'' ಚುಟುಕುಗಳು ''
ಸಪ್ತಪದಿ
ಗಂಡು ಹೆಣ್ಣುಗಳ ಅನುರಾಗಕೆ
ಹಾಕುವ ಒಂದು ಶ್ರೀಕಾರ ಅದು
ಎಂದಿಗೂ ಮುರಿಯಲಾಗದ
ಒಂದು ಅನುಬಂಧ
***
ಕಷ್ಟ ಸುಖಗಳು
ಎಲ್ಲರ ಜೀವನದಲ್ಲಿಯೂ
ಬರುವಂತಹವೆ
ಅವುಗಳಿಗೆ ಯಾವುದೇ
ಜಾತಿ ಮತ ಪಂಥ ಬಣ್ಣಗಳ
ಬೇಧವಿರುವುದಿಲ್ಲ
ಅವು ನಿಷ್ಪಕ್ಷಪಾತಿ
***
ಒಂದು ದಿನ
ಈ ಅಮರ್ತ್ಯ ಲೋಕಕ್ಕೆ
ಬರುತ್ತೇವೆ
ಇನ್ನೊಂದು ದಿನ
ನಿಗೂಢ ಅಲೌಕಿಕ
ಲೋಕದೆಡೆಗೆ ಸಾಗಿ ಹೋಗುತ್ತೇವೆ
ಬದುಕು ನೀರ ಮೇಲಿನ
ಒಂದು ಗುಳ್ಳೆ
Rating
Comments
ಪಾಟೀಲರಿಗೆ ನಮಸ್ಕಾರಗಳು,
ಪಾಟೀಲರಿಗೆ ನಮಸ್ಕಾರಗಳು,
ಚುಟುಕುಗಳು ಸರಳವಾಗಿದ್ದರೂ ಅರ್ಥಗರ್ಭಿತವಾಗಿವೆ.ಬದುಕು ಎನ್ನುವುದು ಮಾನವನು ಈ ಧರೆಗೆ ಬರುವಾಗ ಋಣದ ಮೂಟೆಯೊಂದಿಗೆ ಬಂದು ಒಂದಿಷ್ಟನ್ನು ತೀರಿಸಿ ಅಥವಾ ಇನ್ನಷ್ಟನ್ನು ಸೇರಿಸಿಕೊಂಡು ನಿರ್ಗಮಿಸುವ ಒಂದು ಕಾಲನ ನಿಯಮವಾಗಿದೆ.ಈ ಮದ್ಯೆ ಆತ್ಮನು ಧರಿಸುವ ಪಾತ್ರ ಬೇರೆ ಬೇರೆ ಅಲ್ಲವೆ?
In reply to ಪಾಟೀಲರಿಗೆ ನಮಸ್ಕಾರಗಳು, by swara kamath
ಜೀವನ ದ ಕ ಷ್ಟ -ಸುಖದಲ್ಲಿ ನ ಸವಾ
ಜೀವನ ದ ಕ ಷ್ಟ -ಸುಖದಲ್ಲಿ ನ ಸವಾ ಲು, ಸಪ್ತಪದಿ ಯ ಚುಟುಕಾ ದ ವಿವರ ಣೆ ಅ ರ್ಥಗರ್ಭಿತವಾಗಿ ದೆ.
In reply to ಜೀವನ ದ ಕ ಷ್ಟ -ಸುಖದಲ್ಲಿ ನ ಸವಾ by mamatha.k
ಮೇಡಂ ವಂದನೆಗಳು
ಮೇಡಂ ವಂದನೆಗಳು
ಚುಟುಕುಗಳ ಬಗ್ಗೆ ಪ್ರತಿಕ್ರಿಯಿಸದ್ದೀರಿ ಮೆಚ್ಚುಗೆಗೆ ಧನ್ಯವಾದಗಳು.
In reply to ಪಾಟೀಲರಿಗೆ ನಮಸ್ಕಾರಗಳು, by swara kamath
ರಮೇಶ ಕಾಮತರಿಗೆ ವಂದನೆಗಳು
ರಮೇಶ ಕಾಮತರಿಗೆ ವಂದನೆಗಳು
' ಚುಟುಕುಗಳ ' ಕುರಿತು ತಾವು ಬರೆದ ಪ್ರತಿಕ್ರಿಯೆ ಓದಿದೆ. ತಮ್ಮ ಅನಿಸಿಕೆ ನಿಜ ಧನ್ಯವಾದಗಳು.