ಜೀಟಾಕ್ ಗೆಳತಿ : ಬದುಕಿ ಬಂದಾಗ - ಭಾಗ ೧೦

ಜೀಟಾಕ್ ಗೆಳತಿ : ಬದುಕಿ ಬಂದಾಗ - ಭಾಗ ೧೦

ಜೀಟಾಕ್ ಗೆಳತಿ : ಬದುಕಿ ಬಂದಾಗ - ಭಾಗ ೯ ಲಿಂಕ್ ~ http://sampada.net/blog/%E0%B2%9C%E0%B3%80%E0%B2%9F%E0%B2%BE%E0%B2%95%E0%B3%8D-%E0%B2%97%E0%B3%86%E0%B2%B3%E0%B2%A4%E0%B2%BF-%E0%B2%AC%E0%B2%A6%E0%B3%81%E0%B2%95%E0%B2%BF-%E0%B2%AC%E0%B2%82%E0%B2%A6%E0%B2%BE%E0%B2%97-%E0%B2%AD%E0%B2%BE%E0%B2%97-%E0%B3%AF/12-12-2012/39242

ಜೀಟಾಕ್ ಗೆಳತಿ : ಬದುಕಿ ಬಂದಾಗ - ಭಾಗ ೮ ಲಿಂಕ್ ~ http://sampada.net/b...

ಜೀಟಾಕ್ ಗೆಳತಿ : ಬದುಕಿ ಬಂದಾಗ - ಭಾಗ ೭ ಲಿಂಕ್ ~ http://sampada.net/b...

ಜೀಟಾಕ್ ಗೆಳತಿ : ಬದುಕಿ ಬಂದಾಗ - ಭಾಗ ೬ ಲಿಂಕ್ ~ http://sampada.net/b...

ಜೀಟಾಕ್ ಗೆಳತಿ : ಬದುಕಿ ಬಂದಾಗ - ಭಾಗ ೫ ಲಿಂಕ್ ~ http://sampada.net/b...

ಜೀಟಾಕ್ ಗೆಳತಿ : ಬದುಕಿ ಬಂದಾಗ - ಭಾಗ ೪ ಲಿಂಕ್ ~ http://sampada.net/b...

ಜೀಟಾಕ್ ಗೆಳತಿ : ಬದುಕಿ ಬಂದಾಗ - ಭಾಗ ೩ ಲಿಂಕ್ ~ http://sampada.net/b...

ಜೀಟಾಕ್ ಗೆಳತಿ : ಬದುಕಿ ಬಂದಾಗ - ಭಾಗ ೨ ಲಿಂಕ್ ~ http://sampada.net/b...

ಜೀಟಾಕ್ ಗೆಳತಿ : ಬದುಕಿ ಬಂದಾಗ - ಭಾಗ ೧ ಲಿಂಕ್ ~ http://sampada.net/b...

 

 

ಪ್ರಿಯಾಳಿಗೆ ಕ್ಯಾನ್ಸರ್ ಖಾಯಿಲೆಯಿದೆ ಎಂದು ಕೇಳಿದ ಕ್ಷಣದಿಂದ ನನ್ನನ್ನು ಪಾಪಪ್ರಜ್ಞೆ ಕಾಡಲು ಶುರುಮಾಡಿತ್ತು. ಎರಡು ಏಟು ಹೊಡೆದುಬಿಟ್ಟರೂ ತಡೆದುಕೊಂಡು ಬಿಡಬಹುದು ಆದರೆ ಮನಸ್ಸಿಗಾದ ಪೆಟ್ಟನ್ನು ವಾಸಿಮಾಡಲು ಬಹಳ ಕಾಲ ಬೇಕು. ಪ್ರಿಯಾಳ ಮನಸಿಗೆ ನಾನು ಪೆಟ್ಟು ಮಾಡಿದ್ದೆ... ಆ ಪೆಟ್ಟನ್ನು ಗುಣಪಡಿಸಲು ನನ್ನಲ್ಲಿ ಸಮಯಾವಕಾಶ ಇದ್ದರೂ ಪ್ರಿಯಾಳಿಗೆ ಇರಲ್ಲಿಲ್ಲ. ಅಂದರೆ ಅವಳು ಸತ್ತೇ ಹೋಗುತ್ತಾಳ? ಅವಳು ಯಾವಾಗ ಸಾಯುತ್ತಳೆ? ಸಾಯುವ ಮುನ್ನ ನಾನು ಅವಳನ್ನು ನೋಡಬಹುದಾ? ಅವಳು ನಾನು ಮಾಡಿದ ಪೆಟ್ಟಿನಿಂದಲೇ ಸಾಯುತ್ತಾಳೆ. ಸತ್ತ ಮೇಲೆ ಅವಳು ನನ್ನನ್ನು ಕಾಡುವಳೇ? ಹೀಗೆ ಏನೋನೋ ಯೋಚಿಸುತ್ತಾ ಇಡಿ ರಾತ್ರಿ ಹೊರಳಾಡುತ್ತಿದ್ದೆ.

ಮಾರನೆ ದಿನದಿಂದ ಬೃಂದಾಳ  ಸೂಚನೆಯಂತೆ ಪ್ರಿಯ ಚಾಟಿಗೆ ಬಂದಾಗ ಹಾಗು ಕರೆ ಮಾಡಿದಾಗ, ಮೊದಲು ಅವಳ ಜೊತೆ ಹೇಗೆ ಮಾತಾಡುತ್ತಿದ್ದೇನೋ ಅದೇ ರೀತಿ ಮಾತಾಡುತ್ತಿದ್ದೆ. ಯಾಕೆಂದರೆ ಪ್ರಿಯಾಳಿಗೆ ತನಗೆ ಕ್ಯಾನ್ಸರ್ ಖಾಯಿಲೆಯಿರುವುದು ನನಗೆ ತಿಳಿಸಲು ಇಷ್ಟವಿರಲ್ಲಿಲ್ಲ. ಈಗ ಮೊದಲಿನಂತೆ ಅವಳು ಗಂಟಾನುಗಂಟೆ ಮಾತಾಡಲು ಸಾಧ್ಯವಾಗುತ್ತಿರಲ್ಲಿಲ್ಲ. ಕೆಮ್ಮು ಬರುತ್ತಿತ್ತು. ತುಂಬಾ ಹೊತ್ತು ಕೂರಲು ಸಾಧ್ಯವಾಗುತ್ತಿರಲ್ಲಿಲ್ಲ. ಆಗೆಲ್ಲ ಅವಳು ಏನೋ ಕುಂಟು ನೆಪ ಹೇಳಿ ಆಮೇಲೆ ಫೋನ್ ಮಾಡ್ತೀನಿ ಅಂತ ಹೇಳುತ್ತಿದ್ದಳೆ ವಿನಃ ತಾನು ನರಳುತ್ತಿರುವುದನ್ನು ನನಗೆ ತಿಳಿಸುತ್ತಿರಲ್ಲಿಲ್ಲ. ನಾನು ಬಂದು ನೋಡುತ್ತೆನೆಂದರೂ ಪ್ರಿಯ ಒಪ್ಪಲ್ಲಿಲ್ಲ ಮತ್ತು ಎಂದಿಗೂ ಪ್ರಿಯಳನ್ನು ಯಾವ ಆಸ್ಪತ್ರೆಯಲ್ಲಿ ಸೇರಿಸಿದ್ದಾರೆ ಎಂಬುದನ್ನು ಬೃಂದಾ ನನ್ನ ಬಳಿ ಹೇಳಲೇ ಇಲ್ಲ.

ಇಷ್ಟೆಲ್ಲಾ ಆದರೂ ನನ್ನ ಮನಸಿಗೊಂದು ಸಮಾಧಾನವಿತ್ತು. ಅದು ಪ್ರಿಯಾಳ ಅಮ್ಮ ಹೇಳಿದ್ದ ಮಾತಿನಿಂದ. ಸಾಯುತ್ತಿದ್ದ ಅವಳನ್ನು ಇನ್ನು ಸ್ವಲ್ಪ ಕಾಲ ನಮ್ಮಲ್ಲಿ ಉಳಿಸಿಕೊಟ್ಟ ಪುಣ್ಯಾತ್ಮ ನೀನು ... ಇಷ್ಟೊತ್ತಿಗಾಗಲೇ ಸತ್ತಿರಬೇಕಿದ್ದ ಪ್ರಿಯ ಇನ್ನು ಬದುಕಿದ್ದಾಳೆಂದರೆ ಅದು ನಾನಾಡುತ್ತಿದ್ದ ಮಾತಿನಿಂದಲೇ. ಅಷ್ಟು ಸಾಕು. ಎಷ್ಟೋ ವರ್ಷದ ಕೆಳಗೆ ನನ್ನ ಮಾವನೊಬ್ಬರ ಮನೆಯಲ್ಲಿ ದೂರವಾಣಿ ಕರೆ ಸ್ವೀಕರಿಸಿ, ಸರಿಯಾಗಿ ಮಾತಾಡದೆ, ಅವರಿಗೆ ಲೋನ್ ಸಿಗದ್ದಿದ್ದಕ್ಕೆ ನಾನು ಸರಿಯಾಗಿ ಮಾತಾಡದ್ದಿದ್ದೆ ಕಾರಣ ಎಂಬ ಅಪವಾದ ಹೊತ್ತಿದ್ದ ನನಗೆ ಇಂದು ಸಮಾಧಾನವಾಗಿತ್ತು. ಅಂದು ನಾನು 'ಅವರು ಮನೆಯಲ್ಲಿ ಇಲ್ಲ' ಎಂದಷ್ಟೇ ಹೇಳಿದ್ದೆ. ಅದು ಹೇಗೆ ಅವರಿಗೆ ಲೋನ್ ಸಿಗದಂತೆ ಮಾಡಿತ್ತೋ? ನನಗೆ ಇಂದಿಗೂ ಅರ್ಥವಾಗಿಲ್ಲ. ಆದರೆ ಆ ಅಪವಾದ ಮಾತ್ರ ಇಂದಿಗೂ ನನ್ನ ಮೇಲಿದೆ. ನನ್ನ ಮಾತಿನಿಂದ ಒಬ್ಬರಿಗೆ ಲೋನ್ ಸಿಕ್ಕದೆ ಇರಬಹುದೇನೋ? ಆದರೆ ಸಾಯುತ್ತಿದ್ದವರನ್ನು ಅಲ್ಪ ದಿನದ ಮಟ್ಟಿಗೆ ಬದುಕಿಸುವ ಶಕ್ತಿಯಂತೂ ಇದೆ ಎಂಬುದು ಸಾಬೀತಾಗಿತ್ತು.

ಇದಾದ ಮೇಲೆ ಪ್ರಿಯ ೩-೪ ದಿನ ನನ್ನನ್ನು ಸಂಪರ್ಕಿಸಲೇ ಇಲ್ಲ. ಕೆಲಸದ ಒತ್ತಡದಲ್ಲಿ ನಾನು ಅವಳಿಗೆ ಕರೆ ಮಾಡುವ ಗೋಜಿಗೆ ಹೋಗಲ್ಲಿಲ್ಲ. ಅವತ್ತೊಂದು ದಿನ ಮಧ್ಯಾನ್ಹ ಬೃಂದಾ ಕರೆ ಮಾಡಿ ಪ್ರಿಯ ಇನ್ನಿಲ್ಲ, ನಿನ್ನೆ ರಾತ್ರಿ ಹೋಗಿಬಿಟ್ಟಳಂತೆ.. ಬೇಗ ಹೊರಟು ಬಾ ಅಂದಳು. ಇದೇನೇ ಹೀಗ್ ಹೇಳ್ತಿದ್ಯ? ನೀನ್ ಇರ್ಲ್ಲಿಲ್ವ ಅಲ್ಲಿ? ಈಗ ಎಲ್ಲಿದ್ಯ? ಅಂತ ಕೇಳಿದೆ. ಇಲ್ಲ ಕಣೋ.. ನಾನು ೨ ದಿನದಿಂದ ಆಸ್ಪತ್ರೆಯಲ್ಲೇ ಇದ್ದೆ.  ನಿನ್ನೆ ರಾತ್ರಿ ೧೧ರ ಸುಮಾರಿಗೆ ಅಂಕಲ್ ಬಂದಿದ್ದರು. ಏನಮ್ಮ ೨ ದಿನದಿಂದ ಇಲ್ಲೇ ಇದ್ಯ, ಇವತ್ತು ನಾನು ಇರ್ತೀನಿ. ನೀನು ಮನೆಗೆ ಹೋಗು ಅಂದರು. ನಾನು ಹೋಗಲು ನಿರಾಕರಿಸಿ ಅಲ್ಲೇ ಕುಳಿತ್ತಿದ್ದೆ. ಅದೇ ವೇಳೆ ರಾತ್ರಿ ಪ್ರಿಯಳಿಗೆ ಎಂದು ಜ್ಯೂಸ್ ತಂದರು. ಅಂಕಲ್ ಹೊರಹೋಗಿ ಮತ್ತೊಂದು ಲೋಟ ಜ್ಯೂಸ್ ತಂದು ನನಗೆ ಬಲವಂತ ಮಾಡಿ ಕುಡಿಸಿದರು. ಜ್ಯೂಸ್ ಕುಡಿದಾದ ಮೇಲೆ ನನಗೆ ನಿದ್ದೆ ಆವರಿಸುತ್ತಿತ್ತು. ಅದಕ್ಕೆ ಅಂಕಲ್ " ೨ ದಿನದಿಂದ ನಿದ್ದೆ ಮಾಡಿಲ್ಲ, ಹೋಗು ಹೋಗು ರೆಸ್ಟ್ ತೊಗೊಂಡು ನಾಳೆ ಬೆಳಗ್ಗೆ ಬಾ " ಎಂದು ಹೇಳಿ ನನ್ನನ್ನು ಬಲವಂತವಾಗಿ ಡ್ರೈವರ್ ರಂಗಣ್ಣನ ಜೊತೆ ಮಾಡಿ ಮನೆಗೆ ಕಳಿಸಿಬಿಟ್ಟರು.  ಈಗ ಅರ್ಧ ಗಂಟೆ ಹಿಂದಷ್ಟೇ ನನಗೆ ಎಚ್ಚರವಾಯಿತು. ಅಂಕಲ್ ಆಂಟಿ ಯಾರೂ ಫೋನ್ ರಿಸೀವ್ ಮಾಡಲ್ಲಿಲ್ಲ. ಡೈರೆಕ್ಟ್ ಆಸ್ಪತ್ರೆಗೆ ಹೋಗಿ ವಿಚಾರಿಸಿದೆ. ಆಗ ಡಾಕ್ಟರ್ ಹೇಳಿದರು. ನಿನ್ನೆ ರಾತ್ರಿನೇ ಬಾಡಿ ತೊಗೊಂಡುಹೋದರು ಅಂತ. ಬೇಗ ಬಾ.. ನಾನು ಅವರ ಮನೆಗೆ ಹೋಗಿರ್ತೀನಿ. ರೂಟ್ ಸರಿಯಾಗಿ ಗೊತ್ತಾಗದ್ದಿದ್ದರೆ ಕರೆ ಮಾಡು ಎಂದು ಪ್ರಿಯಳ ಮನೆಯ ಅಡ್ರೆಸ್ಸ್ ಕೊಟ್ಟಳು.

ನಾನು ನಮ್ಮ ಮ್ಯಾನೇಜರ್ ಗೆ ವಿಷಯ ತಿಳಿಸಿ ಅರ್ಧ ದಿನ ರಜೆ ಪಡೆದು ಪಾರ್ಕಿಂಗ್ ಕಡೆ ಧಾವಿಸುತ್ತಿರುವಾಗಲೇ ಬೃಂದಾ ಮತ್ತೆ ಕರೆ ಮಾಡಿದಳು. ಆಗಲೇ ಬಾಡಿ ತೆಗೆದುಬಿಟ್ಟಿದ್ದಾರೆ ಮನೆಯಲ್ಲಿ ಯಾರೂ ಇಲ್ಲ. ಅರ್ಧ ಗಂಟೆ ಆಯ್ತಂತೆ ಸ್ಮಶಾನದ ಕಡೆ ಹೊರಟು, ಪಕ್ಕದ ಮನೆಯವರು ಹೇಳಿದರು.. ನೀನು ಡೈರೆಕ್ಟ್ ಆಗಿ ಸ್ಮಶಾನಕ್ಕೆ ಬಾ... ಹುಳಿಮಾವು ಗೇಟ್ ಇಂದ ರಾಜಾಜಿ ನಗರದ ಸ್ಮಶಾನಕ್ಕೆ ಹೋಗಲು ಏನಿಲ್ಲವೆಂದರೂ ೯೦ ನಿಮಿಷ ಬೇಕು. ಅಷ್ಟರವರೆಗೆ ಅವರು ಕಾಯುತ್ತಾರ?  ಏನು ಮಾಡುವುದು ಎಂದು ಯೋಚಿಸುತ್ತಾ ಗಾಡಿ ತೆಗೆದೆ. ನಾನಿನ್ನು ಜೆ ಪಿ ನಗರದ ಹತ್ತಿರ ಬರುತ್ತಿದ್ದೆ. ಬೃಂದಾ ಮತ್ತೆ ಕರೆ ಮಾಡಿದ್ದಳು. ಜೋರಾಗಿ ಅಳುತ್ತಿದ್ದಳು. ನೋಡೋ ಹೇಗ್ ಮಾಡ್ಬಿಟ್ರು... ನಾನ್ ಸ್ಮಶಾನದ ಹತ್ತಿರ ಹೋದಾಗ ಅವರುಗಳು ಆಗಲೇ ವಾಪಸ್ಸಾಗುತ್ತಿದ್ದರು. ನನ್ನ ಪ್ರಿಯಳನ್ನು ನನಗೂ ನೋಡಲು ಆಗಲ್ಲಿಲ್ಲ. ಮಣ್ಣು ಮಾಡಿಬಿಟ್ಟಿದ್ದರು.. ಅವರಿಗೆ ಅಷ್ಟ್ ಅರ್ಜೆಂಟ್ ಏನಾಗಿತ್ತು ಗೊತ್ತಾಗ್ತಿಲ್ಲ... ಆಂಟಿ ನನ್ನನ್ನು ನೋಡಿದ ಕೂಡಲೇ ಬೃಂದಾ ಯಾಕಮ್ಮ ಇಷ್ಟ್ ಲೇಟ್ ಮಾಡಿದೆ. ನೀನ್ ಬರ್ತ್ಯ ಅಂತ ತುಂಬಾ ಕಾದೆವು. ನಿನಗೆ ಎಷ್ಟೋ ಸಲಿ ಕರೆ ಮಾಡಿದರೂ ನೀನು ತೆಗೆಯಲೇ ಇಲ್ಲ. ನಿನ್ನ ಜೊತೆ ಪ್ರಿಯ ಇಲ್ಲದಿರುವುದನ್ನು ನನ್ನಿಂದ ನೋಡಲು ಸಾಧ್ಯವಿಲ್ಲ. ದಯವಿಟ್ಟು ಹೊರಟುಹೋಗಮ್ಮ .. ಈಗ ನಮ್ಮ ಜೊತೆ ಬರಬೇಡ ಅಂತ ನನ್ನನ್ನು ವಾಪಸ್ ಕಳಿಸಿಬಿಟ್ಟರು. ಅಲ್ಲಿ ಏನ್ ನಡಿತಿದೆ ಅಂತಾನೆ ಅರ್ಥ ಆಗ್ತಿಲ್ಲ. ಬೃಂದಾ ಇನ್ನು ಅಳುತ್ತಲೇ ಇದ್ದಳು.

ನಾನು ಇನ್ನು ಅಲ್ಲಿಗೆ ಹೋಗಿ ಏನು ಮಾಡೋದು? ಅವರೇನೋ ನನ್ನನ್ನು ನೋಡಿರಬಹುದು ಅದು ಫೋಟೋದಲ್ಲಿ .. ಆದರೆ ನಾನು ಅವರ್ಯಾರನ್ನು ನೋಡಿಲ್ಲ.. ಅದು ಅಲ್ಲದೆ ಬೃಂದಾನು ಈಗ ಬರಲು ಒಪ್ಪಲ್ಲ. ಏನು ಮಾಡೋದು ಎಂದು ಯೋಚಿಸುತ್ತಾ ಮನೆಗೆ ಬಂದೆ. ನಾನು ಬೇಗ ಬಂದಿದ್ದನ್ನು ಗಮನಿಸಿದ ಸಂಯುಕ್ತ ನನ್ನ ಹಿಂದೆಯೇ ಓಡಿಬಂದಳು. ನಾನು ಸಪ್ಪಗಿರುವುದನ್ನು ನೋಡಿ ಅನ್ನೋನ್ ಕೈ ಕೊಟ್ಟಳಾ? ಎಂದು ಕೇಳಿದಳು. ಅದಕ್ಕೆ ನಾನು ಕೈ ಕೊಟ್ಟಿದ್ದರೆ ಸಹಿಸಬಹುದಿತ್ತು ಬಿಟ್ಟೆ ಹೋದಳು ಎನ್ನುತ್ತಾ ಬಿಕ್ಕುತ್ತಿದ್ದೆ. ಸೀದಾ ಅಡುಗೆ ಮನೆಗೆ ಹೋಗಿ ಒಂದು ಲೋಟ ನೀರು ತಂದು ಕೊಟ್ಟ ಸಂಯುಕ್ತ, ಏನಾಯ್ತೋ? ಬಾ ಫಸ್ಟ್ ಕೂತ್ಕೋ ಬಾ ಇಲ್ಲಿ ಎಂದು ಈಜಿ ಚೇರ್ ಅನ್ನು ಬಿಡಿಸಿದಳು. ನಾನು ಕೂಡುತ್ತಿದ್ದಂತೆ ಸಂಯುಕ್ತ ನನ್ನ ಪಕ್ಕ ಕೂತು ತಲೆ ಕೂದಲನ್ನು ನೇವರಿಸುತ್ತಾ ಈಗ ಹೇಳು? ಯಾಕೆ ಒಂತರ ಸಪ್ಪುಗಿದ್ಯ? ಏನಾಯ್ತು? ಅಂತ.

ನಾನು ಹೇಳುವವರೆಗೂ ಇವಳು ಬಿಡುವಳಲ್ಲ ಎಂದು ಖಾತ್ರಿಯಾಯಿತು. ಅದೂ ಅಲ್ಲದೆ ದುಃಖವನ್ನು ಮತ್ತೊಬ್ಬರ ಬಳಿ ಹೇಳಿದರೆ ನನಗೂ ಕೊಂಚ ಸಮಾಧಾನ ಆಗುತ್ತೆ ಅಂತನಿಸಿ ಸಂಯುಕ್ತಳಿಗೆ ನಡೆದದ್ದೆಲ್ಲವನ್ನು ಹೇಳಿದೆ. ಕೊನೆ ಕೊನೆಗೆ ಛೆ ಪಾಪ ಆ ಹುಡುಗಿಗೆ ಹೀಗಾಗಬಾರದಿತ್ತು ಎಂದು ಸಂಯುಕ್ತಳೂ ಅಳಲು ಶುರುಮಾಡಿಬಿಟ್ಟಿದ್ದಳು .

ಸಂಯುಕ್ತಳ ಜಾಸ್ತಿಯಾದ ಒಡನಾಟದಿಂದ ಹಾಗು ಕೆಲಸದ ಒತ್ತಡದಿಂದ ೨-೩ ತಿಂಗಳಲ್ಲಿ ಪ್ರಿಯ ಹಾಗು ಬೃಂದಾ ಇಬ್ಬರನ್ನು ನಾನು ಮರೆತೇಬಿಟ್ಟೆ. ಎಲ್ಲೋ ಯಾವಾಗಲೋ ಒಮ್ಮೆ ನೆನಪಿಗೆ ಬಂದರೂ, ತಕ್ಷಣವೇ ಸಂಯುಕ್ತಳ ಬಳಿ ಓಡಿ ಬಿಡುತ್ತಿದ್ದೆ.

 

ಹೀಗೆ ೨ ವರ್ಷ ನೋಡ ನೋಡುತ್ತಿದ್ದಂತೆ ಕಳೆದುಹೋಗಿತ್ತು. ಅದೊಂದು ದಿನ ಇದೇ ಅನ್ನೋನ್ ನಂಬರಿಂದ ನನಗೆ ಕರೆ ಬಂದಿತು.

Rating
No votes yet