'' ಚುಟುಕುಗಳು ''

Submitted by H A Patil on Sun, 11/18/2012 - 20:12
 


 


 


   


ಸಪ್ತಪದಿ


ಗಂಡು ಹೆಣ್ಣುಗಳ ಅನುರಾಗಕೆ


ಹಾಕುವ ಒಂದು ಶ್ರೀಕಾರ ಅದು 


ಎಂದಿಗೂ ಮುರಿಯಲಾಗದ 


ಒಂದು ಅನುಬಂಧ


 


     ***


 


ಕಷ್ಟ ಸುಖಗಳು


ಎಲ್ಲರ ಜೀವನದಲ್ಲಿಯೂ 


ಬರುವಂತಹವೆ


ಅವುಗಳಿಗೆ ಯಾವುದೇ


ಜಾತಿ ಮತ ಪಂಥ ಬಣ್ಣಗಳ


ಬೇಧವಿರುವುದಿಲ್ಲ 


ಅವು ನಿಷ್ಪಕ್ಷಪಾತಿ


 


     ***


 


ಒಂದು ದಿನ 


ಈ ಅಮರ್ತ್ಯ ಲೋಕಕ್ಕೆ 


ಬರುತ್ತೇವೆ


ಇನ್ನೊಂದು ದಿನ 


ನಿಗೂಢ ಅಲೌಕಿಕ


ಲೋಕದೆಡೆಗೆ ಸಾಗಿ ಹೋಗುತ್ತೇವೆ


ಬದುಕು ನೀರ ಮೇಲಿನ 


ಒಂದು ಗುಳ್ಳೆ


 

ಬ್ಲಾಗ್ ವರ್ಗಗಳು
Rating
No votes yet

Comments

swara kamath

Mon, 11/19/2012 - 22:40

ಪಾಟೀಲರಿಗೆ ನಮಸ್ಕಾರಗಳು,
ಚುಟುಕುಗಳು ಸರಳವಾಗಿದ್ದರೂ ಅರ್ಥಗರ್ಭಿತವಾಗಿವೆ.ಬದುಕು ಎನ್ನುವುದು ಮಾನವನು ಈ ಧರೆಗೆ ಬರುವಾಗ ಋಣದ ಮೂಟೆಯೊಂದಿಗೆ ಬಂದು ಒಂದಿಷ್ಟನ್ನು ತೀರಿಸಿ ಅಥವಾ ಇನ್ನಷ್ಟನ್ನು ಸೇರಿಸಿಕೊಂಡು ನಿರ್ಗಮಿಸುವ ಒಂದು ಕಾಲನ ನಿಯಮವಾಗಿದೆ.ಈ ಮದ್ಯೆ ಆತ್ಮನು ಧರಿಸುವ ಪಾತ್ರ ಬೇರೆ ಬೇರೆ ಅಲ್ಲವೆ?