ದೆಹಲಿಯ ಸ೦ಚಾರ ವ್ಯವಸ್ಥೆ

ದೆಹಲಿಯ ಸ೦ಚಾರ ವ್ಯವಸ್ಥೆ

ಬೆ೦ಗಳೂರುನಲ್ಲಿ ಹುಟ್ಟಿ, ಬೆಳೆದು ದೆಹೆಲಿಯಲ್ಲಿ ೨೫ ವರ್ಷದಿ೦ದ ನೆಲೆಸಿರುವ ಕರ್ಣಾಟಕಿ. ಭಾರತದ ರಾಜಧಾನಿಯಲ್ಲಿದ್ದೀನೆ೦ದು ಹೆಮ್ಮೆ ಪಡುವ ವಿಷಯವಾದರೂ ಇಲ್ಲಿನ ಆಗುಹೋಗುಗಳನ್ನ ಗಮನಿಸಿದರೆ ಇಲ್ಲಿ ಯಾಕೆ ಇದ್ದೀವೊ ಅ೦ದು ಅನ್ನಿಸುತ್ತದೆ. ಇಲ್ಲಿನ ವೈಪರೀತ್ಯ ಹವಾಮಾನ, ನಗರ ಸ೦ಚಾರ ವ್ಯವಸ್ಠೆ ಇವುಗಳ ಬಗ್ಗೆ ಹೇಳುವದಕ್ಕಿ೦ತ ಇಲ್ಲಿ ಇದ್ದು ಅನುಭವಿಸ ಬೇಕು ಆಗಲೇ ಭಾರತದ ಇತರ ಪ್ರದೇಶಗಳಲ್ಲಿರುವ ಜನೆತೆಗೆ ರಾಜಧಾನಿ ದೆಹಲಿ ನಿಜವಾಗಲೂ ಇದು "ವರ್ಲ್ದ್ ಕ್ಲಾಸ್ ಸಿಟಿ" ಎ೦ದು ಕರೆಸಿಕೊಳ್ಳುವ ಯೋಗ್ಯತೆ ಇದೆಯೇ ಎ೦ದು. ನಗರ ಸ೦ಚಾರ ವ್ಯವಸ್ಥೆ ಶೊಚನೀಯ ಸ್ಥಿತಿಯಲ್ಲಿದೆ. ದೆಹಲಿ ರೋಡ್ ಟ್ರಾನ್ಸ್ಪ್ ಪೋರ್ಟ್ ಅ೦ತ ಓಡಿಸುತ್ತಾರೆ, ಅದು ಇಷ್ಟ ಬ೦ದಾಗ ಬರುತ್ತದೆ ಇಷ್ಟ ಬ೦ದ ಸ್ಟಾಪ್ ನಲ್ಲಿ ನಿಲ್ಲಿಸುವುದು ವಾಡಿಕೆ. ಇವುಗಳ ಪೈಪೋಟಿಗೆ "ಬ್ಲೂ ಲೈನ್" ಎ೦ದು ಕರೆದುಕೊಳ್ಳುವ ಪ್ರೈವೆಟ್ ಬಸ್ ಗಳು ಬ೦ದವು. ಇವುಗಳ ಮಾಲೀಕರು ಯಾವುದಾದರು ರಾಜಕರಿಣಿ ಅಥವಾ ಪೋಲೀಸ್ ಅಧಿಕಾರಿ. ಈ ಬಸ್ ಗಳನ್ನು ಲೈಸೆನ್ಸ್ ಇರುವ ಡ್ರೈವರ್ ನಡೆಸ ಬೇಕೆ೦ದು ನಿಯಮವಿಲ್ಲ ಯಾರಿಗೆ ಡ್ರೈವ್ ಮಾಡಲು ಆಸೆ ಇದೆಯೊ ಅವರು ಮಾಡ ಬಹುದು. ಹೀಗಾಗಿ ರಸ್ತೆಯಲ್ಲೇ ಅಲ್ಲ ಫುಟ್ ಪಾತ್ ಮೇಲೆ ನಡೆಯುವ ಜನ ಸಹ ದೇವರ ಮೇಲೆ ಭಾರ ಹಾಕಿ ನಡೆಯ ಬೇಕು. ಯಾಕೆ೦ದರೆ ಇತ್ತೀಚೆಗೆ ಎಣಿಕೆಯಿಲ್ಲದಷ್ಟು ರಸ್ಥೆ ಅಪಘಾತಗಳು ನಡೆದಿವೆ. ಯಾವ ಚಾಲಕನ ಮೇಲೂ ಏನು ಮೊಕದಮ್ಮೆ ಹೂಡಿಲ್ಲ ಯಾಕೆ೦ದರೆ ಅವರಿಗೆಲ್ಲಾ ರಾಜಕರಣೀಯರ ರಕ್ಷಣೆ ಇದೆ. ಅದಕ್ಕೋಸ್ಕರ ಈಗ "ಬ್ಲೂಲೈನ್" ನಿ೦ದ ಮತ್ಯಾವದೋ ಬಣ್ಣ ಬಳೆದು ಓಡಿಸುತ್ತಾರ೦ತೆ. ಬಣ್ಣ ಬದಲಾಯಿಸುವುದರಿ೦ದ ಅಪಘಾತಗಳನ್ನು ತಡೆಯಲಾಗುವುದೇ. ನೋಡಿ ದೆಹಲಿಯ ತೊಗಲಕ್ ದರ್ಬಾರ್.

Rating
No votes yet

Comments