'' ಚುಟುಕುಗಳು-21 ''
ಅಶ್ರುಧಾರೆ ಆನಂದ ಭಾಷ್ಫ
ಇವೆರೆಡೂ ಕಣ್ಣುಗಳಿಂದ
ಸುರಿವ ಭಾವಾಭಿವ್ಯಕ್ತಿಯ
ಸ್ರವಗಳು ಒಂದು
ದುಃಖದ ಅಭಿವ್ಯಕ್ತಿಯಾದರೆ
ಇನ್ನೊಂದು ಸುಖದ ಅಭಿವ್ಯಕ್ತಿ
***
ಕೇದಿಗೆಯ ಅಂಚಿಗೆ
ಮುಳ್ಳುಗಳ ಬೇಲಿ
ಕೇದಿಗೆಯ ದಳಕೆ ಮುಳ್ಳು
ಅದರ ಸುವಾಸನೆಗೆ ಅಲ್ಲ
***
ಸಿಕ್ಕ ಸಿಕ್ಕದ್ದನ್ನು ಮುಕ್ಕುವುದು
ಆರೋಗ್ಯದ ಲಕ್ಷಣವಲ್ಲ
ಹಾಗೆಯೆ ಸಿಕ್ಕ ಸಿಕ್ಕ ಓದೂ ಅಲ್ಲ
ಎರಡರಲೂ ಸದಭಿರುಚಿ ಬೇಕು
***
Rating
Comments
ಒಳ್ಳೆಯ ಚುಟುಕಗಳು. ನಿಮ್ಮ ಮಾತು
ಒಳ್ಳೆಯ ಚುಟುಕಗಳು. ನಿಮ್ಮ ಮಾತು ನಿಜ ಸಿಕ್ಕ ಸಿಕ್ಕದ್ದನ್ನು ಮುಕ್ಕುವುದರಿಂದ ಆರೋಗ್ಯ ಕೆಡುತ್ತದೆ ಹಾಗೆ ಸಿಕ್ಕ ಸಿಕ್ಕದ್ದನ್ನು ಓದುವುದರಿಂದ ಮನಸ್ಸು ಕೆಡುತ್ತದೆ ....ಸತೀಶ್
In reply to ಒಳ್ಳೆಯ ಚುಟುಕಗಳು. ನಿಮ್ಮ ಮಾತು by sathishnasa
ಸತೀಶ ರವರಿಗೆ ವಂದನೆಗಳು
ಸತೀಶ ರವರಿಗೆ ವಂದನೆಗಳು
ಚುಟುಕುಗಳ ಕುರಿತು ತಾವು ಬರೆದ ಪ್ರತಿಕ್ರಿಯೆ ಓದಿದೆ, ಮೆಚ್ಚುಗೆಗೆ ಧನ್ಯವಾದಗಳು.
>>>ಸಿಕ್ಕ ಸಿಕ್ಕದ್ದನ್ನು
>>>ಸಿಕ್ಕ ಸಿಕ್ಕದ್ದನ್ನು ಮುಕ್ಕುವುದು
ಆರೋಗ್ಯದ ಲಕ್ಷಣವಲ್ಲ :(
ಹಾಗೆಯೆ ಸಿಕ್ಕ ಸಿಕ್ಕ ಓದೂ ಅಲ್ಲ :(
ಎರಡರಲ್ಲೂ ಹಸಿವು ಇದೆ.
ಚುಟುಕು ಕವನಗಳು ಚೆನ್ನಾಗಿದೆ.
In reply to >>>ಸಿಕ್ಕ ಸಿಕ್ಕದ್ದನ್ನು by ಗಣೇಶ
ಗಣೇಶ ರವರಿಗೆ ವಂಧನೆ ಚುಟುಕುಗಳ
ಗಣೇಶ ರವರಿಗೆ ವಂಧನೆ ಚುಟುಕುಗಳ ಮೆಚ್ಚುಗೆಗೆ ಧನ್ಯವಾದಗಳು.
ಚುಟುಕಿನ ಗುಟುಕುಗಳು ರುಚಿಯಾಗಿವೆ.
ಚುಟುಕಿನ ಗುಟುಕುಗಳು ರುಚಿಯಾಗಿವೆ.
In reply to ಚುಟುಕಿನ ಗುಟುಕುಗಳು ರುಚಿಯಾಗಿವೆ. by kavinagaraj
ಕವಿ ನಾಗರತಾಜ ರವರಿಗೆ ವಂದನೆಗಳು
ಕವಿ ನಾಗರತಾಜ ರವರಿಗೆ ವಂದನೆಗಳು ಬಹಳ ದಿನಗಳ ನಂತರ ಸಂಪದದಲ್ಲಿ ಕಾಣಿಸಿ ಕೊಂಡಿದ್ದೀರಿ ಚುಟುಕುಗಳ ಗುಟುಕುಗಳು ರುಚಿಯಾಗಿವೆ ಎಂದು ಮೆಚ್ಚಿದ್ದೀರಿ. ತಮ್ಮ ಪುಸ್ತಕ ಬಿಡುಗಡೆ ಕಾರ್ಯಕ್ರಮ ಯಶಸ್ವಿಯಾಗಲಿ, ಧನ್ಯವಾದಗಳು.
ಪ್ರಿಯ ಪಾಟೀಲ ರವರೇ, ಚುಟುಕುಗಳು
ಪ್ರಿಯ ಪಾಟೀಲ ರವರೇ, ಚುಟುಕುಗಳು ಚನ್ನಾಗಿವೆ. ಅರ್ಥವತ್ತಾಗಿವೆ. ಅಶ್ರುಧಾರೆ, ಆನಂದಭಾಷ್ಪಗಳು, ಕೇದಿಗೆಯ ಅಂಚು ಮುಳ್ಳುಗಳು ಅಂಚಿಗೆ, ಆದರೆ ಪರಿಮಳಕಿಲ್ಲ ಮುಳ್ಳುಗಳು- ಬೇಕು ಮೂಗಹೊಳ್ಳೆಗಳು, ಇನ್ನು ಸಿಕ್ಕ ಸಿಕ್ಕದ್ದನ್ನು ಮುಕ್ಕುವುದು, ಕಕ್ಕುವುದಕ್ಕೆ ಮೂಲ, ಬೇಕಾ ಬಿಟ್ಟಿ ವಿಷಯಗಳನ್ನು ಓದುವುದು ಮನಸ್ಸನ್ನು ವ್ಯಗ್ರತೆಗೆ ದೂಡುವ ದಾರಿ ಎಂಬುವ ಪರಮ ಸತ್ಯವನ್ನು ಚಿಕ್ಕ ಚೊಕ್ಕದಾಗಿ ಹೇಳಿದ್ದೀರಿ ಸರ್, ಮತ್ತೊಮ್ಮೆ ಉತ್ತಮ ಚುಟುಕುಗಳು.ಧನ್ಯವಾದಗಳು.
In reply to ಪ್ರಿಯ ಪಾಟೀಲ ರವರೇ, ಚುಟುಕುಗಳು by lpitnal@gmail.com
ಲಕ್ಷ್ಮೀಕಾಂತ ಇಟ್ನಾಳ್ ರವರಿಗೆ
ಲಕ್ಷ್ಮೀಕಾಂತ ಇಟ್ನಾಳ್ ರವರಿಗೆ ವಂದನೆಗಳು ಚುಟುಕುಗಳ ಮೆಚ್ಚುಗೆಗೆ ಧನ್ಯವಾದಗಳು.