ಜ್ಞಾನೋದಯ!
ಕಣ್ಣುಗಳಿರುವುದು
ಓದಲು , ಟೀವೀ , ಇಂಟರ್ನೆಟ್ ನೋಡಲು;
ಕಾಲುಗಳಿರೋದು
ನಡೆಯಲು , ಓಡಲು ;
ಕಚೇರಿ ಇರೋದು
ಕೆಲಸ ಮಾಡಲು ;
ತಲೆಯಿರೋದು
ನಿನ್ನೆ-ನಾಳೆಯ ಬಗೆಗೆ ಚಿಂತೆ ಮಾಡಲು -
ಅಂತ ತಿಳಿದಿದ್ದೆ .
ಕಣ್ಣುಗಳಿರೋದು ಸುತ್ತಣ
ಜಗವ ನೋಡಲು ಕೂಡ ;
ಕಾಲುಗಳಿರೋದು
ನಿಲ್ಲಲು , ಮಡಚಿ ಕೂತುಕೊಳ್ಳಲು ಕೂಡ ;
ಕಚೇರಿ ಇರೋದು
ಸಮಯ ಕಳೆಯಲು , ಜನರೊಡನೆ ಬೆರೆಯಲು ಕೂಡ ;
ತಲೆಯಿರೋದು
ಈ ಕ್ಷಣವ ಚೆನ್ನಾಗಿ ಬದುಕಲು ಅನುವಾಗಿಸಲು ಕೂಡ.
ಅಂತ ತಿಳಿಯಿತು ಈಚೆಗೆ -
ನಿನ್ನೆಗೆ ನನಗೆ ನಲವತ್ತೇಳು .
Rating
Comments
ಉ: ಜ್ಞಾನೋದಯ!
ಉ: ಜ್ಞಾನೋದಯ!
ಉ: ಜ್ಞಾನೋದಯ!
ಉ: ಜ್ಞಾನೋದಯ!
In reply to ಉ: ಜ್ಞಾನೋದಯ! by asuhegde
ಉ:ಈ ಸುದಿನ ನಿಮ್ಮ ಬಾಳಲ್ಲಿ ಇನ್ನೂ ನೂರಾರು ಬಾರಿ ಬರಲಿ.
In reply to ಉ: ಜ್ಞಾನೋದಯ! by asuhegde
ಉ: ಜ್ಞಾನೋದಯ!
ಉ: ಜ್ಞಾನೋದಯ!
ಉ: ಜ್ಞಾನೋದಯ!
ಉ: ಜ್ಞಾನೋದಯ!
ಶ್ರೀಕಾಂತ್ ಮಿಶ್ರಿಕೋಟಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು