ಜಿಂಬಾಬ್ವೆ ಯುಗಾದಿ

ಜಿಂಬಾಬ್ವೆ ಯುಗಾದಿ

ಈ ಯುಗಾದಿಯ ಹೋಳಿಗೆ ಎಣ್ಣೆ ನೀರು ಸಂಭ್ರಮದಲ್ಲಿ ಜಿಂಬಾಬ್ವೆ ಜನರ ದನಿಗೆ ಬೆಲೆ ಸಿಗಬಹುದು, ಅವರಿಗೊಂದು ಹೊಸ ಯುಗ ಶುರುವಾಗಬಹುದು ಎಂದು ಆಶಿಸುತ್ತೇನೆ.

ಆದರೂ ನೋಡಿ - ತನ್ನ ಜನರಿಗಾಗಿ ದುಡಿಯುತ್ತಲೇ ಧೂರ್ತನಾದ, ತನ್ನವರನ್ನೇ ಬಡಿದು ಕೊಲ್ಲತೊಡಗಿದ ಮುಗಾಬೇ ಒಂದು ಕಡೆ. ತನ್ನ ಜನರಿಗಾಗಿ ಪಶ್ಚಿಮದ ಸರ್ಕಾರಗಳ ಜತೆ ಒಳಗೊಳಗೇ ಪಿತೂರಿ ನಡೆಸಲೂ ಹಿಂದೊಮ್ಮೆ ಸೈಯೆಂದಿದ್ದ ತ್ಸ್‌ವೆಂಗಿರಾಯ್ ಇನ್ನೊಂದು ಕಡೆ. ಇವರಿಬ್ಬರ ನಡುವೆ ಆರಿಸಬೇಕಾದ ವ್ಯಂಗ್ಯ ಜಿಂಬಾಬ್ವೆಯ ತಪ್ತ ಜನರದ್ದು. ಯಾರು ಬೇವು? ಯಾರು ಬೆಲ್ಲ? ಯಾವುದಕ್ಕೆ ಏನು ಅರ್ಥ?

ಅತಿ ನಿಧಾನವಾಗದೆ ಚುನಾವಣೆಯ ಫಲ ಜನರಿಗೆ ಬೇಕಾದಂತೆ ಒದಗಲಿ. ಹಸಿವು, ಬಡತನ ಮತ್ತು ಹತ್ತಾರು ಸಾವಿರ ಪರ್ಸೆಂಟ್ ಇನ್‌ಫ್ಲೇಶನ್ನಿಂದ ತನ್ನ ಜನರು ನರಳುವಂತೆ ಮಾಡಿರುವ ಜಿಂಬಾಬ್ವೆ ನಾಯಕರು ಇನ್ನಾದರೂ ಒಳ್ಳೇ ಬುದ್ಧಿಯಿಂದ ನಡೆದುಕೊಳ್ಳುವಂತಾಗಲಿ ಅನ್ನುವ ಆಶಯ ಒಳಗೊಳಗೇ ಈ ಯುಗಾದಿಯಂದು ನನಗೆ.

Rating
No votes yet

Comments