ದೂರದ ಕರೆ
ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನನ್ನ ಪ್ರಥಮ ಕವನವನ್ನು ಸಂಪದ ಓದುಗರಿಗೆ ಅರ್ಪಿಸುತ್ತಿದ್ದೇನೆ. ನಿಮ್ಮ ಅಭಿಪ್ರಾಯ ಮತ್ತು ಸಲಹೆಗಳನ್ನು ನೀಡಿ ಪ್ರೋತ್ಸಾಹಿಸುತ್ತೀರೆಂಬ ನಂಬಿಕೆಯಿಂದ,
"ದೂರದ ಕರೆ"
ಎಲ್ಲೋ ಕಾಣದ ಕೈಯ ಕರೆಗೆ
ಅಮ್ಮನ ಮಡಿಲ ಬಿಡುವೆಯಾ
ತಾಯ್ನಾಡ ಮಣ್ಣಿನ ಸುಮದ
ಗಂಧವನ್ನು ಮರೆವೆಯಾ
ನಿನ್ನ ಮನದಿ ನಾಡ ಪ್ರೀತಿ
ತೊಟ ತೊಟನೆ ಸೋರಲು
ಹೇ! ಹುಂಬ ಮನದ ತುಂಬ
ಕತ್ತಲದು ಸುಳಿವುದು
ಎಷ್ಟು ಹೊತ್ತು ಕತ್ತಲಲಿ
ಕುಳಿತು ಬೆಳಕ ಹುಡುಕುವೆ
ಹಾಗೆ ಕಣ್ಣ ಮುಚ್ಚಿ ಒಮ್ಮೆ
ಕನಸನೊಂದು ಕಾಣದೆ
ಬಾಳ ಪಥದಿ ಎಷ್ಟೇ ದೂರ
ವೇಗವಾಗಿ ಹೋದರೂ
ಒಮ್ಮೆ ತಿರುಗಿ ನೋಡು ಹಿಂದೆ
ಬಂದ ದಾರಿ ಮರೆಯದೇ
ನೀನು ಎದ್ದು ಬಿದ್ದು ಒದ್ದು
ಹೋದ ಮಣ್ಣು ನಿನ್ನ ಕರೆದಿದೆ
ಅವಳ ಕೂಗು ಕೇಳಿ ಇನ್ನೂ
ನಿನ್ನ ಮನಸು ಕರಗದೇ
ಹೊತ್ತಿಸು ಪ್ರೀತಿ ಸ್ನೇಹ ದೀಪ
ಮನದ ತಮವು ಅಡಗಲಿ
ಜ್ಞಾನ ಜ್ಯೋತಿ ನಿನ್ನ ಮನದಿ
ಎಂದೆಂದೂ ಬೆಳಗಲಿ
ಎದ್ದು ನಿನ್ನ ಮೈಯ್ಯ ಕೊಡವಿ
ಒಮ್ಮೆ ಹಿಂದೆ ತಿರುಗಿ ಬಾ
ತಾಯಿಗಾಗಿ ಒಂದು ಅಚ್ಹ ಹಸಿರು
ಸೀರೆ ನೀನು ತಾ
ತಾಯಿ ಕೋಪ ಸ್ನೇಹ ರೂಪ
ಅದನು ನೀನು ಅರಿತುಕೋ
ಅವಳಿಗಸಿರು ಸೀರೆ ಹೊದಿಸಿ
ತಾಯಿ ಪ್ರೀತಿ ಉಳಿಸಿಕೋ
ನಿಮ್ಮ,
ವಿನಯ್ ಸತೀಶ್ ಪಟೇಲ್
Rating
Comments
ಉ: ದೂರದ ಕರೆ
In reply to ಉ: ದೂರದ ಕರೆ by sunilkgb
ಉ: ದೂರದ ಕರೆ
ಉ: ದೂರದ ಕರೆ
In reply to ಉ: ದೂರದ ಕರೆ by kamath_kumble
ಉ: ದೂರದ ಕರೆ