ದೂರದ ಬೆಟ್ಟ

ದೂರದ ಬೆಟ್ಟ

ನಾನು ೧೩ ವರ್ಷದಿಂದ ಪರ ದೇಶದಲ್ಲಿದ್ದು ಸಾಕಾಗಿದೆ. ವಾಪಸ್ಸು ಹೋಗುವ ಹಾಗಿಲ್ಲ. ಇಲ್ಲಿಗೆ ಬಂದು degree ಗಳ ಪಡೆದು, ಇಲ್ಲಿಯವರ ಜೊತೆ compete ಮಾಡಿ ಕೆಲಸದಲ್ಲಿ ಮುಂದೆ ಬರಲು ಪ್ರಯತ್ನಿಸುತ್ತಾ ತಾಯಿಯೂ ಆಗಿ ನನ್ನ ಮಗುವನ್ನು ನಾನೆ ಬೆಳೆಸಿ... ರಾಮ ರಾಮ ..
ಈ ವನವಾಸ ಸಾಕಪ್ಪಾ.
ಆದರೆ ಇಲ್ಲಿಗೆ ವಿಸಿಟ್ ಗೆ ಎಂದು ಬರುವ maaata ಪಿತೃ ಗಳ ಗಳ ಲೇಖನ ನೋಡಿ, ಅಮೇರಿಕಾ ಸ್ವರ್ಗ ಎನ್ನುವಂತೆ ಬರಯುತ್ತಾರೆ.

ನಾನು ವಯಸ್ಸಯದ ಮೇಲೆ ವಿಸಿಟಿಂಗ್ ವೀಸಾ ದಲ್ಲಿ ಬಂದಿದ್ರೆ ಹಾಗೆ ಆಡುತ್ತಿದ್ದೆ ನೇನೂ, ಅಮೇರಿಕಾ ಸ್ವರ್ಗ ಎನ್ನುವಂತೆ. ಹಾಗೆ ಬರೆಯುವವರಿಗೆಲ್ಲ ನನ್ನ ಮನವಿ ' ದಯವಿಟ್ಟು ಸ್ಟುಡೆಂಟ್ ವೀಸಾ ದಲ್ಲಿ ಬಂದು, ಇಲ್ಲಿಯ ಡಾಕ್ಟರೇಟ್ ಪಡೆದು, ಇಲ್ಲಿ ಕಷ್ಟಪಟ್ಟು ಕೆಲಸದಲ್ಲಿ ಪ್ರಗತಿ ಗಳಿಸಿ, ಮಕ್ಕಳ್ಳನ್ನು ಸಾಕಿ then even if you try you will not be able to go nuts about this country.

ನನಗೂ ಅಮೆರಿಕಾಗೆ ಬರಲು ಫ್ರೀ ಟಿಕೆಟ್, ಫ್ರೀ ಬೋಅದ್ಗಿಂಗ್, ಸುತ್ತಾಡಲು ಫ್ರೀ ದುಡ್ಡು ಕೊಟ್ಟಿದ್ದಾರೆ ನಾನು ಅಮೇರಿಕಾ ಸ್ವರ್ಗ ಎಂದು ಬಣ್ಣನೆ ಮಾಡುತ್ತಿದ್ದೆ.
ಇಲ್ಲಿ ಬಂದು ಹರ ಸಾಹಸ ಮಾಡಿದ್ದ ಕರ್ಮಕ್ಕೆ ಈಗ ಇಲ್ಲೇ ಜೀವಿಸಬೇಕು.
ಇಲ್ಲಿ ಬಂದು ಡಿಗ್ರಿ ಮಾಡದೆ ಇಲ್ಲೇ ಕೆಲಸಕ್ಕೆ ಬರುವುದು ಒಳ್ಳೆಯದು. ದೊಡ್ಡ ಕುಟುಂಬ ಇದ್ದರೆ ಮಕ್ಕಳನ್ನು ಬೆಳೆಸಲು ಚೆನ್ನ. ಆದರು ಇಲ್ಲಿನ ರೀತಿ ರಿವಾಜು ನನಗೆ ಅಷ್ಟೇನೂ ಇಷ್ಟವಾಗುವುದಿಲ್ಲ.
ನನ್ನ ಮಗುವಿಗೋಸ್ಕರ ಇಲ್ಲೇ ಕೆಲಸ ಮಾಡಲೇಬೇಕು. ದೇವರ ದಯೆ ಯಿಂದ ಮಗು ನಮ್ಮ ಸಂಸ್ಕೃತಿ ಯಾ ಬಗ್ಗೆ ತಾನೆ ಚೆನ್ನಾಗಿ ಕಲಿತುಕೊಂಡು ಅರಿವು ಉಳ್ಳ ಮಗನಾಗಿ ಬೆಳೆಯುತ್ತಿದೆ. ದಿನಾಲು ಅಮ್ಮ ಪೂಜೆ ಮಾಡುವು dara ಫಲವೇನೋ?

Rating
No votes yet

Comments