ಜ್ಞಾನೋದಯ!

ಜ್ಞಾನೋದಯ!

ಕಣ್ಣುಗಳಿರುವುದು   
ಓದಲು  , ಟೀವೀ  , ಇಂಟರ್ನೆಟ್ ನೋಡಲು;

ಕಾಲುಗಳಿರೋದು  
ನಡೆಯಲು  , ಓಡಲು      ;

ಕಚೇರಿ  ಇರೋದು  
ಕೆಲಸ ಮಾಡಲು ;

ತಲೆಯಿರೋದು  
ನಿನ್ನೆ-ನಾಳೆಯ    ಬಗೆಗೆ  ಚಿಂತೆ  ಮಾಡಲು   -

ಅಂತ    ತಿಳಿದಿದ್ದೆ .

ಕಣ್ಣುಗಳಿರೋದು     ಸುತ್ತಣ  
ಜಗವ ನೋಡಲು  ಕೂಡ ;

ಕಾಲುಗಳಿರೋದು   
ನಿಲ್ಲಲು   , ಮಡಚಿ  ಕೂತುಕೊಳ್ಳಲು  ಕೂಡ ;

ಕಚೇರಿ ಇರೋದು  
ಸಮಯ ಕಳೆಯಲು , ಜನರೊಡನೆ ಬೆರೆಯಲು ಕೂಡ ;

ತಲೆಯಿರೋದು   
ಈ  ಕ್ಷಣವ  ಚೆನ್ನಾಗಿ  ಬದುಕಲು  ಅನುವಾಗಿಸಲು   ಕೂಡ.

ಅಂತ  ತಿಳಿಯಿತು  ಈಚೆಗೆ  -
ನಿನ್ನೆಗೆ   ನನಗೆ  ನಲವತ್ತೇಳು .

Rating
No votes yet

Comments