್ಕ ಸಿಕ್ಕದ್ದನ್ನು ಮುಕ್ಕುವುದು


ಆರೋಗ್ಯದ ಲಕ್ಷಣವಲ್ಲ 


ಹಾಗೆಯೆ ಸಿಕ್ಕ ಸಿಕ್ಕ  ಓದೂ ಅಲ್ಲ


ಎರಡರಲೂ ಸದಭಿರುಚಿ ಬೇಕು


 


     ***

ಬ್ಲಾಗ್ ವರ್ಗಗಳು
Rating
No votes yet

Comments

sathishnasa

Fri, 11/23/2012 - 12:00

ಒಳ್ಳೆಯ ಚುಟುಕಗಳು. ನಿಮ್ಮ ಮಾತು ನಿಜ ಸಿಕ್ಕ ಸಿಕ್ಕದ್ದನ್ನು ಮುಕ್ಕುವುದರಿಂದ ಆರೋಗ್ಯ ಕೆಡುತ್ತದೆ ಹಾಗೆ ಸಿಕ್ಕ ಸಿಕ್ಕದ್ದನ್ನು ಓದುವುದರಿಂದ ಮನಸ್ಸು ಕೆಡುತ್ತದೆ ....ಸತೀಶ್

ಗಣೇಶ

Sat, 11/24/2012 - 00:18

>>>ಸಿಕ್ಕ ಸಿಕ್ಕದ್ದನ್ನು ಮುಕ್ಕುವುದು

ಆರೋಗ್ಯದ ಲಕ್ಷಣವಲ್ಲ :(

ಹಾಗೆಯೆ ಸಿಕ್ಕ ಸಿಕ್ಕ ಓದೂ ಅಲ್ಲ :(
ಎರಡರಲ್ಲೂ ಹಸಿವು ಇದೆ.
ಚುಟುಕು ಕವನಗಳು ಚೆನ್ನಾಗಿದೆ.

ಕವಿ ನಾಗರತಾಜ ರವರಿಗೆ ವಂದನೆಗಳು ಬಹಳ ದಿನಗಳ ನಂತರ ಸಂಪದದಲ್ಲಿ ಕಾಣಿಸಿ ಕೊಂಡಿದ್ದೀರಿ ಚುಟುಕುಗಳ ಗುಟುಕುಗಳು ರುಚಿಯಾಗಿವೆ ಎಂದು ಮೆಚ್ಚಿದ್ದೀರಿ. ತಮ್ಮ ಪುಸ್ತಕ ಬಿಡುಗಡೆ ಕಾರ್ಯಕ್ರಮ ಯಶಸ್ವಿಯಾಗಲಿ, ಧನ್ಯವಾದಗಳು.

lpitnal@gmail.com

Sun, 11/25/2012 - 10:48

ಪ್ರಿಯ ಪಾಟೀಲ ರವರೇ, ಚುಟುಕುಗಳು ಚನ್ನಾಗಿವೆ. ಅರ್ಥವತ್ತಾಗಿವೆ. ಅಶ್ರುಧಾರೆ, ಆನಂದಭಾಷ್ಪಗಳು, ಕೇದಿಗೆಯ ಅಂಚು ಮುಳ್ಳುಗಳು ಅಂಚಿಗೆ, ಆದರೆ ಪರಿಮಳಕಿಲ್ಲ ಮುಳ್ಳುಗಳು- ಬೇಕು ಮೂಗಹೊಳ್ಳೆಗಳು, ಇನ್ನು ಸಿಕ್ಕ ಸಿಕ್ಕದ್ದನ್ನು ಮುಕ್ಕುವುದು, ಕಕ್ಕುವುದಕ್ಕೆ ಮೂಲ, ಬೇಕಾ ಬಿಟ್ಟಿ ವಿಷಯಗಳನ್ನು ಓದುವುದು ಮನಸ್ಸನ್ನು ವ್ಯಗ್ರತೆಗೆ ದೂಡುವ ದಾರಿ ಎಂಬುವ ಪರಮ ಸತ್ಯವನ್ನು ಚಿಕ್ಕ ಚೊಕ್ಕದಾಗಿ ಹೇಳಿದ್ದೀರಿ ಸರ್, ಮತ್ತೊಮ್ಮೆ ಉತ್ತಮ ಚುಟುಕುಗಳು.ಧನ್ಯವಾದಗಳು.