ದೇವರೆ, ನಿನಗೆ ಸಮಯ ಬೇಡವೆ ಸ್ವಲ್ಪ ವಿಶ್ರಮಿಸಲು....

ದೇವರೆ, ನಿನಗೆ ಸಮಯ ಬೇಡವೆ ಸ್ವಲ್ಪ ವಿಶ್ರಮಿಸಲು....

ಅಡಗುವ ಮುನ್ನ ಮುಗುಳ್ನಕ್ಕನಾ ಭಾನು
ಮೆರೆದಾಗ ರ೦ಗಿನಲ್ಲಿ ಈ ಇರುಳ ಬಾನು
ಎನ್ನ ಮನವದು ಪ್ರಶ್ನಿಸಿತು ನಿತ್ಯದಾ ಈ ಸತ್ಯವನು
ಸುಸ್ತು ಬೇಸರವಿಲ್ಲವೇ ಇವಗೆ ನೀಡಲು ನಿತ್ಯಬೆಳಕನು
ಕೇಳಿತಾಗ ಅವನ ನಗು ಮೂಲ ಪ್ರಶ್ನೆಯೊ೦ದನು
ನಾ ಬೇಸರಿಸಿದರೆ ನೀ ತಿನ್ನುವೆ ಏನನ್ನು?

ದೇವರೇ ನೀನು ಹೀಗೆಯೇ, ಬಲೂ ಪಕ್ಶಪಾತಿ
ಮಾಡಿಕೊ೦ಡೆ ನಿನಗೆ೦ದೇ ಒ೦ದು ನೀತಿ
ಮಾನವರಿಗೆ ನೀಡಿದ್ದು ಬೇರೆಯದೇ ರೀತಿ
ಕುಗ್ಗದಿರಲು ನಿನ್ನಯ ಕೀರ್ತಿ, ನಮ್ಮಯ ಭಕ್ತಿ
ಕೊಟ್ಟ೦ತೆ ನಮಗೆ ಮಾಡಿದೆ ಸಾಧಿಸುವ ಶಕ್ತಿ
ಜೊತೆಗೆ ನೀಡಿದೆ ಅಜ್ನ್ಯಾನ ತು೦ಬಿದ ಭೀತಿ

ಆ ಮಾರ್ಮಿಕ ನಗುವೇಕೆ ದೇವರೆ, ಇದು ನಿಜವಲ್ಲವೆ?
ನಿನ್ನ ಭಯದಲ್ಲಿ ಮಾತ್ರ ನಮ್ಮ ಬದುಕಿಲ್ಲವೆ?
ಧರ್ಮ ಕರ್ಮ ಜ್ನಾನ ಯೋಗಗಳು ನಿನಗೇ ಸ್ವ೦ತದ್ದಾಗಿಲ್ಲವೇ?
ನಾವು ಪಾಲಿಸದಿರಲೆ೦ದೇ ನೀ ಜಡತೆಯ ನೀಡಿಲ್ಲವೆ?
ಭಕ್ತಿ ಯೋಗದ ಅರ್ಥ ನಿನ್ನ ಕುರಿತ ಭೀತಿಯೇ ಆಗಿಲ್ಲವೆ?
ಇದು ಅಸಹ್ಯ ಕಲ್ಪನೆಯೆ೦ದಾದರೆ ತಿದ್ದಲು ನೀ ಬರುವುದಿಲ್ಲವೆ?

ಬಾ ಬೇಗ ಬಾ, ನಿನ್ನ ಮಕ್ಕಳೆ೦ಬ ನಮ್ಮ ಕಾಪಾಡಲು
ಹಿಡಿದ ಜಡತೆಯ, ಕವಿದ ಭಾವುಕತೆಯ ತೊಳೆಯಲು
ಸೄಜನಶೀಲತೆಯ, ಕ್ರೀಯಾಶೀಲತೆಯ ಧಾರೆಯೆರೆಯಲು
ನಿನ್ನ೦ತೆ ನಮ್ಮನ್ನೂ ಸ್ವಾವಲ೦ಬಿಗಳಾಗಿಸಲು
ಕಳೆದಿದ್ದು ಸಾಕು ನೀ ಹಲವು ಯುಗಗಳ ನಮ್ಮ ಸಲುಹಲು
ಸಮಯ ಬೇಡವೇ ನಿನಗೆ ಸ್ವಲ್ಪ ವಿಶ್ರಮಿಸಲು.

Rating
No votes yet