ದೇವರು- ಅದೊಂದು ಸಂಸ್ಕೃತಿ, ಸಂಸ್ಕೃತಿ ಪಲ್ಲಟ ನಿಲ್ಲಲಿ.

ದೇವರು- ಅದೊಂದು ಸಂಸ್ಕೃತಿ, ಸಂಸ್ಕೃತಿ ಪಲ್ಲಟ ನಿಲ್ಲಲಿ.

ಹಿನ್ನಲೆ..

 

ಕೊನೆ ವಾರ ಪೂರ್ತಿ ಊರಲ್ಲಿದ್ದೆ. ಹಾಗೇನೆ ಮನೆಗೆ ಕೆಲವೊಂದು ಸಾಮಾನು ತರಬೇಕಿತ್ತು. ಅಜ್ಜಂಪುರಕ್ಕೆ ಹೋದೆ. ಅಜ್ಜಂಪುರ ನಮಗೆ ೨೫-೩೦ ನಿಮಿಶದ ದೂರ.

 

ಈಗ ಇರೋ ಊರಲ್ಲಿ ಸೊಳ್ಳೆ ಕಾಟ ಸಿಕ್ಕಾಬಟ್ಟೆ. ಸೊಳ್ಳೆ ಪರದೆ ಇರದಿದ್ರೆ ಬೆಳಿಗ್ಗೆ ಅಷ್ಟೊತ್ತಿಗೆ ಅರ್ಧ ಲೀಟರ್ ರಕ್ತ ಖಾಲಿ ಯಾಗಿರುತ್ತೆ ;) . ಸೊಳ್ಳೆ ಪರದೆಗೆ ಬಾಗಿಲು ಇದ್ದರೇನೆ ಚೆಂದ. ರೆಡಿ ಮೇಡ್ ಸಿಗುವುದು ಕಷ್ಟವಾದ್ದರಿಂದ ಅಜ್ಜಂಪುರದಲ್ಲಿ ಒಬ್ಬ ಅಂಗಡಿಯವನಿಗೆ ಸೊಳ್ಳೆ ಪರದೆ ಹೊಲಿಯಕ್ಕೆ ಕೋಟ್ಟಿದ್ದೆ. ರೆಡಿ ಆಗಿದೆ ಬಾ ಅಂತ ಅಂದ. ನಂಬಿಕೊಂಡು ಸಂಜೆ ೫ ಗಂಟೆ ಸುಮಾರಿಗೆ ಹೋದೆ. ಹೋದರೆ ಆ ಸೊಳ್ಳೆ ಪರದೆಗೆ ಬಾಗಿಲು ಇರಲಿಲ್ಲ. ಯಾಕಣ್ಣ ಹಿಂಗ್ ಮಾಡಿದೆ ಅಂತ ಅಂದಿದ್ದಕ್ಕೆ ಇನ್ನೆರಡು ಗಂಟೆನಲ್ಲಿ ಮತ್ತೊಂದು ಹೊಲುಸ್ತೀನಿ ಸುತ್ತಾಡ್ಕೊಂದು ಬಾ ಅಂದ. ಇನ್ನೂ ಸಾಮನು ಕೊಂಡ್ಕೊಳ್ಳೋದು ಇತ್ತಾದ್ರೂ ಹೊತ್ಕೊಂಡು ಸುತ್ತಕ್ಕೆ ಇಶ್ಟ ಇಲ್ಲದ್ದರಿಂದ ಬರಿಗೈಯಲ್ಲಿ ಒಮ್ಮೆ ಅಜ್ಜಂಪುರ ಸುತ್ತೋಣ ಅಂತ ಹೊರಟೆ.

 

ಬಸ್ ಸ್ಟ್ಯಾಂಡ್ ನಿಂದ ರೈಲ್ವೆ ಸ್ಟೇಶನ್ ಕಡೆ ಹೊರಟೆ. ದಾರಿನಲ್ಲಿ ಬಲಗಡೆ ಶಿವಯೋಗಾಶ್ರಮ ಅಂತ ಬೋರ್ಡ್ ಕಾಣ್ತು. ಜೊತೆಗೆ ಭಗವದ್ಗೀತೆ ಶ್ಲೋಕಗಳೂ / ಅಹಂ ಬ್ರಹ್ಮಾಸ್ಮಿಯೆ ಮುಂತಾದ ವಾಕ್ಯಗಳನ್ನು ಅಲ್ಲಲ್ಲಿ ಕೆತ್ತಿದ್ದರಿಂದ , ಅದು ಶಂಕರಾಚಾರ್ಯ ಮತದ ಒಂದಾಶ್ರಮ ಅಂತ ನನ್ನ ಗಮನಕ್ಕೆ ಬಂತು.

 

ಸರಿ ಆ ತೋಟ್ದೊಳಕೆ ( ಪಕ್ಕದಲ್ಲಿ!) ಇಣುಕಿ ನೋಡಿದರೆ ಒಳಗೆ ಒಂದು ಜನರ ಗುಂಪು ನೆರೆದಿದೆ. ಮೈಕಿನಿಂದ ಅಸ್ಪಷ್ಟ ಮಾತುಗಳು ಕೇಳ್ತಾ ಇವೆ. ಏನೋ ಸ್ಪರ್ಧೆ ಇರುವಂತೆ ಕಾಣ್ತಾ ಇದೆ.ಅಲ್ಲಿ ಎತ್ತಿನ ಗಾಡಿ ಸ್ಪರ್ಧೆ ನಡೀತಾ ಇತ್ತು. ಯಾರ ಗಾಡಿ ಅತಿ ಕಡಿಮೆ ಸಮಯದಲ್ಲಿ ಕೊಟ್ಟಿರುವ ಗುರಿಯನ್ನು ಮುಟ್ಟುತ್ತೋ ಅಂತ. ಸ್ವಲ್ಪ ಹೊತ್ತು ನೋಡಿದೆ. ಹಾಗೇನೆ ಪಕ್ಕದವನತ್ರ ಕೇಳ್ದೆ .. ಏನ್ ಜಾತ್ರೆ? ಅಂತ. ಆತ ಕೇರಳಮ್ಮನ ಜಾತ್ರೆ ಅಂದ ... "ಕೇರಳಮ್ಮನ ಜಾತ್ರೆ" ಅಂತಾನೇ ನಂಗೆ ಕೇಳುಸ್ತು.

 

ಅಜ್ಜಂಪುರದಂತ ಅಪ್ಪಟ ಕನ್ನಡ ನಾಡಿನಲ್ಲಿ ಕೇರಳಮ್ಮ?!. ನನ್ನ ಸಂದೇಹವನ್ನು ಪರಿಹರಿಸಿಕೊಳ್ಳಲು ಮತೊಮ್ಮೆ ಕೇಳಿದೆ... ಆ ಗದ್ದಲದಲ್ಲಿ ನನಗೆ ಮತ್ತೂ ಕೇರಳಮ್ಮನ ಜಾತ್ರೆ ಅಂತಾನೆ ಕೇಳುಸ್ತು.

 

ಆ ಕೇರಳಮ್ಮನ ಗುಡಿಯನ್ನೊಮ್ಮೆ ನೋಡೆ ಬಿಡೋಣ ಅಂತ ಆ ಕಡೆ ಹೊರಟೆ. ದಾರಿಯಲ್ಲಿ ಒಂದು ಪೋಸ್ಟರ್ ಕಾಣ್ತು. ಅಲ್ಲಿ "ಕಿರಾಳಮ್ಮ" ಅನ್ನೋ ಪದ ಕಾಣ್ತು. ಅಲ್ಲೇ ಒಂದು ಟೀ ಅಂಗಡಿನಲ್ಲಿ ಟೀ ಕುಡೀತ ಅಲ್ಲಿನೊಬ್ಬರನ್ನ ಮಾತಿಗೆಳೆದೆ. ಕಿರಾಳಮ್ಮನ ದೇವಸ್ಥಾನದ ಇತಿಹಾಸದ ಬಗ್ಗೆ.

 

ವಿಷಯ ::

 

ಅವರು ಹೇಳಿದ್ದು... ಕಿರಾಳಮ್ಮ ಅಜ್ಜಂಪುರದ ಗ್ರಾಮ ದೇವತೆ. ಊರು ಹುಟ್ಟಿದಾಗಿಂದ ಆಕೆ ಅಲ್ಲಿ ನೆಲೆಸಿದ್ದಾಳೆ. ಮಾತು ಮುಂದುವರೆಯುತ್ತಾ ಆಕೆಯ ಬದಲಾದ ಹೆಸರಿನ ಕಡೆ ಹೊರಟಿತು. ಮೂಲ ಹೆಸರು ಕಿರಾಳಮ್ಮನೇ ಆದರೂ ನಡುವೆ ಆಕೆ ಕೆಲವೊಮ್ಮೆ ಕರಿಯಮ್ಮ ಮತ್ತು  ರಾಜ ರಾಜೇಶ್ವರಿ ಆಗಿ ಬದಲಾಗಿದ್ದಳಂತೆ. ಮತ್ತೆ ಯಾಕೋ ಸರಿಯಾಗದೆ ಮೂಲ ಕಿರಾಳಮ್ಮನ ರೂಪದಲ್ಲೇ ಪೂಜೆಗೊಳ್ಳುತ್ತಿದ್ದಾಳೆ.ನಡುವೆ ಬೆಂಗಳೂರಿನಿಂದ ಯಾರೊ ಬ್ರಾಹ್ಮಣ ಅರ್ಚಕರನ್ನು ಕರೆಸಿ ಅಲ್ಲಿನ ಮೂಲ ಕಿರಾಳಮ್ಮನ ಮೂರ್ತಿಯನ್ನ್ನು ತೆಗೆಸಿ ರಾಜ ರಾಜೇಶ್ವರಿಯನ್ನು ಸ್ತ್ಘಾಪಿಸಿದ್ದರಂತೆ ***. ಕಿರಾಳಮ್ಮನ ಹೆಸರು ಗ್ಲಾಮರಸ್ ಅಗಿರಲಿಲ್ಲ ಅಂತ ಕಾಣುತ್ತೆ?!... ಆ ಹೊಟ್ಟೆಪಾಡಿಗೆ ಪೂಜೆ ಮಾಡುವ ಈ ಅರ್ಚಕರಿಗೆ. ತನ್ನ ಸಂಪ್ರದಾಯದ ದೇವರಷ್ಟೆ ದೇವರು ಉಳಿದವು.. ಕ್ಷುದ್ರ ದೇವತೆಗಳು ಅಂತ ಯೋಚನೆ ಮಾಡುವ ಇಂತ ಅರ್ಚಕರು ಆದಷ್ಟು ಬೇಗೆ ತಮ್ಮ ಮೆಚುರಿಟಿ ಯನ್ನು ಕಂಡುಕೊಳ್ಳಲಿ.

 

***( ಮತ್ತೆ ಅದು "ಸರಿಯಾಗದೆ" ಅಹಿಂದ ಸಂಸ್ಕೃತಿ ಯನ್ನು ಪ್ರತಿನಿಧಿಸುವ ಬಾಡದ ಸ್ವಾಮಿಯೊಬ್ಬರಿಂದ (ಸಂದೇಹ ಈ ಹೆಸರಿನ ಬಗ್ಗೆ) ಕಿರಾಳಮ್ಮನನ್ನು ಮತ್ತೆ ಸ್ಥಾಪನೆ ಮಾಡಿದರಂತೆ. ಮತ್ತು ಅಲ್ಲಿ ಈಗ ಎಲ್ಲ ಸರಿಯಾಗಿದೆಯಂತೆ ).

 

ನಾಲ್ಕಕ್ಷರ ಸಂಸ್ಕೃತ ಕಲಿತ ಮಾತ್ರಕ್ಕೆ ದೊಡ್ದ ದೋಡ್ದ ಪೋಸ್ ಕೋಡುವ ಎದಭಿಡಂಗಿಗಳಿಗೆ ನನ್ನ ಮಾತು. ಕಿರಾಳಮ್ಮ ನಂತಹ ದೇವತೆ ಒಂದು ಜನಾಂಗದ ಸಂಸ್ಕೃತಿ. ಒಂದು ಸಂಸ್ಕೃತಿಯನ್ನು ಕಿತ್ತು ಹಾಕುವ, ರಾಜ ರಾಜೇಶ್ವರಿಯಂತ "ತನ್ನ" ಸಂಸ್ಕೃತಿಯ ದೇವಗಳ ಕೇಳಗೆ ಇಡುವ , ಕೀಳಾಗಿ ಕಾಣುವ ಕೀಳು ಮನಸ್ತಿತಿಯಿಂದ ಹೊರಬನ್ನಿ. ವಿವಿಧ ಸಂಸ್ಕೃತಿಗಳ ನಡುವಿನ ವ್ಯತ್ಯಾಸವನ್ನು ಅರ್ಥ ಮಾಡಿಕೊಳ್ಳಿ.

 

ನಮ್ಮ ದೇಶದ ಎಲ್ಲ ದೇವತೆಗಳಿಗೂ , ಸಂಸ್ಕೃತಿಗಳಿಗೂ ವೇದಗಳೇ , ವೈದಿಕತೆಯೇ ಮೂಲವಲ್ಲ. ನೀವೇನಾದರೂ ಹಾಗೆಂದು ಕೊಂಡಿದ್ದರೆ ನಿಮಗಿಂತ ಸಣ್ನಭಾವಿಯ ದೊಡ್ದ ಕಪ್ಪೆಗಳು ಬೇರಾರೂ ಇಲ್ಲ.

 

ನಮ್ಮಲ್ಲಿ ಆಗಮ ಸಂಸ್ಕೃತಿ ಇದೆ, ಜನಪದ ಸಂಸ್ಕೃತಿ ಇದೆ, ದಲಿತ ಸಂಸ್ಕೃತಿ ಇದೆ, ಬುಡಕಟ್ಟು ಸಂಸ್ಕೃತಿ ಇದೆ, ಇನ್ನೂ ಅನೇಕ ಅನೇಕವಿವೆ.. ಮತ್ತು ಇವುಗಳು ವೈದಿಕ ಸಂಸ್ಕೃತಿಗಿಂತ ತುಂಬ ಬಿನ್ನ. ವೈದಿಕತೆ ನಮ್ಮ ದೇಶದ ಸಂಸ್ಕೃತಿ ಯ ಒಂದು ಚಿಕ್ಕ ಭಾಗ ಅಷ್ಟೆ. ಅತಿ ವಿಜೃಂಬಣೆ ಸಲ್ಲದು. ವಿಕಿಪೀಡಿಯಾದಲ್ಲಂತೂ ಈ ವೈದಿಕ ದೃಶ್ಟಿಕೋನದಿಂದ ನೋಡಿದ ಹಿಂದೂ ಧರ್ಮಕ್ಕೆ ಬೆಲೆ. ಅಣ್ನಂದಿರಾ.. ಬೇರೆ ದೃಷ್ಟಿ ಕೋನಗಳೂ ಇವೆ ಅನ್ನುವುದನ್ನು ಕಣ್ಣು ಬಿಟ್ಟು ನೋಡಿ. ಪೊಳ್ಳು ಯಜಮಾನಿಕೆ ಬಿಟ್ಟು ಎಲ್ಲರಂತಿರಿ.

 

ವೀರಭದ್ರ ಮತ್ತು ದಕ್ಷಿಣಾ ಮೂರ್ತಿ ಇಬ್ಬರೂ ಒಂದೇ ದೇವರು ಅಂತ ನೀವು ವಾದಿಸಬಹುದು. ಆದರೆ ಅವು ಎರಡು ಸಂಸ್ಕೃತಿಗಳು. ಒಬ್ಬರನ್ನೊಬ್ಬರಿಂದ replace ಮಾಡಬಾರದು. ಹಾಗೆಯೇ ಕಿರಾಳಮ್ಮ , ಅಣ್ಣಮ್ಮ ಮುಂತಾದವರು ಒಂದು ಸಂಸ್ಕತಿ ಮತ್ತು ಇವರನ್ನು ರಾಜರಾಜೇಶ್ವರಿಯಂತ ದೇವತೆಗಳಿಣ್ದ replace ಮಾಡದಿರಿ.

 

 

 

Rating
No votes yet

Comments